ಕಪ್ಪು ಜನಗಳು.. ನಾವು ಕಪ್ಪು ಜನಗಳು
ಕವನ
ಕಪ್ಪು ಜನಗಳು ನಾವು
ಕಪ್ಪು ಜನಗಳು..
ಕರಿಯೊಡಲ ಮಣ್ಣನ್ನು
ಅವ್ವ ಎನ್ನುವ ನಾವು..
ಕಪ್ಪು ಜನಗಳು..
ಹಸಿವೆಯನ್ನುಂಡವರು
ಜಗಕುಸಿರನಿತ್ತವರು..
ಮನದ ನೋವನು ಮನಕೆ
ಮರೆ ಮಾಡಿ ನಕ್ಕವರು..
ಕಪ್ಪು ಜನಗಳು ನಾವು..
ಕಪ್ಪು ರಕ್ತವನರಿಸಿ
ಧರೆಗಸಿರನಿತ್ತವರು..
ನೇಗಿಲಿಗೆ ಹೆಗಲೊಡ್ಡಿ
ರಕ್ಕಸರೆ ಆದವರು..
ಕಪ್ಪು ಜನಗಳು ನಾವು,,
ಗುಡಿಯೊಳಗೆ ಕಾಲಿಡದೆ
ನಿಮ್ಮನೆಯ ಗುಡಿಸುತಲಿ
ನಿಮ್ಮನೇ ದೇವರೆನ್ನುವ ನಾವು
ಕಪ್ಪು ಜನಗಳು..
ನಿಮ್ಮ, ಧಣಿ ಎನ್ನುತಲಿ
ನಮ್ಮ ಧನಿ ಬಿದ್ದಿದೆ
ತುಳಿಯದಿರಿ ನಮ್ಮನು ಓ ಬಿಳಿಯರೆ..
ಅವರು ಪರದೇಶಿಗಳು ನೀವು ಪರದ್ವೇಶಿಗಳು..
ತುಳಿಯದಿರಿ ನಮ್ಮನು ಓ ಬಿಳಿಯರೆ..
ಕಪ್ಪು ಜನಗಳು ನಾವು..
ಶಿಪ್ರಸಾದ್ ಶಹಾಪುರ ಎಸ್.ಪಿ.ಎಸ್
Comments
ಉ: ಕಪ್ಪು ಜನಗಳು.. ನಾವು ಕಪ್ಪು ಜನಗಳು
ಉ: ಕಪ್ಪು ಜನಗಳು.. ನಾವು ಕಪ್ಪು ಜನಗಳು
ಉ: ಕಪ್ಪು ಜನಗಳು.. ನಾವು ಕಪ್ಪು ಜನಗಳು