ಒಂದು ಅಪರೂಪದಲ್ಲಿ ಅಪರೂಪದ ವಿವಾಹ
ಮಿತ್ರ ಹರಿಹರಪುರ ಶ್ರೀಧರ್ ಪ್ರಕಟಿಸಿದ 'ಒಂದು ವೇದೋಕ್ತ ವಿವಾಹ'ದ ಲೇಖನಕ್ಕೆ ಪೂರಕವಾಗಿ ಈ ಬರಹ. ಈ ಅಪರೂಪದಲ್ಲಿ ಅಪರೂಪದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ ಸೌಭಾಗ್ಯ ನನ್ನದಾಗಿತ್ತು. ಇನ್ನಿತರ ವಿವಾಹದ ಸಂದರ್ಭಗಳಲ್ಲಿ ಮದುವೆಯ ಕಲಾಪಗಳು ಅದರ ಪಾಡಿಗೆ ನಡೆಯುತ್ತಿದ್ದು ಭಾಗವಹಿಸಿದವರು ಕೇವಲ ಹಾಜರಾತಿ, ಉಡುಗೊರೆ ನೀಡಿಕೆ, ಊಟ ಮಾಡಿಕೊಂಡು ಹೋಗುವುದು, ಮಿಕ್ಕ ಸಂದರ್ಭದಲ್ಲಿ ಗುಂಪುಕೂಡಿಕೊಂಡು ಹರಟೆಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ. ಆದರೆ ಈ ಮದುವೆಯ ಕಲಾಪಗಳನ್ನು ನಿಶ್ಶಬ್ದವಾಗಿ ಆಲಿಸಿದ್ಸಲ್ಲದೆ ಅಗತ್ಯದ ಸಂದರ್ಭಗಳಲ್ಲಿ ಒಪ್ಪಿಗೆ, ಅನುಮತಿ ರೂಪದ ಉದ್ಗಾರಗಳನ್ನು ಎಲ್ಲರೂ ಮಾಡುತ್ತಿದ್ದುದು ವಿಶೇಷವಾಗಿತ್ತು. ಹಾಗೆಂದು ಬಂದವರ ಸಂಖ್ಯೆ ಕಡಿಮೆಯೇನಾಗಿರಲಿಲ್ಲ. ವಿಶೇಷ ರೀತಿಯ ವಿವಾಹವನ್ನು ನೋಡುವ ಸಲುವಾಗಿಯೇ ಬಂದವರು, ಬಂಧು-ಮಿತರ್ರುಗಳ ಬಹು ದೊಡ್ಡ ಸಂಖ್ಯೆಯ ಉಪಸ್ಥಿತಿ ಅಲ್ಲಿತ್ತು. ಬಂದವರೆಲ್ಲರಿಗೆ ರುಚಿಕರ ಭೋಜನದೊಂದಿಗೆ 'ಬಾಳಿಗೆ ಕೈಗನ್ನಡಿ' ಎಂಬ ಪುಸ್ತಕವನ್ನು ತಾಂಬೂಲವಾಗಿ ನೀಡುವುದರ ಜೊತೆಗೆ ಕುಟುಂಬಕ್ಕೆ ಒಂದರಂತೆ ಔಷಧೀಯ ಗಿಡಗಳ ಸಸಿಗಳನ್ನೂ ಕೊಟ್ಟು ಪರಿಸರ ಪ್ರಜ್ಞೆಯನ್ನೂ ಮೆರೆಯಲಾಯಿತು. ಆ ಸಂದರ್ಭದಲ್ಲಿ ಸೆರೆ ಹಿಡಿದ ಕೆಲವು ದೃಷ್ಯಗಳಿವು: -ಕ.ವೆಂ.ನಾಗರಾಜ್.
ವಿವಾಹದ ಮಹತ್ವ ವಿವರಿಸುತ್ತಿರುವ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರು. ಆಸಕ್ತಿಯಿಂದ ಆಲಿಸುತ್ತಿರುವ ವಧೂವರರು ಮತ್ತು ಅವರ ಕುಟುಂಬದವರು.
ಪರಸ್ಪರ ಬದ್ಧತೆ ಘೋಷಿಸಿದ ವಧೂ ವರರು
ಲಾಜಾಹೋಮ - ಅರಳಿನಂತೆ ಜೀವನ ಅರಳಲಿ, ವಿಕಸಿತಗೊಳ್ಳಲಿ ಎಂದು ಹಾರೈಕೆ
ಸಪ್ತಪದಿ ವಿವರಣೆ ಕೇಳುತ್ತಾ ಸಪ್ತಪದಿ ತುಳಿಯಲು ಸಿದ್ಧರಾದರು ವಧೂವರರು
ಮಂಗಳನಿಧಿ ಸಮರ್ಪಣೆ: ಆರ್ಯಸಮಾಜ (ವೇದಪ್ರಚಾರ), ಓಂ ಶಾಂತಿಧಾಮ (ವೈದಿಕ ಗುರುಕುಲ), ರಾಷ್ಟ್ರೀಯ ಸ್ವಯಂಸೇವಕ ಸಂಘ (ಸಂಘಟನೆ), ಮಂಗಳ ಶಿಕ್ಷಣ ಸಮಿತಿ (ಶಿಕ್ಷಣ), ಭಾರತ್ ಸ್ವಾಭಿಮಾನ ಟ್ರಸ್ಟ್ (ಭ್ರಷ್ಟಾಚಾರದ ವಿರುದ್ಧದ ರಾಷ್ಟ್ರೀಯ ಆಂದೋಳನ)ಗಳನ್ನು ಪ್ರತಿನಿಧಿಸಿದ ಗಣ್ಯರುಗಳಿಗೆ (ಹಿಂಬದಿಯಲ್ಲಿ ಆಸೀನರಾದವರು) ಮಂಗಳನಿಧಿ ಅರ್ಪಿಸಲಾಯಿತು. ಶುಭಾಶೀರ್ವಾದ ಮಾಡಿದ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರನ್ನೂ ಚಿತ್ರದಲ್ಲಿ ಕಾಣಬಹುದು.
ಶ್ರೀಧರರ ಲೇಖನಕ್ಕೆ ಲಿಂಕ್:
Comments
ಉ: ಒಂದು ಅಪರೂಪದಲ್ಲಿ ಅಪರೂಪದ ವಿವಾಹ
In reply to ಉ: ಒಂದು ಅಪರೂಪದಲ್ಲಿ ಅಪರೂಪದ ವಿವಾಹ by Prakash Narasimhaiya
ಉ: ಒಂದು ಅಪರೂಪದಲ್ಲಿ ಅಪರೂಪದ ವಿವಾಹ
ಉ: ಒಂದು ಅಪರೂಪದಲ್ಲಿ ಅಪರೂಪದ ವಿವಾಹ
In reply to ಉ: ಒಂದು ಅಪರೂಪದಲ್ಲಿ ಅಪರೂಪದ ವಿವಾಹ by venkatb83
ಉ: ಒಂದು ಅಪರೂಪದಲ್ಲಿ ಅಪರೂಪದ ವಿವಾಹ
ಉ: ಒಂದು ಅಪರೂಪದಲ್ಲಿ ಅಪರೂಪದ ವಿವಾಹ
In reply to ಉ: ಒಂದು ಅಪರೂಪದಲ್ಲಿ ಅಪರೂಪದ ವಿವಾಹ by Chikku123
ಉ: ಒಂದು ಅಪರೂಪದಲ್ಲಿ ಅಪರೂಪದ ವಿವಾಹ