ಬಣ್ಣದ ಹೂಗಳು....

ಬಣ್ಣದ ಹೂಗಳು....

ಕವನ

ಹೊದಿಸಬೇಡಿ ನಿಮ್ಮೊಡಲ ಕುಡಿಗಳಿಗೆ

ಹಸಿ ಸುಳ್ಳಿನ, ಒತ್ತಡಗಳ ಹೊದಿಕೆ,

ಕಮರಿಹೋದಾವು ಆ ಕಗ್ಗತ್ತಲೆಯ 

ಬಿಸಿಗೆ........


ನಿರಾಶೆಯ ಕೂಪದಲಿ ನರಳಿಸಬೇಡಿ

ನೀವು ನರಳುವ ಹಾಗೇ,

ಬಿಟ್ಟು ಬಿಡಿ ತಮ್ಮಷ್ಟಕ್ಕೆ ಚಿಗುರೊಡೆದು

ಅರಳಿ ಆಸ್ವಾದಿಸಲು ತಮ್ಮ ತನವ..............


ಸೋಂಕಿಸಬೇಡಿ ಅವುಗಳಿಗೆ

ನಿಮ್ಮ ವಿವಿಧ ವೇಷಗಳ ಬಣ್ಣ,

ಇಲ್ಲವಾದರೇ ಅವು ಕೂಡಾ

ಹುಚ್ಚೆದ್ದು  ಕುಣಿದು ನಿಮ್ಮನ್ನೇ

ನುಂಗುವವು, ಹಗಲನ್ನು

ಇರುಳು ನುಂಗಿದಂತೇ........!!


 

Comments