ಸ್ವರ್ಗವೆ ಸೃಷ್ಟಿಯಾಯಿತು

ಸ್ವರ್ಗವೆ ಸೃಷ್ಟಿಯಾಯಿತು

ಬಾನು ಸುರಿಸಿದ ಅನಂತ  ಮುತ್ತುಗಳನು ಪೋಣಿಸಿ
ಹಸಿರು  ಸೀರೆಯಲಿ ಭುವಿಯು  ಸಂಭ್ರಮಿಸುತಿರಲು  
ಚಿಲಿಪಿಲಿ ನಾದ  ಜುಳು ಜುಳು ನಿನಾದವಿರಲು
ಪನ್ನೀರ  ಸಿಂಚನಗೈಯುತ್ತಾ  ತುಂಬಿ
ಧುಮುಕುತಾ  ಜಲಪಾತಗಳು  ಧಾರೆಯೆರೆಯಲು
ನವಿಲಿನ ನಾಟ್ಯ ತರುಲತೆಗಳ
ಲಾಸ್ಯ ಕಣ್ಮನಗಳಿಗೆ ರಸದೂಟವಾಗಲು
ಮೋಡ ಮಂಜಿನ ಪರದೆಗಳು  ಗಿರಿ ಶಿಖರಗಳನು
ಮಾಯವಾಗಿಸಿ  ಬಾನು ಭುವಿಯನು ಒಂದಾಗಿಸಲು
ಸ್ವರ್ಗವೆ ಸೃಷ್ಟಿಯಾಯಿತು  ಮಲೆನಾಡಿನಲಿ ಚೆಲುವು ತುಂಬಲು

Rating
No votes yet

Comments