ಬೆತ್ತಲು ಸೇವೆ ಮತ್ತು ದಿಗಂಬರ ಮುನಿಗಳು

ಬೆತ್ತಲು ಸೇವೆ ಮತ್ತು ದಿಗಂಬರ ಮುನಿಗಳು

Comments

ಬರಹ

"ಶೀಲ, ಸಚ್ಚಾರಿತ್ರ್ಯಗಳಂಥ ವಿಷಯಗಳೂ ಅಷ್ಟೇ. ನಗ್ನತೆ ಎಂಬುದು ಸಾಮಾನ್ಯೀಕರಿಸಿ ನೋಡಿದಾಗ ಅಶ್ಲೀಲ. ಆದರೆ ಕೆಲವು ರಿಲಿಜಿಯಸ್ ಆದ ನಂಬಿಕೆಗಳ ಸಂದರ್ಭದಲ್ಲಿ ಅಶ್ಲೀಲವಲ್ಲ. ಆದರೆ ರೀಲಿಜಿಯಸ್ ಆಗಿದ್ದಾಗಲೂ ಅದು ಅಶ್ಲೀಲ ಎಂದು ವಾದಿಸಿದ ಉದಾಹರಣೆಗಳೂ ಇವೆ. ಇತ್ತೀಚೆಗೆ ಕರ್ನಾಟಕದಲ್ಲಿಯೇ ಇದಕ್ಕೆ ಸಂಬಂಧಿಸಿದ ವಿವಾದ ಉಂಟಾಯಿತು. ದಿಗಂಬರ ಪಂಥದ ಜೈನ ಮುನಿಯೊಬ್ಬರ ಬಗ್ಗೆ ಮಂಗಳೂರಿನ ಸಂಪಾದಕರೊಬ್ಬರು ಒಂದು ಪ್ರಶ್ನೆ ಎತ್ತಿದ್ದರು. ಅವರ ತರ್ಕ ಇಷ್ಟೇ. ಬೆತ್ತಲೆ ಪೂಜೆ ಒಂದು ಧಾರ್ಮಿಕ ಕ್ರಿಯೆಯೇ ಆದರೂ ಅದನ್ನು ವಿರೋಧಿಸಲಾಗುತ್ತದೆ. ಆದರೆ ಜೈನ ಮುನಿಗಳು ಬೆತ್ತೆಲೆ ತಿರುಗಾಡುವುದು ಮಾತ್ರ ಹೇಗೆ ಪವಿತ್ರವಾಗುತ್ತದೆ. ಈ ಪ್ರಶ್ನೆಯನ್ನು ಎತ್ತಿದ್ದಕ್ಕೆ ಆ ಸಂಪಾದಕರು ಬಂಧನಕ್ಕೂ ಒಳಗಾಗಬೇಕಾಯಿತು. ಆದರೂ ಅವರೆತ್ತಿದ ಪ್ರಶ್ನೆ ಧಾರ್ಮಿಕ ಆಚರಣೆಗಳ ಬಗ್ಗೆ ಇರುವ ಎಕ್ಸ್ ಕ್ಲುಸಿವಿಸಂ ಅನ್ನೂ ಪ್ರಶ್ನಿಸುತ್ತಿತ್ತು ಎಂಬುದಂತೂ ನಿಜ. ಚಂದ್ರಗುತ್ತಿಯೆ ರೇಣುಕಾಂಬೆಗೆ ಹರಕೆ ಹೊತ್ತವರು ಒಂದು ಧಾರ್ಮಿಕ ಆಚರಣೆಯ ಭಾಗವಾಗಿ, ಭಕ್ತಿ ಪರವಶರಾಗಿಯೇ ಬೆತ್ತಲೆ ಸೇವೆ ನಡೆಸುತ್ತಾರೆ. ಇವರೆಲ್ಲಾ ಬಡವರು ಮತ್ತು ತಮ್ಮ ಆಚರಣೆಯನ್ನು ದೊಡ್ಡ ದೊಡ್ಡ ಅಧ್ಯಾತ್ಮಿಕ ಪದ ಪುಂಜಗಳಲ್ಲಿ ಸಮರ್ಥಿಸಿಕೊಳ್ಳುತ್ತಿಲ್ಲ ಅಷ್ಟೇ. ಇದೇ ಹೊತ್ತಿನಲ್ಲಿ ದಿಗಂಬರ ಪಂಥದ ಯತಿಗಳು ತಮ್ಮ ನಗ್ನತೆಗೆ ಅಧ್ಯಾತ್ಮದ ಆಯಾಮ ನೀಡುತ್ತಾರೆ.":Ismail

ಬೆತ್ತಲುಸೇವೆ ಒಂದು ಧಾರ್ಮಿಕ ಆಚರಣೆಯಾಗಿದ್ದರೂ,ಅದು ಒಂದು ಉತ್ಸವವಾಗಿ ಆಚರಣೆಯಲ್ಲಿತ್ತು.ದಿಗಂಬರ ಮುನಿಗಳು ವಸ್ತ್ರರಹಿತರಾಗಿರುವುದು ಒಂದು ದಿನದ ಉತ್ಸವವಾಗಿ ಅಲ್ಲ.ಇದು ಅವರ ಜೀವನ ವಿಧಾನ. ಇವೆರಡನ್ನೂ ಸಮೀಕರಿಸುವುದು ತರವಲ್ಲ.ನೀವೆನಂತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet