ಶೀಟಿ ಹೊಡೆಯೋದು.
ಶೀಟಿ ಹೊಡೆಯೋದು. ಬಸ್ಸಿನಿಂದ ಇಳಿಯುವಾಗ ತಡಮಾಡಿದ ಇಳಿವಯಸ್ಸಿನ ಮುದುಕಿಗೆ ಕಂಡಕ್ಟರ್ ಜೋರು ಮಾಡುತ್ತಾ " ಅದೆಷ್ಟು ಹೊತ್ತು ಇಳಿತಿಯಾ? ನಾನು ಶೀಟಿ ಹೊಡೆದದ್ದು ಕೇಳಲ್ಲಿಲ್ಲವೇನು? ಇಳಿ ಬೇಗ. " ಇಳಿದ ಮುದುಕಿ, ಕಂಡಕ್ಟರ್ನನ್ನು ದುರುಗುಟ್ಟಿ ನೋಡಿ " ಶೀಟಿ ಹೊಡೆದರೆ ತಿರುಗಿನೋಡೋ ಕಾಲಎಲ್ಲ ಆಗಲೇ ಮುಗಿದು ಹೋಯಿತು. ಈಗ ಏನಿದ್ದರು ಶೀಟಿ ಹೊಡೆಯೋದು ಅಷ್ಟೇ ಬಾಕಿ ಇರೋದು " ಎಂದು ತೋರು ಬೆರಳನ್ನು ಮೇಲಕ್ಕೆ ತೋರಿಸಿದಳು. ತನ್ನ ತಪ್ಪಿನ ಅರಿವಾಗಿದ್ದರು ಏನೂ ಮಾಡಲು ಸಾಧ್ಯವಿರಲಿಲ್ಲ, ಕಾಲ ಮಿಂಚಿ ಹೋಗಿತ್ತು. ಬಾಯಿಂದ ತಪ್ಪು ಮಾತು ಉದುರಿತ್ತು. ತಲೆ ತಗ್ಗಿಸಿ ರೈಟ್ .......ಎಂದು ಬಾಗಿಲು ಎಳೆದುಕೊಂಡ ಕಂಡಕ್ಟರ್.
Comments
ಉ: ಶೀಟಿ ಹೊಡೆಯೋದು.
In reply to ಉ: ಶೀಟಿ ಹೊಡೆಯೋದು. by Chikku123
ಉ: ಶೀಟಿ ಹೊಡೆಯೋದು.
ಉ: ಶೀಟಿ ಹೊಡೆಯೋದು.
In reply to ಉ: ಶೀಟಿ ಹೊಡೆಯೋದು. by kavinagaraj
ಉ: ಶೀಟಿ ಹೊಡೆಯೋದು.