ಅವಳಿಗಿದೆ, ಇವಳಿಗಿಲ್ಲ
ಅವಳಿಗಿದೆ, ಇವಳಿಗಿಲ್ಲ
ಎಲ್ಲವೂ ನನ್ನದಾಗಿ ಬಿಡಬೇಕೆನಿಸುತ್ತದೆ
ಈ ತೊಂಡೆ ಹಣ್ಣಿನ ತುಟಿ
ಅವಳಿಗಿದೆ, ಇವಳಿಗಿಲ್ಲ. ಅವಳು ಬೇಕು.
ಈ ಸಂಪಿಗೆಯ ಮೂಗು
ಇವಳಿಗಿದೆ ಅವಳಿಗಿಲ್ಲ. ಇವಳು ಬೇಕು.
ನಡೆದರೆ ಎದೆ ಝಲ್ ಎನಿಸುವ
ಸೊಂಟದ ಬಳುಕು, ಈ ಇಬ್ಬರಲ್ಲೂ ಕಾಣಿಸುತ್ತಿಲ್ಲ.
ಈ ಇಬ್ಬರ ನಡುವೆ ಬಂದು ನಿಂತಿರುವ ನೆರಳಿಗಿದೆ.
ಈ ನರಳಿನೊಡತಿ ಬೇಕು.
ಹಾಗೇ ಸ್ವಲ್ಪ ಕಣ್ಣು ಮೇಲೆತ್ತಿ ನೋಡಿದರೆ....
ಈ ನರಳಿನೊಡತಿಯ ಮುಖ ಶೂರ್ಪನಖಿಯದು !
ಛೇ, ಇರಲಿ ಇವಳೂ ಎಂದು,
ಕಣ್ಣು ಬೇರೆಲ್ಲೋ ಹೊರಳಿಸಿದರೆ...
ಮುರಿದು ಬೀಳಲು ಅಣಿಯಾಗಿರುವ
ಒಂದು ಗುಡಸಲಿನ ಪುಟ್ಟ ಖಿಡಕಿಯಲಿ,
ಕುಂಕುಮದ ಬೊಟ್ಟಿಟ್ಟ, ಕಣ್ಣಿಗೆ ಕಾಡಿಗೆಯಿಟ್ಟ,
ತುಟಿ ತೊಂಡೆಯಂತಿರುವ,
ಮೂಗು ಸಂಪಿಗೆಯಂತಿರುವ
ಮಂಗಳ ಗೌರಿಯ ಮುಖ..!
ಸಿಗಬಹುದು ಎಲ್ಲವೂ ಇವಳಲ್ಲಿ ಎಂದು
ಧಾವಿಸಿ ಬಂದು ಬಾಗಿಲು ಬಡೆದರೆ,
ತಡವಾಯಿತು ಬಾಗಿಲು ತೆಗೆಯಲು.
ಕಾಲುಗಳಿಲ್ಲದ ಮಂಗಳ ಗೌರಿ
ನಿಂತಿರುವಳೆದುರಿನಲಿ.
ಕಟ್ಟಿಗೆಯ ಕೋಲುಗಳನಿಟ್ಟು ಭುಜದಲಿ ಆಸರೆಗೆಂದು.
ಛೇ...ಎನ್ನಲಿಲ್ಲ ನಾನು ಈ ಸಲವೆಕೋ..
ಅರ್ಥವಾಗುತ್ತಿದೆ ಈಗ,
ಎಲ್ಲಿಯೂ ಎಲ್ಲವೂ ಪೂರ್ಣವಾಗಿಲ್ಲವೆಂದು.
ಈಗ ಇವಳೇ ಇರಲಿ ಎಂದೆ.
ಕೋಲುಗಳನು ಬದಿಗೆ ಸರಿಸಿ,
ನಾನೇ ಅವುಗಳ ಜಾಗ ತುಂಬಿದೆ.
ರಾಜೇಂದ್ರಕುಮಾರ್ ರಾಯಕೋಡಿ - Copyright©
Comments
ಉ: ಅವಳಿಗಿದೆ, ಇವಳಿಗಿಲ್ಲ
In reply to ಉ: ಅವಳಿಗಿದೆ, ಇವಳಿಗಿಲ್ಲ by gurudutt_r
ಉ: ಅವಳಿಗಿದೆ, ಇವಳಿಗಿಲ್ಲ
ಉ: ಅವಳಿಗಿದೆ, ಇವಳಿಗಿಲ್ಲ
In reply to ಉ: ಅವಳಿಗಿದೆ, ಇವಳಿಗಿಲ್ಲ by mmshaik
ಉ: ಅವಳಿಗಿದೆ, ಇವಳಿಗಿಲ್ಲ
ಉ: ಅವಳಿಗಿದೆ, ಇವಳಿಗಿಲ್ಲ
In reply to ಉ: ಅವಳಿಗಿದೆ, ಇವಳಿಗಿಲ್ಲ by Chikku123
ಉ: ಅವಳಿಗಿದೆ, ಇವಳಿಗಿಲ್ಲ
ಉ: ಅವಳಿಗಿದೆ, ಇವಳಿಗಿಲ್ಲ
In reply to ಉ: ಅವಳಿಗಿದೆ, ಇವಳಿಗಿಲ್ಲ by partha1059
ಉ: ಅವಳಿಗಿದೆ, ಇವಳಿಗಿಲ್ಲ
ಉ: ಅವಳಿಗಿದೆ, ಇವಳಿಗಿಲ್ಲ
In reply to ಉ: ಅವಳಿಗಿದೆ, ಇವಳಿಗಿಲ್ಲ by S.NAGARAJ
ಉ: ಅವಳಿಗಿದೆ, ಇವಳಿಗಿಲ್ಲ
ಉ: ಅವಳಿಗಿದೆ, ಇವಳಿಗಿಲ್ಲ
In reply to ಉ: ಅವಳಿಗಿದೆ, ಇವಳಿಗಿಲ್ಲ by Soumya Bhat
ಉ: ಅವಳಿಗಿದೆ, ಇವಳಿಗಿಲ್ಲ
ಉ: ಅವಳಿಗಿದೆ, ಇವಳಿಗಿಲ್ಲ
ಉ: ಅವಳಿಗಿದೆ, ಇವಳಿಗಿಲ್ಲ
ಉ: ಅವಳಿಗಿದೆ, ಇವಳಿಗಿಲ್ಲ
In reply to ಉ: ಅವಳಿಗಿದೆ, ಇವಳಿಗಿಲ್ಲ by nanjunda
ಉ: ಅವಳಿಗಿದೆ, ಇವಳಿಗಿಲ್ಲ
ಉ: ಅವಳಿಗಿದೆ, ಇವಳಿಗಿಲ್ಲ
In reply to ಉ: ಅವಳಿಗಿದೆ, ಇವಳಿಗಿಲ್ಲ by makara
ಉ: ಅವಳಿಗಿದೆ, ಇವಳಿಗಿಲ್ಲ
ಉ: ಅವಳಿಗಿದೆ, ಇವಳಿಗಿಲ್ಲ
In reply to ಉ: ಅವಳಿಗಿದೆ, ಇವಳಿಗಿಲ್ಲ by veena wadki
ಉ: ಅವಳಿಗಿದೆ, ಇವಳಿಗಿಲ್ಲ