ಸ್ವಾತಂತ್ರ್ಯ ಅಂದು ಇಂದು

ಸ್ವಾತಂತ್ರ್ಯ ಅಂದು ಇಂದು

ನೆಲ ಜಲ ಗಾಳಿಯನ್ನ ಕಸಿದುಕೊಂಡಿದ್ದ
ಪರಕೀಯರ ಆಕ್ರಮಣಕ್ಕೆ ನಲುಗಿದ್ದರವರು

ಬಂಧು ಬಾಂಧವ್ಯದ ಕೊಂಡಿಯ ಕಳಚಿ
ದೇಶಸೇವೆಗೆ ಪ್ರಾಣವನ್ನ ಮುಡಿಪಾಗಿಟ್ಟಿದ್ದರವರು 

ಜಾತಿ ಮತ ಭಾಷೆಯ ಹಂಗಿಲ್ಲದೆ
ಒಂದಾಗಿ ಹೋರಾಡಿದ್ದರವರು

ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ
ಧಾರೆಯೆರೆದಿದ್ದರವರು

ಅನ್ನ ನೀರು ಬಿಟ್ಟು
ಮಾತೃಭೂಮಿಗೆ ಮಡಿದಿದ್ದರವರು

ನರ ನಾಡಿ ನೆತ್ತರನು ಹೀರಿ
ನಂಬಿಕೆಯನ್ನ ಕಿತ್ತುಕೊಂಡಿದ್ದಾರಿವರು

ಭೂರಮೆಯ ಒಡಲನ್ನು ಬಕಾಸುರನಂತೆ ಬಗೆದು
ತಿನ್ನುತ್ತಿದ್ದಾರಿವರು

ಬಾರು ಪಬ್ಬುಗಳ ಮಬ್ಬುಗತ್ತಲಿನಲಿ
ತೇಲಿಹೋಗಿದ್ದಾರಿವರು

ಸಂಸ್ಕಾರ-ಸಂಸ್ಕೃತಿಗಳನ್ನ
ಬೀದಿಗೆಸೆದಿದ್ದಾರಿವರು

ಇಂದ್ರಿಯಗಳ ಹಿಡಿತವಿಲ್ಲದೆ ಅಬಲೆಯರ ಮಾನಾಪಹರಣ
ಮಾಡುವ ಕೀಚಕರಾಗಿದ್ದಾರಿವರು

ಈ ನೆಲದ ಪಾವಿತ್ರ್ಯತೆಗೆ
ಮಸಿ ಬಳಿಯುತ್ತಿದ್ದಾರಿವರು

Rating
No votes yet

Comments