ಅದೆಂಥಾ ದೇಶ ಪ್ರೇಮಿಗಳು ನಾವು
ನಮ್ಮ ಸೊಸೈಟಿ ಯಲ್ಲಿ ಬೆಳಿಗ್ಗೆ ಗಂಟೆ 9ಕ್ಕೆ ದ್ವಜ ಆರೋಹಣ ಜರುಗುವುದಾಗಿ ತಿಳಿಸಲಾಗಿತ್ತು. ಅದರಂತೆ ನಾನು 8.45ಕ್ಕೆ ನಮ್ಮ ಮೈದಾನಕ್ಕೆ ಬಂದು ಸೇರಿದ್ದೆ. ಆದರೆ ಅಲ್ಲಿ ದ್ವಜ ಆರೋಹಣ ನದೆಯುವ ಯಾವುದೇ ಸೂಚನೆ ಇರಲಿಲ್ಲ, ನನಗೆ ನಿರಾಶೆಯಾಗಿತ್ತು. ಸ್ವಾತಂತ್ರೋತ್ಸವವನ್ನು fb ನಲ್ಲಿ ಗ್ರೀಟಿಂಗ್ಸ್ ಹಂಚಿ ಆಚರಿಸುವುದಲ್ಲ ಅಂತ ವಾದಿಸುತ್ತಿದ್ದ ನನಗೆ ಈದಿನ ದ್ವಜ ಆರೋಹಣ ಒಂದರಲ್ಲಿ ಭಾಗಿ ಆಗಲು ಸಾದ್ಯವಾಗದೆ ಹೋಯಿತೆಂದು ಬೇಸರ ಪಟ್ಟೆ.
ಅದಕ್ಕೂ ಮಿಗಿಲಾಗಿ ನಾವು ಭಾರತೀಯರ ರೋಗ ಪೀಡಿತ ಮಾನಸಿಕ ನೆಲೆಯನ್ನು ಯೋಚಿಸಿ ನಾಚಿಕೆಪಟ್ಟೆ. ಯಾಕೆಂದರೆ, ಇದೆ ನನ್ನ ಸೊಸೈಟಿ ಯಲ್ಲಿ ಗಣರಾಜ್ಯದ ದಿನ ದ್ವಜ ಆರೋಹಣದಲ್ಲಿ ಭಾಗಿಯಾಗಲು ಬಂದಾಗ ಮುಜುಗರ ಎದುರಾಗಿತ್ತು ಒಂದೇ ಸ್ಥಳದಲ್ಲಿ ಮೂರು ದ್ವಜ ತಯಾರು ಮಾಡುತಿದ್ದರು . ಯಾಕೆ ಅಂತ ನನಗೆ ಆಗ ತಿಳಿಯಲಿಲ್ಲ. ಅಂತೂ ಮೂರು ದ್ವಜ ಬೇರೆಬೇರೆ ಸಮಯದಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದ ಹಾರಿಸಲಾಯಿತು. ಆ ಬಳಿಕ ನಾನು ಕಾರಣ ತಿಳಿದು ಕೊಂಡಾಗ ತೂ ಅಂತ ಉಗಿದು ಬಿಟ್ಟೆ. ಇಬ್ಬರು ವ್ಯಕ್ತಿಗಳ ಮದ್ಯೆ ಇದ್ದೆ ಜಗಳ ಕಾರಣ ಅಲ್ಲಿ ಎರಡು ದ್ವಜ ಹಾರಿಸಲಾಗಿತ್ತು, ಅಲ್ಲೇ ಇದ್ದ ರಾಜಕೀಯ ಪಕ್ಷ ದ ಜನ ಮೂರನೇ ದ್ವಜ ಹಾರಿಸಿದ್ದರು. ಗಣ ರಾಜ್ಯ ಎಂದು ಸಂತೋಷದಿಂದ ಆಚರಿಸುವ ದಿನವೇ ನಮ್ಮಲ್ಲಿ ಅನ್ಯೋನ್ಯತೆ ಇಲ್ಲ. ಬೇರೆ ಯಾರಿಗೋ ತೋರಿಸಲು ನಮ್ಮಲ್ಲಿ ದೇಶ ಪ್ರೇಮವು ಹುಟ್ಟುತ್ತದೆ!!, ಇಲ್ಲ್ಲವೇ ಇನ್ನೊಬ್ಬನಿಗೆ ಪೈಪೋಟಿ ನೀಡಲು ದೇಶ ಪ್ರೇಮ ತೋರಿಸುತ್ತೇವೆ.
ಇದೆ ರೀತಿಯ ದೇಶ ಪ್ರೇಮವನ್ನು ಇನ್ನೊದು ಸಂದರ್ಭದಲ್ಲಿ ನೋಡಿದ್ದೆ. ಅದು ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿ ನಡೆಯುತ್ತಿದ್ದ ಸಮಯ. ಭಾರತ ಮತ್ತು ಪಾಕಿಸ್ತಾನ್ ಮದ್ಯೆ ಸೆಮಿ ಫೈನಲ್ ಅಂದು. ಭಾರತ ಮತ್ತು ಪಾಕ್ ಮದ್ಯೆ ಬರುವ ಪಂದ್ಯಗಳು ಯುದ್ದದಂತಿರುತ್ತದೆ ಎಲ್ಲರಿಗೂ ಗೊತ್ತು. ಅತಿ ಹೆಚ್ಚು ವೀಕ್ಷಕರು ಇರುವ ಪಂದ್ಯವದು.
ನಾನು ನನ್ನ ಸ್ನೇಹಿತರು ಟಿವಿ ನಲ್ಲಿ ನೋಡುತ್ತಿದ್ದೆವು. ಪಂದ್ಯ ಆರಂಭಕ್ಕು ಮೊದಲು ಸಿಗರೇಟು, ಬೀಡ, ತಿನಿಸುಗಳನ್ನು ತಂದಿರಿಸಲು ಹೊರ ಬಂದಿದ್ದೆವು. ಅಲ್ಲೇ ಬಾರ್ ರೆಸ್ಟೋರಂಟ್ ಬಳಿ ಇದ್ದ ಅಂಗಡಿಯಿಂದ ಖರೀದಿಸುತ್ತಿದ್ದೆವು. ಬಾರ್ ಒಳಗೆ ಟಿವಿ ನಲ್ಲಿ ಕ್ರಿಕೆಟ್ ಓಡುತ್ತಿತ್ತು ನಾನು ಇಣುಕಿ ನೋಡುತ್ತಿದ್ದೆ. ಅಷ್ಟರಲ್ಲ್ಲಿ ರಾಷ್ಟ್ರ ಗೀತೆ ಆರಂಭ ವಾಗಿತ್ತು. ಅದು ಕೇಳಿ ಅಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ " ಬೇಂ####### (ಹಿಂದಿಯ ಅತಿ ಕೆಟ್ಟ ಶಬ್ದ) ಇದನ್ಯಾಕೆ ಹಾಕ್ತ ಇದ್ದಾರೆ ಈಗ" ಅಂತ ಬಾಯಿಗೆ ಬಂದಂತೆ ಮಾತಾಡುತ್ತಿದ್ದ. ಅದು ಕೇಳಿ ನನಗೆ ಅಲ್ಲಿರ ಲಾಗಲಿಲ್ಲ ಎಣ್ಣೆ ಹಾಕಿ ಮತ್ತಿನಲ್ಲ್ಲಿರುವ ಅವರಿಗೆ ದೇಶ, ದೇಶ ಪ್ರೇಮ ಯಾವುದು ಇಲ್ಲ ಅಂತ ರೂಮಿಗೆ ನಡೆದೆ. ಪಂದ್ಯ ಭಾರತ ಜಯಿಸಿತು ನಾವೆಲ್ಲಾ ಕುಶಿಯಲ್ಲಿ ರಸ್ತೆಗೆ ಬಂದಿದ್ದೆವು. ಮುಂಬೈ ನ ಬೀದಿಗಳು ಮತ್ತು ಆಕಾಶ ಸಿಡಿಮದ್ದಿನ ಶಬ್ದ ಮತ್ತು ಬೆಳಕಿನಿಂದ ಕುಣಿಯುತ್ತಿತ್ತು. ಅದೇ ಬಾರ್ ಬಳಿ ಬಂದಾಗ ಮೊದಲು ಕಂಡ ವ್ಯಕ್ತಿ ಗಳ ಗುಂಪು ಅಲ್ಲೇ ನಿಂತಿತ್ತು. ಈಗ ಅವರೆಲ್ಲ ಪೂರ್ತಿ ಅಮಲಿನಲ್ಲಿದ್ದರು. ಮತ್ತು ಭಾರತ ಗೆದ್ದ ಕುಶಿ ಅವರಲ್ಲೂ ಇತ್ತು ಕುಶಿಯಲ್ಲಿ ಕೂಗಾಡುತ್ತಿದ್ದರು. ಅವರಲ್ಲಿ ಈಗ ದೇಶ ಪ್ರೇಮ ಉಕ್ಕಿ ಹರಿಯುತಿತ್ತು! ರಾಷ್ಟ್ರ ಗೀತೆಗೆ ಅವಹೇಳನ ಮಾಡಿದವರು ಈಗ ದೇಶ ಪ್ರೆಮಿಗಲಾಗಿದ್ದರು. ಆದರೆ ಅದು ವಿವರ್ಯಾಸ ಮತ್ತು ವಿಚಿತ್ರ ಪ್ರೇಮ ವಾಗಿತ್ತು. ಯಾಕೆಂದರೆ ಅಲ್ಲಿ ಹಿಂದುಸ್ತಾನ್ ಜಿಂದಾಬಾದ್ ಅಂತ ಕೂಗುತ್ತಿರಲಿಲ್ಲ ಹೊರತು ಪಾಕಿಸ್ತಾನ್ ಮುರ್ದಾಬಾದ್ ಅಂತ ಕೂಗುತ್ತಿದ್ದರು. ಇದು ದೇಶ ಪ್ರೇಮವೋ ಇಲ್ಲ ಶತ್ರು ದೇಶ ದ್ವೇಷವೋ ತಿಳಿಯದಾಗುತಿತ್ತು.
ನಮ್ಮಲ್ಲಿ ಹೆಚ್ಚಿನವರ ದೇಶ ಪ್ರೇಮ ಹೀಗೆ ಇದೆ. ಶತ್ರುವಿನ ಮೇಲಿನ ದ್ವೆಶಕಾರಣ ಮಿತ್ರನ ಮೇಲಿನ ಸ್ನೇಹದ ತರ. ನಿಜವಾಗಲು ನಮ್ಮೊಳಗೇ ದೇಶ ಪ್ರೇಮ ಅನ್ನುವುದಿದೆಯಾ? ಗೊತ್ತಾಗುತ್ತಿಲ್ಲ.
ಅಂತು ಸ್ವಾತಂತ್ರ್ಯೋತ್ಸವದ ಬೆಳಗ್ಗೆ ನನಗೆ ನಿರಾಶೆ ಯಾಗಿತ್ತು, ಗಣರಾಜ್ಯೋತ್ಸವಕ್ಕೆ ಮೂರು ದ್ವಜ ಆರೋಹಣದಲ್ಲಿ ಭಾಗಿಯಾದ ನನಗೆ, ಇಂದು ಒಂದೇ ಒಂದು ದ್ವಜಕ್ಕೆ ಸಲ್ಯೂಟ್ ಮಾಡುವ ಭಾಗ್ಯ ಇರಲಿಲ್ಲ. ಆದರೆ ಹಾಗೆ ಬೀದಿಯಲ್ಲಿ ನಡೆದೆ ಎಲ್ಲಾದರೂ ಒಂದು ಕಡೆಯಾದರು ದ್ವಜಾರೋಹಣ ಸಿಗಬಹುದೆಂದು. ಅಗಲಷ್ಟೇ ಒಂದೊಂದು ಅಂಗಡಿಗಳು ತೆರೆಯುತ್ತಿತ್ತು, ಎಲ್ಲರ ಕೈಯಲ್ಲಿ ಒಂದು ದ್ವಜ ನೋಡಿ ಕುಶಿ ಯಾಗುತ್ತಿತ್ತು.
ಆದರೆ ನನಗೆ ಎಲ್ಲೂ ದ್ವಜ ಆರೋಹಣ ದಲಿ ಭಾಗಿ ಆಗುವ ಭಾಗ್ಯ ಸಿಗುವ ಸೂಚನೆ ಇರಲಿಲ್ಲ. ಶಾಲಾ ಮಕ್ಕಳು ಶಾಲೆಯಿಂದ ಮರಳಿ ಬರುತ್ತಿದ್ದರು. ಅದಾರು ಇನ್ನೂ ದೂರ ನಡೆದೆ, ದೂರದ್ದಲ್ಲಿ Holy Spirit Church ಮೈದಾನದಲ್ಲಿ. ಜನ ಸೇರಿದ್ದು ನೋಡಿದೆ. ಇವತ್ತು ಭುದವಾರ ಚರ್ಚ್ ನಲ್ಲಿ Mass ಇರಲು ಸಾದ್ಯತೆ ಇಲ್ಲ, So ಅದು ಸ್ವಾತಂತ್ರ್ಯೋತ್ಸವದ ಆಚರಣೆ ಅಂತ ಖಚಿತಪಡಿಸಿದೆ. ಯಾಕಂದರೆ ಅವರೂ ಭಾರತೀಯರು! ದೇಶಪ್ರೇಮಿಗಳು!.
ನಾನು ಆಕಡೆ ದೌಡಾಯಿಸಿದೆ. ಬಾವುಟ ಹಾರಿಸಿ ಯಾಗಿತ್ತು, ಆದರೂ ರಾಷ್ಟ ಗೀತೆ ಹಾಡಿ ಸಲ್ಯೂಟ್ ಮಾಡಿದಾಗ ಭಾರತೀಯನಾಗಿ ಹೆಮ್ಮೆಪಟ್ಟೆ
Comments
ಉ: ಅದೆಂಥಾ ದೇಶ ಪ್ರೇಮಿಗಳು ನಾವು
In reply to ಉ: ಅದೆಂಥಾ ದೇಶ ಪ್ರೇಮಿಗಳು ನಾವು by makara
ಉ: ಅದೆಂಥಾ ದೇಶ ಪ್ರೇಮಿಗಳು ನಾವು
In reply to ಉ: ಅದೆಂಥಾ ದೇಶ ಪ್ರೇಮಿಗಳು ನಾವು by rasheedgm
ಉ: ಅದೆಂಥಾ ದೇಶ ಪ್ರೇಮಿಗಳು ನಾವು
ಉ: ಅದೆಂಥಾ ದೇಶ ಪ್ರೇಮಿಗಳು ನಾವು
In reply to ಉ: ಅದೆಂಥಾ ದೇಶ ಪ್ರೇಮಿಗಳು ನಾವು by H A Patil
ಉ: ಅದೆಂಥಾ ದೇಶ ಪ್ರೇಮಿಗಳು ನಾವು
In reply to ಉ: ಅದೆಂಥಾ ದೇಶ ಪ್ರೇಮಿಗಳು ನಾವು by rasheedgm
ಉ: ಅದೆಂಥಾ ದೇಶ ಪ್ರೇಮಿಗಳು ನಾವು