ಆತ್ಮ ಸಾಹಸ !
ಕವನ
ಆತ್ಮ ನನ್ನ ಆತ್ಮ !
ಮಾಡಬೇಕು ಅದೆಷ್ಟು ಹರ ಸಾಹಸ
ನಿನ್ನೊಳಗೆ ಲೀನವಾಗಲು ಪರಮಾತ್ಮ !
ನೀನು ಅನಂತ ನಿತ್ಯ-ನೂತನ ಆನಂದ ಸವಿ
ನಾನು ರಾಗ-ದ್ವೇಷಗಳ ಬೇವು ಕಹಿ
ನೀನು ಅಮರ ಸಾಗರದ ಅಖಂಡ ಖನಿ
ನಾನು ಮದ-ಮೋಹ, ಮಾತ್ಸರ್ಯದ ಗಣಿ
ನೀನು ಆದಿ ಅಂತ್ಯವಿಲ್ಲದ ಚಿರ ಚೇತನ !
ನಾನು ವಿಕಲ್ಪ
ನೀನು ನಿರ್ವಿಕಲ್ಪ
ನೀನು ಜನನ-ಮರಣ ಕಾಲಚಕ್ರದಲಿ ನಿಲುಕದ ಸಿಂಧು
ನಾನು ಬದುಕು-ಸಾವಿನ ಸುಳಿವಿನಲಿ ಕೇಂದ್ರ ಬಿಂದು.
ಈ ಚಕ್ರವ್ಯೂಹ ಭೇಧಿಸಲು ಕೊಡು ಶಕ್ತಿ
ಸಾವೇ ಸಾವನಪ್ಪಿದ ಮೇಲೆ ಇನ್ನೆಲ್ಲಿಯ ಸಾವು
ಪಡೆಯುವುದು ಆತ್ಮ ಜೀವನ್ಮುಕ್ತಿ !
ಶ್ರೀನಾಗರಾಜ್.
Comments
ಉ: ಆತ್ಮ ಸಾಹಸ !
In reply to ಉ: ಆತ್ಮ ಸಾಹಸ ! by mmshaik
ಉ: ಆತ್ಮ ಸಾಹಸ !
In reply to ಉ: ಆತ್ಮ ಸಾಹಸ ! by makara
ಉ: ಆತ್ಮ ಸಾಹಸ !
In reply to ಉ: ಆತ್ಮ ಸಾಹಸ ! by mmshaik
ಉ: ಆತ್ಮ ಸಾಹಸ !
ಉ: ಆತ್ಮ ಸಾಹಸ !
In reply to ಉ: ಆತ್ಮ ಸಾಹಸ ! by Rajendra Kumar…
ಉ: ಆತ್ಮ ಸಾಹಸ !
In reply to ಉ: ಆತ್ಮ ಸಾಹಸ ! by dayanandac
ಉ: ಆತ್ಮ ಸಾಹಸ !
In reply to ಉ: ಆತ್ಮ ಸಾಹಸ ! by Rajendra Kumar…
ಉ: ಆತ್ಮ ಸಾಹಸ !