ಬೋರೇಗೌಡನ ಜಾಣತನ? ಜಮಾನಾದ ಜೋಕುಗಳು ೧೫

ಬೋರೇಗೌಡನ ಜಾಣತನ? ಜಮಾನಾದ ಜೋಕುಗಳು ೧೫

               ಬೋರೆ ಗೌಡ ಒಮ್ಮೆ ಮುಂಬಯಿ ಷಹರನ್ನು ನೋಡಲು ತನ್ನ ಸ್ನೇಹಿತನೊಡನೆ ಬಂದ. ಇವನು ಅಲ್ಲಿದ್ದ ದೊಡ್ಡ-ದೊಡ್ಡ ಕಟ್ಟಡಗಳನ್ನು ನೋಡುತ್ತಾ ತನ್ನ ಗೆಳೆಯನಿಗಿಂತ ಮುಂದೆ ಸಾಗಿ ಒಂದು ಬಹು ಅಂತಸ್ತಿನ ಕಟ್ಟಡವನ್ನು ನೋಡುತ್ತಾ ನಿಂತುಕೊಂಡ. ಇವನನ್ನು ಗಮನಿಸುತ್ತಿದ್ದ ಮುಂಬಯಿಯ ಕಿಲಾಡಿಯೊಬ್ಬ ಇವನ ಬಳಿಗೆ ಸಾಗಿ, "ಏಯ್! ಎಷ್ಟು ಅಂತಸ್ತು ನೋಡಿದಿ ಹೇಳು; ಒಂದೊಂದು ಅಂತಸ್ತಿಗೆ ಒಂದೊಂದು ರೂಪಾಯಿ ತೆಗಿ". ಬೋರೇಗೌಡ, "ನಾ...ನು, ನಾ....ನು, ನೋಡಿದ್ದು.... ಐದೇ ಅಂತಸ್ತು, ತಗೋ ಐದು ರೂಪಾಯಿ!" ಇವನ ಬಳಿ ಐದು ರೂಪಾಯಿ ಕಿತ್ತುಕೊಂಡವನೇ ಆ ಕಿಲಾಡಿ ಅಲ್ಲಿಂದ ಕಾಲ್ಕಿತ್ತ. ಸ್ವಲ್ಪ ದೂರದಲ್ಲಿ ಬರುತ್ತಿದ್ದ ಬೋರೇಗೌಡನ ಸ್ನೇಹಿತ ಇವನ ಸಮೀಪಕ್ಕೆ ಬಂದು ವಿಷಯವೇನೆಂದು ಕೇಳಿದ. ಬೋರೇಗೌಡ ಜಂಬದಿಂದ ಹೇಳತೊಡಗಿದ, "ನಾನು ಒಂಭತ್ತು ಅಂತಸ್ತು ನೋಡಿದ್ದೆ; ಆದರೆ ಅವನಿಗೆ ಬರೇ ಐದೇ ಅಂಥಾ ಸುಳ್ಳು ಹೇಳಿ ಐದು ರೂಪಾಯಿ ಮಾತ್ರ ಕೊಟ್ಟೆ" ಹೀಗೆ ನಮ್ಮ ಬುದ್ಧಿವಂತ ಬೋರೇಗೌಡ ನಾಲ್ಕು ರೂಪಾಯಿ ಉಳಿಸಿದ್ದ!

 
Rating
No votes yet

Comments