ಅಹಂಕಾರ
ಕವನ
ಕಷ್ಟಪಟ್ಟು ಕಟ್ಟಿದ್ದೆವು
ಮನೆಯೊಂದನು
ಅಂಗುಲ ಜಾಗಕ್ಕಾಗಿ ಕೆಡವಿಬಿಟ್ಟೆವು!
ಇಷ್ಟಪಟ್ಟು ಹಾಕಿದ್ದೆವು
ಜೋಕಾಲಿಯೊಂದನು
ಯಾರು ಮೊದಲೆಂಬ ಮಾತಿಗೆ ಹಗ್ಗ ಹರಿದೆವು!
ಬಣ್ಣ ತುಂಬಿ ಬಿಡಿಸಿದ್ದೆವು
ಚಿತ್ರವೊಂದನು
ಗೆರೆಯೊಂದಕ್ಕಾಗಿ ಮಸಿಚೆಲ್ಲಿ ಕೆಡಿಸಿಬಿಟ್ಟೆವು!
ಆಸೆಯಿಂದ ಕಂಡಿದ್ದೆವು
ಕನಸೊಂದನು
ಕೆಟ್ಟದೊಂದು ನನಸಿಗಾಗಿ ಕರಗಿಸಿ ಬಿಟ್ಟೆವು!
ಒಬ್ಬರಿಗೊಬ್ಬರು
ಪ್ರೀತಿಸಿದ್ದೆವು
ಗುಲಗಂಜಿ ಅಹಮ್ಮಿಗಾಗಿ ಅಷ್ಟೂ ಪ್ರೀತಿ ಕೊಂದು ಬಿಟ್ಟೆವು!
------------------------------------------------------
Comments
ಉ: ಅಹಂಕಾರ
ಉ: ಅಹಂಕಾರ
In reply to ಉ: ಅಹಂಕಾರ by nanjunda
ಉ: ಅಹಂಕಾರ
ಉ: ಅಹಂಕಾರ