ಮುಗ್ದ ನಗು

ಮುಗ್ದ ನಗು

 

 

ಅವರು ಸ್ನೇಹಿತರು. ಬಾನುವಾರ ಬೇಟಿಮಾಡಿದವರು ಏನೊ ಹೇಳುತ್ತಿದ್ದರು. ಅವರೊಂದು ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿದ್ದಾರೆ ಅವರ ಸ್ನೇಹಿತರಾದ ಡಾಕ್ಟರ್ ಒಬ್ಬರು ಆಯೋಜಿಸಿರುವುದು. ಅದೇನೊ ಆಂಟಿ ಟೊಬ್ಯಾಕೊ ಕ್ಯಾಂಪೇನ್ ಅಂತೆ. ಅಂದರೆ ತಂಬಾಕು ಸೇವನೆಯ ವಿರೋದಿ ಹೋರಾಟ. ಅದರ ಅಂಗವಾಗಿ ಶಾಲೆಗಳಿಗೆ ಬೇಟಿಕೊಡುವುದು ಮಕ್ಕಳಿಗೆ ತಿಳುವಳಿಕೆ ಹೇಳುವುದು ಇತ್ಯಾದಿ. ನಾನು ಕೇಳಿ ನಗುತ್ತಿದ್ದೆ. ಅವರಿಗೆ ನಗುವಿನ ಅರ್ಥವಾಯಿತೇನೊ
“ಸಾರ್ ನಾನು ಈಗ ಸಿಗರೇಟ್ ಸೇದುವುದು ಬಿಟ್ಟುಬಿಟ್ಟಿದ್ದೇನೆ. ಇಂತ ಕಾರ್ಯಕ್ರಮದಲ್ಲಿರುವಾಗ  ಆ ಕೆಲಸಕ್ಕೆ ಮನ ಒಪ್ಪಲಿಲ್ಲ ಅಲ್ಲದೆ ಒಂದು ಪ್ರಾಮಾಣಿಕತೆ ಇರಬೇಕಲ್ಲವೆ “ ಎಂದರು. ನನಗು ತುಂಬಾ ಸಂತಸ ಎನಿಸಿತು.
-------------------------------------------------
ರಾಮಕೃಷ್ಣರ ಕಾಲದಲ್ಲಿ ಅವರ ಬಳಿ ಒಬ್ಬಾಕೆ ಬಂದಳು ತನ್ನ ಚಿಕ್ಕ ಮಗುವಿನೊಡನೆ
“ಸ್ವಾಮಿ ಇವನು ತುಂಟ ತುಂಬಾ ಬೆಲ್ಲ ತಿನ್ನುತ್ತಾನೆ. ನೀವು ಒಮ್ಮೆ ಹೇಳಿ ಸಾಕು ಬಿಟ್ಟು ಬಿಡುತ್ತಾನೆ”
ರಾಮಕೃಷ್ಣರು ತುಸು ಯೋಚಿಸಿದರು ನಂತರ ನುಡಿದರು
“ಆಗಲಮ್ಮ ಹೇಳೋಣ ನೀನು ಒಂದು ಕೆಲಸಮಾಡು ಹದಿನೈದು ದಿನ ಬಿಟ್ಟು ಪುನಃ ಬಾ ಆಗ ಹೇಳಿ ಒಪ್ಪಿಸುತ್ತೇನೆ”
ಆಕೆ ಬೇಸರದಿಂದ ಹೋಗಿ ಹದಿನೈದು ದಿನಕ್ಕೆ ಪುನಃ ಬಂದಳು. ಆಗ ರಾಮಕೃಷ್ಣರು ಮಗುವನ್ನು ಕರೆದು
“ನೋಡು ಮಗು ಬೆಲ್ಲ ತುಂಬಾ ತಿನ್ನುವುದು ದೇಹಕ್ಕೆ ಒಳೆಯದಲ್ಲ ಬಿಟ್ಟು ಬಿಡು”
ಆ  ಮಗುವು ಆಗಲಿ ಒಂದು ಒಪ್ಪಿ ಹೊರಟು ಹೋಯಿತು.
ಅವರ ಶಿಷ್ಯರೊಬ್ಬರು ಆಕ್ಷೇಪಿಸಿದರು. ಈ ಮಾತನ್ನು ಅಂದೆ ಹೇಳಬಹುದಿತ್ತು. ಹದಿನೈದು ದಿನ ಬಿಟ್ಟು ಬರಲು ಹೇಳಿದ್ದು ಏಕೆ.
ಅವರು ನಗುತ್ತ ನುಡಿದರು
“ಅಂದು ಆಕೆ ಬಂದಾಗ ನನಗು ಬೆಲ್ಲ ತಿನ್ನುವ ಚಟವಿತ್ತು. ಹಾಗಿರಲು ಮಗುವಿಗೆ ಹೇಗೆ ಹೇಳಲಿ ನಾನು ಪ್ರಾಮಾಣಿಕನಾಗಿರದೆ ಮಗುವಿನಿಂದ ಹೇಗೆ ಅದನ್ನು ನಿರೀಕ್ಷಿಸಲಿ ಅದಕ್ಕಾಗಿ ನಾನು ಈ ಹದಿನೈದು ದಿನದಲ್ಲಿ ಬೆಲ್ಲ ತಿನ್ನುವದನ್ನು ಬಿಟ್ಟೆ”
======================================================
ನನ್ನ ಸ್ನೇಹಿತರು ಪುನಃ ಸಿಕ್ಕಿದ್ದರು. ಪುನಃ ಅದೇ ಮಾತು
ಏನೊ ಮಾತನಾಡುತ್ತ ಜೀಬಿನಿಂದ ಸಿಗರೇಟ್ ತೆಗೆದು ಬಾಯಿಗಿಟ್ಟರು. ನನಗೆ ನಗು “ಇದೇನು ಪುನಃ” ಕೇಳಿದೆ.
“ಎಷ್ಟು ಹೇಳಿದರು ನೀನು ಕೇಳಲ್ಲವಲ್ಲ, ಮಣ್ಣು ತಿನ್ನಬೇಡ ಮಗು “ ಎಂದು ತಾಯಿ ಪದೆ ಪದೆ ಗೋಳಾಡಿದರು, ಹೇಗೊ ಬಾಗಿಲ ಮರೆ ಸೇರಿ ಗೋಡೆಯನ್ನು ಕೆರೆದು ,  ಮಣ್ಣನ್ನು ಬಾಯಿಗಿಟ್ಟು ನಗುವ ಮಗುವಿನ ಮುಗ್ದ ನಗು.

ಚಿತ್ರಮೂಲ :  encrypted-tbn2.google.com/images

Rating
No votes yet

Comments