ಕಲ್ಲಕ್ಕ ಕಡಬುಕೊಟ್ಟರೆ.. . . . . .

ಕಲ್ಲಕ್ಕ ಕಡಬುಕೊಟ್ಟರೆ.. . . . . .

ನಿಮ್ಮ ಜೀವನದಲ್ಲಿ ಒಂದು ಮಗುವಿದ್ದರೆ ಅದನ್ನು ಪ್ರೀತಿಸಿ. ನಿಮಗೆ ಯಾರಾದರೂ ಹಿರಿಯರು ಗೊತ್ತಿದ್ದರೆ ಅವರೊಂದಿಗೆ ತಿಳುವಳಿಕೆ ಹೊಂದಿರಿ. ನಿಮಗೆ ಯಾರಾದರೂ ರೋಗಿಗಳು ಎದುರಾದರೆ ಅವರಿಗೆ ಸೌಖ್ಯ ನೀಡಿ, ಅಥವಾ ಅವನೋ ಅವಳೋ ಒಬ್ಬಂಟಿಯಾಗಿದ್ದರೆ ಅವರ ಜೊತೆಗಾಗಿ, ಮತ್ತು ಯಾರೋ ಅಶಕ್ತರು ನಿಮ್ಮ ದಾರಿಯಲ್ಲಿ ಬಂದರೆ ಅವರಿಗೆ ಶಕ್ತಿ ನೀಡಿ. ಶೈಶಾವಸ್ಥೆ, ಮುಪ್ಪು, ಖಾಯಿಲೆ, ಒಂಟಿತನ ಮತ್ತು ನಿಶ್ಶಕ್ತತೆ ಎಲ್ಲವೂ ಅಥವಾ ಒಂದಿಲ್ಲ ಒಂದು ದಿನ ನಿಮಗೂ ಬಂದೇ ಬರುತ್ತವೆ. ಮತ್ತು ಆಗ ನಿಮಗೆ ಪ್ರೀತಿ, ತಿಳುವಳಿಕೆ, ಸೌಖ್ಯತೆ, ಜೊತೆ ಮತ್ತು ಶಕ್ತಿಯ ಅವಶ್ಯಕತೆ ಬೀಳುತ್ತದೆ. ಯಾರಿಗೆ ಇವುಗಳ ಅವಶ್ಯಕತೆ ಇದೆಯೋ ಅವರಿಗೆ ನೀವು ಇವುಗಳನ್ನು ಈಗ ನೀಡಿ. ಮತ್ತು ಮುಂದೆ ನಿಮಗೆ ಅವುಗಳ ಆವಶ್ಯಕತೆ ಬಿದ್ದಾಗ ಜರೂರ್ ನೀವು ಇವುಗಳನ್ನು ಮರಳಿ ಪಡೆಯುತ್ತೀರಿ. ಇದೊಂದು ಬ್ಯಾಂಕಿನಲ್ಲಿನ ಠೇವಣಿ ಇದ್ದಂತೆ, ಬಡ್ಡಿ ಸಮೇತ ಮರಳಿ ಬರುತ್ತದೆ,ಖಾತ್ರಿಯಾಗಿ. ಕೊಡ-ಕೊಳ್ಳುವುದು ಇದು ಪ್ರಕೃತಿಯ ನಿಯಮವೂ ಕೂಡ. ಕಲ್ಲಕ್ಕ ಕಡಬುಕೊಟ್ಟರೆ ಮಲ್ಲಕ್ಕ ಮಸಾಲೆ ದೋಸೆ ಕೊಡುತ್ತಾಳೆ. . . . .ನೆನಪಿಡಿ
Rating
No votes yet

Comments