ಸುಮ್ಮನೇ ಕೆಲವು ಐತಿಹಾಸಿಕ ವಿಷಯದ ಬಗ್ಗೆ ಕುತೂಹಲ
ಬರಹ
ಸುಮ್ಮನೇ ಒಂದು ಇತಿಹಾಸದತ್ತ -
ಭಾರದ್ವಾಜ ಋಷಿಗಳು ಗೋದಾವರಿ ನದಿಯ ದಂಡೆಯಲ್ಲಿ ಆಶ್ರಮಹೊಂದಿದ್ದರು. ಇವರ ಹೆಂಡತಿಯ ಹೆಸರು ಪೈಥೀನಸಿ,
ಇವರ ಮಗಳು ವಿಶ್ರವನ ಮೊದಲ ಹೆಂಡತಿ. ಇವರಿಬ್ಬರಿಗೆ ಮಗ ಕುಬೇರ, ಅಂದರೆ ಭಾರದ್ವಾಜರು ಕುಬೇರನ ಅಜ್ಜ. ಈ ವಿಶ್ರವಗೆ ಇನ್ನೊಬ್ಬ ಮಗ ರಾವಣ. ಈ ರಾವಣನ ತಾಯಿ ಕೈಸಾಕಿ. ಅಂದರೆ ಈ ರಾವಣ ಕುಬೇರನ ಮಲ-ಅಣ್ಣ. ರಾವಣ ತನ್ನ ಮಲತಮ್ಮ ಕುಬೇರನನ್ನು ಸೋಲಿಸಿ ಇವನ ಪುಷ್ಪಕ ವಿಮಾನವನ್ನೂ ಲಂಕೆಯನ್ನೂ ಸ್ವಾಧೀನಪಡಿಸಿಕೊಂಡಿದ್ದ. ಇದಕ್ಕೆ ಕಾರಣ ಇವಳ ತಾಯಿ ಕೈಸಾಕಿಯ ದುಷ್ಟ ಬುದ್ಧಿ, ಈ ಕೈಸಾಕಿ, ರಾಕ್ಷಸ ರಾಜ ಸುಮಾಲಿಯ ಮಗಳು. ಈ ಸುಮಾಲಿ, ಒಂದು ದಿನ ಕುಬೇರ ತನ್ನ ಪುಷ್ಪಕ ವಿಮಾನದಲ್ಲಿ ಹಾರಿಹೋಗುವಾಗ ನೋಡಿ ಇಂತಹದೇ ಮಗ ತನ್ನ ಮಗಳಾದ ಕೈಸಾಕಿಗೆ ಹುಟ್ಟಿ ಪ್ರಥ್ವಿಯನ್ನು ಆಳಲಿ ಎಂಬ ಉದ್ದೇಶದಿಂದ ತನ್ನ ಮಗಳಾದ ಕೈಸಾಕಿಯನ್ನು ವಿಶ್ರವಮುನಿಯ ಕಡೆಗೆ ಕಳಿಸಿಕೊಡುತ್ತಾನೆ ಮತ್ತು ಮೊಮ್ಮಗನಿಗಾಗಿ ದುಂಬಾಲು ಬೀಳುತ್ತಾನೆ. ಹೀಗಾಗಿ ಪುರುಸೊತ್ತಿಲ್ಲದ ಕೈಸಾಕಿ ದುರ್ಮುಹೂರ್ತದಲ್ಲಿ ವಿಶ್ರವನ ಸಂಗಮಾಡುತ್ತಾಳೆ. ಇದರ ಪರಿಣಾಮವಾಗಿ ವಿನಾಶಕಾರಿ ಮಗುವಿನ ಜನ್ಮವಾಗುತ್ತದೆ ಎಂದು ವಿಶ್ರವ ಹೇಳುತ್ತಾನೆ. ಅದರಂತೆ ರಾವಣ ಹುಟ್ಟಿ ತಂದೆಯ ಮಾತನ್ನು ಉಳಿಸಿದ. ಈ ವಿಶ್ರವನ ತಂದೆ ಪುಲಸ್ತ್ಯ. ಈ ಪುಲಸ್ತ್ಯ, ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬ, ಇವನು ಬ್ರಹ್ಮನ ಕಿವಿಯಿಂದ ಹುಟ್ಟಿದ್ದ ಮತ್ತು ಬ್ರಹ್ಮ ಇವರೆಲ್ಲರನ್ನೂ ಸೃಷ್ಟಿಕ್ರಿಯೆ ಮಾಡೆಂದು ಒತ್ತಾಯಿಸುತ್ತಿದ್ದ. ಪುಲಸ್ತ್ಯನ ಹೆಂಡತಿ ತೃಣಬಿಂದುವಿನ ಮಗಳು. ಹೀಗಾಗಿಯೇ ಬ್ರಹ್ಮ ರಾವಣನ ಮುತ್ತಜ್ಜ.
ಈ ಕುಬೇರನಿಗೊಬ್ಬ ಮಗನಿದ್ದ ಅವನ ಹೆಸರು ನಲಕುವರ. ಈ ನಲಕುವರನ ಹೆಂಡತಿ ರಂಭೆ. ಇವಳು ಇಂದ್ರನ ಆಸ್ಥಾನದ ಸದಸ್ಯೆ. (ಈ ನಲಕುವರನ ಬಗ್ಗೆ ಇನ್ನೊಮ್ಮೆ ಬರೆಯಬೇಕು).
ಮೇಲೆ ಹೇಳಿದ ಭಾರದ್ವಾಜರಿಗೆ ಯವಕ್ರೀಡಾ ಎಂಬ ಮಗನಿದ್ದ. ಈ ಯುವಕ್ರೀಡ ವೇದಪಾರಂಗತನಾಗಲು ಹವಣಿಸುತ್ತಿದ್ದನಂತೆ. ದ್ರೋಣರೂ ಇವರ ಮಗನೆಂದು ಓದಿದ್ದ ನೆನಪು. ಈ ದ್ರೋಣ ಕೃಪಾಚಾರ್ಯರ ಮಗಳನ್ನು ಲಗ್ನಮಾಡಿಕೊಂಡಿದ್ದ. ಇವರಿಗೆ ಮಗ ಅಶ್ವತ್ಥಾಮ. ಈ ಕೃಪಾಚಾರ್ಯ ಗೌತುಮ ಋಷಿಗಳ ಮಗ.
ನಾನೂ ನಿಮ್ಮಂತೆಯೇ ಗಲಿಬಿಲಿಗೊಂಡಿದ್ದೇನೆ.ಮತ್ತು ಋಷಿಗಳ ಮೂಲದ ಬಗ್ಗೆ ಹೆಚ್ಚು ತಿಳಿಯಲು ಪ್ರಯತ್ನ ಪಡುತ್ತಿದ್ದೇನೆ.
ನನ್ನ ಈ ಸಂಗ್ರಹಣೆ ಕದಾಚಿತ್ ತಪ್ಪಿರಲೂ ಬಹುದು, ಬಲ್ಲವರು ಇದನ್ನು ಸರಿಪಡಿಸಿ ನಮ್ಮಂಥ ಇತಿಹಾಸ ಪಿಪಾಸುಗಳಿಗೆ ತಿಳಿಸಲಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸುಮ್ಮನೇ ಕೆಲವು ಐತಿಹಾಸಿಕ ವಿಷಯದ ಬಗ್ಗೆ ಕುತೂಹಲ
In reply to ಉ: ಸುಮ್ಮನೇ ಕೆಲವು ಐತಿಹಾಸಿಕ ವಿಷಯದ ಬಗ್ಗೆ ಕುತೂಹಲ by prithvirajsm
ಉ: ಸುಮ್ಮನೇ ಕೆಲವು ಐತಿಹಾಸಿಕ ವಿಷಯದ ಬಗ್ಗೆ ಕುತೂಹಲ
ಉ: ಸುಮ್ಮನೇ ಕೆಲವು ಐತಿಹಾಸಿಕ ವಿಷಯದ ಬಗ್ಗೆ ಕುತೂಹಲ
In reply to ಉ: ಸುಮ್ಮನೇ ಕೆಲವು ಐತಿಹಾಸಿಕ ವಿಷಯದ ಬಗ್ಗೆ ಕುತೂಹಲ by ಆರ್ ಕೆ ದಿವಾಕರ
ಉ: ಸುಮ್ಮನೇ ಕೆಲವು ಐತಿಹಾಸಿಕ ವಿಷಯದ ಬಗ್ಗೆ ಕುತೂಹಲ
In reply to ಉ: ಸುಮ್ಮನೇ ಕೆಲವು ಐತಿಹಾಸಿಕ ವಿಷಯದ ಬಗ್ಗೆ ಕುತೂಹಲ by Krishna Kulkarni
ಉ: ಸುಮ್ಮನೇ ಕೆಲವು ಐತಿಹಾಸಿಕ ವಿಷಯದ ಬಗ್ಗೆ ಕುತೂಹಲ