ಶಬ್ದಗಳು

ಶಬ್ದಗಳು

ಕವನ

ಶಬ್ದಗಳು:

ಮನಸುಗಳ ಮುರಿದವು

ಮನೆಗಳ ಒಡೆದವು

 

ಕಾಡುಗಳ ಕಡಿದವು

ನಾಡುಗಳ ಕಟ್ಟಿದವು

 

ಭಾಷೆಗಳಾಗಿ ಬಡಿದಾಡಿದವು

ದೇಶಗಳ ಗಡಿಗಳಾದವು

 

ಮೃಗಗಳ ಮಾಯ ಮಾಡಿದವು

ಮನುಷ್ಯರ ಮೃಗಗಳಾಗಿಸಿದವು

 

ಮೌನವ ಮಾತಾಗಿಸಿದವು

ಧ್ಯಾನವ ಗದ್ದಲವಾಗಿಸಿದವು

 

ಶಬ್ದಗಳು ಶಸ್ತ್ರಗಳಾದವು

ಅಹಂಕಾರಿಗಳ ಅಸ್ತ್ರಗಳಾದವು!

------------------------------

 

Comments