ಸಾವು

ಸಾವು

ಕವನ

 ನಮಗೆ ಗೊತ್ತಿದೆ

ನಮ್ಮ ಜನನ ಆಕಸ್ಮಿಕ

ಬದುಕು ಹಲವು ತಿರುವುಗಳ 

ಆಘಾತಗಳ ನಡುವಿನ ಆಕಸ್ಮಿಕ

ಸಾವು ಮಾತ್ರ ನಿಶ್ಚಿತ-

ಆದರೆ ಅದೂ ಆಕಸ್ಮಿಕವಾಗಿಯೇ 

ಬಂದೆರಗುವ ಸಾಧ್ಯತೆ

ವರವೋ ಶಾಪವೋ ಅರಿಯೆ

ತಿಳಿಯದಿರುವಿಕೆಯೇ ನಮ್ಮ ನಿಶ್ಚಿಂತೆಗಾಧಾರ

ನಮ್ಮ ಆತಂಕಕ್ಕೆ,ಜಗಳಕ್ಕೆ,ಒಲವು-ವೈಮನಸ್ಸುಗಳಿಗೆ

ಮತ್ತು ನಿರುಮ್ಮಳತೆಗೆ-ಸಂವೇದನಾಶೀಲತೆಗೆ!

ಗೊತ್ತಿದ್ದೂ ಗೊತ್ತಿಲ್ಲದಿರುವಿಕೆ

ನಮ್ಮ ಬೆನ್ನನ್ನು ನಾವೇ

ತಟ್ಟಿಕೊಳ್ಳುತ್ತೇವೆ,ಚಿವುಟುತ್ತೇವೆ

ಅಳುತ್ತೇವೆ,

ವಿಚಿತ್ರವಾಗಿ ನಗುತ್ತೇವೆ! 

Comments