ಪಾಂಡವರ ಗುಹೆ..
ಇದು ಪಾಂಡವರ ಗುಹೆಯ ಚಿತ್ರ. ಒಂದೇ ತರಹದ ಎರಡು ಗುಹೆಗಳು ಇದೆ. "ಬಹುಷಃ ನಕುಲ, ಸಹದೇವರದಿರಬೇಕು. :) ಭೀಮಾರ್ಜುನರು ಇದರೊಳಗೆ ಇರಲು ಸಾಧ್ಯಾನಾ?" ಅಂತ ಯೋಚಿಸಿ ಸುತ್ತಲೂ ಬೇರೆ ಗುಹೆಗಳಿಗಾಗಿ ಹುಡುಕಿದೆ. ದೈವಸ್ಥಾನಗಳು ಮತ್ತು ಕೆಲ ವಿಗ್ರಹಗಳು ಇದ್ದವು ಆಷ್ಟೇ. ಗುಹೆಯ ಸಮೀಪವೇ ಇದ್ದ ಶಾಸನವನ್ನು ಓದಲು ಪ್ರಯತ್ನಿಸಿದೆ..
ಅರ್ಥ ಆಗಲಿಲ್ಲ :(
ಗುಹೆಯೊಳಗೆ ಸಾಧ್ಯವಾದಷ್ಟು ಹೋಗಲು ಪ್ರಯತ್ನಿಸೋಣ ಎಂದು ಮೊಬೈಲ್ ಬೆಳಕಲ್ಲಿ ಒಳಹೋಗಲು ಪ್ರಯತ್ನಿಸಿದೆ. ಹೊರಗಿನಿಂದ ಯಾರೋ "ಹಾವು ಚೇಳು ಇದ್ದೀತು.." ಅಂದರು.. ಮಧ್ಯಮ ಪಾಂಡವನ ಬಾಣದಷ್ಟೇ ವೇಗವಾಗಿ ಹಿಂದೆ ಬಂದೆ- ಅಂದ ಮೇಲೆ ಇದು ಪಾಂಡವರ ಗುಹೆಯೇ ಇರಬೇಕು. :)
ಮಳೆ ಬರುವ ಅಂದಾಜಿದ್ದುದರಿಂದ ಬೇಗನೆ ಗುಡ್ಡವಿಳಿದು ಬಂದೆ.(ಗುಡ್ಡ ಅಂದಾಗ ಚಾರಣ ಅಂತ ಹೊರಡಬೇಡಿ. ಒಂದೈವತ್ತು ಮೆಟ್ಟಲಿರಬಹುದಷ್ಟೇ. ಆದರೆ ಆ ಊರಿನಲ್ಲಿ ಅದು ಅತ್ಯಂತ ಎತ್ತರದ ಪ್ರದೇಶ.) ಕೆಳಗೆ ಬರುವಾಗ ಎಡ ಪಕ್ಕದಲ್ಲಿ "ಆಂಜನೇಯ"ನ ದೊಡ್ಡ ವಿಗ್ರಹವಿದೆ.
ಈ ಸ್ಥಳಕ್ಕೆ ನಾನು ಹಿಂದೆ ಐದಾರು ಬಾರಿ ಬಂದಿದ್ದರೂ ಮೇಲಿನ ಪಾಂಡವರ ಗುಹೆ ನೋಡಿರಲಿಲ್ಲ. ಕಾರಣ- ಈ ಕೆರೆಗಳು. ಆಳ ಜಾಸ್ತಿ ಇಲ್ಲ. ಮಕ್ಕಳನ್ನು ಕರಕೊಂಡು ಬಂದು ಆರಾಮ ನೀರಲ್ಲಿ ಈಜಿಸಬಹುದು.
ಕೆರೆಯ ಪಕ್ಕದಲ್ಲಿ ಸ್ವಲ್ಪ ಮೆಟ್ಟಲು ಹತ್ತಿದರೆ (ಕಾಶಿಯಿಂದಲೇ) ಸದಾ ಹರಿಯುತ್ತಿರುವ ನೀರು ಗಣಪತಿ ವಿಗ್ರಹದ ಸಮೀಪದಲ್ಲಿದೆ. ಆ ನೀರನ್ನು ಪ್ಲಾಸ್ಟಿಕ್ ಮಗ್‌ನಲ್ಲಿ ತುಂಬಿಸಿ ಕೊಡುವರು. ಅದನ್ನು ತೆಗೆದುಕೊಂಡು, ಅದಕ್ಕೂ ಸ್ವಲ್ಪ ಮೇಲಿರುವ "ಶಿವಲಿಂಗಕ್ಕೆ ನೀವೇ ಅಭಿಷೇಕ ಮಾಡಿ, ಲಿಂಗವನ್ನು ಮುಟ್ಟಿ ತೊಳೆಯಬಹುದು"
ಶಿವಭಕ್ತಿಯಲ್ಲಿ ತನ್ಮಯರಾಗಬೇಡಿ. ನಾವಿನ್ನೂ ಮುಖ್ಯ ದೇವಸ್ಥಾನಕ್ಕೆ ಹೋಗೇ ಇಲ್ಲಾ.. ಈ ಚಿತ್ರ ಅಭಿಷೇಕ ಮಾಡಿದ ಶಿವಲಿಂಗದ ಸಮೀಪದಿಂದ ಮುಖ್ಯ ದೇವಸ್ಥಾನದ ಫೋಟೋ-
ಅಂದಹಾಗೇ ನಾನು ಈ ದೇವಸ್ಥಾನದ ಹೆಸರೇ ಹೇಳಿಲ್ಲ ಅಲ್ಲವಾ?
"ಧರ್ಮಸ್ಥಳದ ಮಂಜುನಾಥ"..
ದೇವಸ್ಥಾನ ಎಲ್ಲರಿಗೂ ಗೊತ್ತಿದದ್ದೇ. ಅಲ್ಲಿಗೆ ಮಂಜುನಾಥ ಹೇಗೆ ಬಂದ? ಆ ಕತೆಯನ್ನು ಇಲ್ಲಿ ಓದಿ- http://kn.wikipedia.org/wiki/%E0%B2%A7%E0%B2%B0%E0%B3%8D%E0%B2%AE%E0%B2%B8%E0%B3%8D%E0%B2%A5%E0%B2%B3
ಅದೇ ಕದ್ರಿ ದೇವಸ್ಥಾನವೇ ಇದು. ಮಂಗಳೂರಿನ ಕೇಂದ್ರಸ್ಥಳದಲ್ಲಿದೆ. ಈ ದೇವಸ್ಥಾನದ ಒಳ ಹೋಗೋಣವಾ? ಅದರ ಮೊದಲು ಇದರ ಬಗ್ಗೆ ತಿಳಕೊಳ್ಳಬೇಕಾದದ್ದು ಬಹಳ ಬಹಳ ಬಹಳವಿದೆ.. ನಾನು ಹೇಳುವುದಕ್ಕಿಂತ ತಿಳಿದವರೇ ಹೇಳಿದರೆ ಚಂದ ಅಲ್ಲವಾ? ಓದಿ.. http://www.megamedianews.in/16.02.09KadriTemple.htm
http://www.kamat.com/jyotsna/blog/blog.php?BlogID=1450
http://www.harekrsna.com/sun/features/09-09/features1490.htm
ಮುಂದಿನ ಬಾರಿ ಧರ್ಮಸ್ಥಳ, ಮಂಗಳೂರು,ಉಡುಪಿ..ಹೀಗೆ ದಕ್ಷಿಣ ಕನ್ನಡದ ಟೂರ್ ಹೊರಟಾಗ, ಕದ್ರಿಯನ್ನು ನೋಡಲು ಮರೆಯದಿರಿ.
-ಗಣೇಶ.
Comments
ಉ: ಪಾಂಡವರ ಗುಹೆ..
In reply to ಉ: ಪಾಂಡವರ ಗುಹೆ.. by vidyakumargv
ಉ: ಪಾಂಡವರ ಗುಹೆ..
ಉ: ಪಾಂಡವರ ಗುಹೆ..
In reply to ಉ: ಪಾಂಡವರ ಗುಹೆ.. by nkumar
ಉ: ಪಾಂಡವರ ಗುಹೆ..
ಉ: ಪಾಂಡವರ ಗುಹೆ..
In reply to ಉ: ಪಾಂಡವರ ಗುಹೆ.. by H A Patil
ಉ: ಪಾಂಡವರ ಗುಹೆ..
ಉ: ಪಾಂಡವರ ಗುಹೆ..
In reply to ಉ: ಪಾಂಡವರ ಗುಹೆ.. by sathishnasa
ಉ: ಪಾಂಡವರ ಗುಹೆ..
In reply to ಉ: ಪಾಂಡವರ ಗುಹೆ.. by ಗಣೇಶ
ಉ: ಪಾಂಡವರ ಗುಹೆ..
In reply to ಉ: ಪಾಂಡವರ ಗುಹೆ.. by Shreekar
ಉ: ಪಾಂಡವರ ಗುಹೆ..
ಉ: ಪಾಂಡವರ ಗುಹೆ..
In reply to ಉ: ಪಾಂಡವರ ಗುಹೆ.. by Chikku123
ಉ: ಪಾಂಡವರ ಗುಹೆ..
ಉ: ಪಾಂಡವರ ಗುಹೆ..
In reply to ಉ: ಪಾಂಡವರ ಗುಹೆ.. by kavinagaraj
ಉ: ಪಾಂಡವರ ಗುಹೆ..
In reply to ಉ: ಪಾಂಡವರ ಗುಹೆ.. by ಗಣೇಶ
ಉ: ಪಾಂಡವರ ಗುಹೆ..
In reply to ಉ: ಪಾಂಡವರ ಗುಹೆ.. by Prakash Narasimhaiya
ಉ: ಪಾಂಡವರ ಗುಹೆ..