ಹೊತ್ತು ಸಾಗಿಸಬೇಕು
ಹೆಂಡ್ತಿ ಮಕ್ಕಳ ಸಾಕಬೇಕು, ಬದುಕಬೇಕು
ಹೊಟ್ಟೆಪಾಡಿಗಾಗಿ ಸಿಕ್ಕ ಕೆಲಸ ಮಾಡಬೇಕು
ಹೊತ್ತು ಸಾಗಿಸಬೇಕು ಪ್ರಯಾಣಿಕರ ಒಂದು ಜಾಗದಿಂದ
ಮತ್ತೊಂದು ಜಾಗಕ್ಕೆ, ಚಾಲಕನಾಗಿ ನಾ ನನ್ನ ಪ್ರಾಣ ಲೆಕ್ಕಿಸದೆ.
ನಾ ಬಸ್ಸಿನ ಚಾಲಕನಾಗಿ ಬಸ್ಸಾ ಚಲಿಸುವೆನು
ನನ್ನ ಪ್ರಯಾಣಿಕರ ಸುರಕ್ಷಿತ ಸ್ಥಳಕ್ಕೆ ತಲುಪಿಸುವೆನು
ಹಗಳಿರುಳು ಎನ್ನದೆ, ನಾ ನನ್ನ ಬಸ್ಸಿನ ಪ್ರಯಾಣಿಕರ
ಕಾಲ ಕಾಲಕ್ಕೆ ಅವರವರ ಸ್ಥಳಕ್ಕೆ ಮುಟ್ಟಿಸುವೆನು.
ಗುಡುಗು ಸಿಡಿಲು ಮಳೆ ಬಿಸಿಲು ಚಳಿ ಎನ್ನದೆ
ನಾ ದುಡಿಯುವೆನು, ನನ್ನ ಜೀವದ ಹಂಗ ತೋರೆದು
ನನಗೆ ನಾನಾಗಿರದೆ, ನನ್ನ ಪ್ರಯಾಣಿಕರಿಗಾಗಿ ನಾನಿರುವೆನು
ಅವರೆಲ್ಲರ ಪ್ರಾಣವ ಕಾಪಾಡುವ ಧರ್ಮ ನನ್ನದು .
ಬೇಧ ಭಾವವು ನನಗಿಲ್ಲ ಎಲ್ಲಾ ಪ್ರಯಾಣಿಕರು ನನ್ನವರು
ಕಳ್ಳರು ಸುಳ್ಳರು ಸತ್ಯವಂತರು ನನ್ನ ಬಸ್ಸಿನಲ್ಲಿ ಪ್ರಯಾಣಿಸುವರು
ನಾ ನನ್ನ ಬಸ್ಸಿನಲ್ಲಿ ನನ್ನ ಕಾಯಕ ಮಾಡುವೆನು ಅಷ್ಟೆ
ಹೊತ್ತು ಸಾಗಿಸುವೆನು ಪ್ರಯಾಣಿಕರ ಹೊತ್ತು ಹೊತ್ತಿಗೆ ಅಷ್ಟೆ.
- ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.
Comments
ಉ: ಹೊತ್ತು ಸಾಗಿಸಬೇಕು
In reply to ಉ: ಹೊತ್ತು ಸಾಗಿಸಬೇಕು by viru
ಉ: ಹೊತ್ತು ಸಾಗಿಸಬೇಕು