ಕಲ್ಪನೆಯ ಗೆಳತಿಗೆ...

ಕಲ್ಪನೆಯ ಗೆಳತಿಗೆ...

ಕವನ

ಗೀಚಿರುವೆ ನೂರಾರು ಸಾಲು ನಿನಗಾಗಿಯೇ
ಬರೆದಿರುವೆ ಹಲವಾರು ಕವಿತೆ ನಿನ್ನ ಕುರಿತೇ
ಓದಲು ನೀನೇ ಇಲ್ಲವಾದ ಮೇಲೆ,
ಹೇಗೆ ಇರುವುದು ಇವುಗಳಿಗೆ ಅರ್ಥ,
ಹೇಗೆ ಬರುವುದು ಇವುಗಳಲಿ ಭಾವ.

ಓ ಕಲ್ಪನೆಯ ಗೆಳತಿ,
ಬಾ ಒಮ್ಮೆ ವಾಸ್ತವ ಜಗಕೆ.
ನಿನಗಾಗಿ ಕಾಯುತಿರುವೆ ನಾ
ಒಮ್ಮೆ ನೋಡು ನನ್ನ, ಹಿಡಿ ನನ್ನ ಕೈ
ತುಂಬು ಅರ್ಥವ ಬರಡಾದ ಸಾಲುಗಳಿಗೆ,
ದಯಪಾಲಿಸು ಜೀವವ ಬರಿದಾದ ಕವನಗಳಿಗೆ...

Comments