ನಿನ್ನೆ ನಾಳೆಗಳ ನಡುವೆ
ಕವನ
ನಿನ್ನೆಯ ನೆನಪು ಅಚಲ
ಯಾರೋ ಕಟ್ಟಿ ಬಿಟ್ಟು ಹೋದ
ಕೋಟೆಯಂತೆ
ಚಂಡಮಾರುತಗಳಿಗೂ ಜಗ್ಗದ
ಬಂಡೆಕಲ್ಲಿನಂತೆ
ನಾಳೆಯ ಕನಸು ಮಧುರ
ಎಲ್ಲಿಂದಲೋ ಪರಿಮಳ ಸೂಸುವ
ಸೂಜಿಮಲ್ಲೆಯಂತೆ
ಜೀವನೋತ್ಸಾಹ ತುಂಬಿ ತರುವ
ಭರವಸೆಯ ಬೆಳಕಂತೆ
ಆದರೇನು
ನೆನಪು ನೂರು ಕಾಡಲು
ಸಮಯ ಮರಳಿ ಬರುವುದೇ?
ಕನಸು ನೂರು ಕೂಡಲು
ಬಾಳ ಕೀಲಿ ಸಿಗುವುದೇ?
ನಿನ್ನೆಗಳ ಸಾಗರದೊಳಗೆ ಮುಳುಗಿ
ನಾಳೆಯ ದಡ ಸೇರುವ ಅಪೇಕ್ಷೆ
ನಿನ್ನೆಯ ಸಂಕೋಲೆಗಳೊಳಗೆ
ನಾಳೆಯ ಸ್ವಾತಂತ್ರ್ಯದ ನಿರೀಕ್ಷೆ
ಬದುಕು ಸಾಗುವುದು
ಕಳೆದು ಹೋದ ನಿನ್ನೆಯಲ್ಲೂ ಅಲ್ಲ
ಮುಂಬರುವ ನಾಳೆಯಲ್ಲೂ ಅಲ್ಲ
ನಿನ್ನೆ ನಾಳೆಗಳ ನಡುವ ಕೊಂಡಿಯಲ್ಲಿ
ಇಂದಿನ ದಿನದ ಬೆಚ್ಚಗಿನ ಗೂಡಿನಲ್ಲಿ
ನಿನ್ನೆಯ ಸೆರಗು ಸರಿಸಿ ಅರಳಿದ
ಇಂದಿನ ಸುಮವಿದು ಕಂಪ ಬೀರಲಿ
ನಿನ್ನೆಯ ಬುನಾದಿಯ ಮೇಲೆ
ನಾಳೆಯ ಮಹಲು ಕಟ್ಟುವ
ಇಂದಿನ ಕೆಲಸ ಕೈಗೂಡಲಿ
Comments
ಉ: ನಿನ್ನೆ ನಾಳೆಗಳ ನಡುವೆ
In reply to ಉ: ನಿನ್ನೆ ನಾಳೆಗಳ ನಡುವೆ by kamath_kumble
ಉ: ನಿನ್ನೆ ನಾಳೆಗಳ ನಡುವೆ
ಉ: ನಿನ್ನೆ ನಾಳೆಗಳ ನಡುವೆ
ಉ: ನಿನ್ನೆ ನಾಳೆಗಳ ನಡುವೆ
ಉ: ನಿನ್ನೆ ನಾಳೆಗಳ ನಡುವೆ
ಉ: ನಿನ್ನೆ ನಾಳೆಗಳ ನಡುವೆ
ಉ: ನಿನ್ನೆ ನಾಳೆಗಳ ನಡುವೆ
ಉ: ನಿನ್ನೆ ನಾಳೆಗಳ ನಡುವೆ
ಉ: ನಿನ್ನೆ ನಾಳೆಗಳ ನಡುವೆ
ಉ: ನಿನ್ನೆ ನಾಳೆಗಳ ನಡುವೆ
ಉ: ನಿನ್ನೆ ನಾಳೆಗಳ ನಡುವೆ