ಸಿನಿಮಾದಕಿ ಸಿಗ್ತಾಳಾ?

ಸಿನಿಮಾದಕಿ ಸಿಗ್ತಾಳಾ?

 ಲೇ ಋತು ಬಾರೆ ಟೈಮ್ ಆಯಿತು.ಆ ಮ್ಯಾನೇಜರ್ ಬಡ್ಕೊಂತ ಇದ್ದಾನೆ ಅವಾಗಿಂದ.ಹಾಂ ಬಂದೆ ಕಣೆ ಬಿಂದಿ ಸಿಗ್ತಾ ಇಲ್ಲ ಹುಡುಕ್ತಾ ಇದ್ದೀನಿ,ಎಲ್ಲಿ ಹೋಯ್ತೋ ಏನೋ .ಹೋಗ್ಲಿ ಬಾರೆ ಅಲ್ಲಿ ಯಾರದಾದರು ಅಡ್ಜಸ್ಟ್ ಮಾಡೋಣ.ಒಂದು ನಿಮಿಷ ಕಣೆ..ಅಯ್ಯೋ ಇವಳಿಂಗಾದರೆ ಬರಲ್ಲ ನಾನೇ ಹೋಗ್ಬೇಕು.ಲೇ ಬಾರೆ ನೀನು ಇವತ್ತು ಬಿಂದಿ ಹಾಕ್ಕೊಳದಿದ್ರೆ ಯಾರು ಕೇಳೋದಿಲ್ಲ ಅಂತ ಕರೆದುಕೊಂಡು ಹೋದಳು.ಹಾ ಎಲ್ಲ ರೆಡಿ ನಾ.ನೋಡಿ ಇದು ಹೊಸ ಸಿನೆಮಾ ಮೂರು ಡಾನ್ಸ್ ಹಾಡುಗಳಿವೆ ಸಕಲೇಶಪುರ,ಗುಲಬರ್ಗಾ ಮತ್ತೆ ಇಲ್ಲೇ ಬೆಂಗ್ಲುರಲ್ಲೂ ಶೂಟಿಂಗ್ ಆಗುತ್ತೆ.ನಾ ಹೆಂಗೆ ಹೇಳ್ತಿನೋ ಹಂಗೆ ಕೇಳಬೇಕು.ಹೊಸ ನಿರ್ಮಾಪಕರಂತೆ ದುಡ್ಡು ಚೆನ್ನಾಗೆ ಗಿಟ್ಟಬಹುದು ಆಯ್ತಾ.ಅಲ್ಲಿ ಗಾಡಿ ನಿಂತಿದೆ ಎಲ್ಲರೂ ಹೋಗಿ ಕೂತ್ಕೊಳ್ಳಿ.ಗಾಡಿ ಹಂಗೆ ಬೆಂಗಳೂರು ಕಡೆ ಹೋಗ್ತಾ ಇತ್ತು.ಲೇ ಮಂಜಿ ಈ ಸಲ ದುಡ್ಡು ಜಾಸ್ತಿ ಕೇಳಬೇಕು ಕಣೆ ಯಾಕಂದ್ರೆ ಅಪ್ಪಯ್ಯ ಹೇಳ್ತಾರೆ ಶಕ್ತಿ ಇದ್ದಾಗಲೇ ಹಣ ಗಳಿಸ್ಕೊಬೇಕು ಅಂತ,ನಾವು ಇನ್ನು ಎಷ್ಟು ದಿನ ಅಂತ ಹಿಂಗೆ ಕುಣಿಬೇಕು ಹೇಳು.ಹೌದು..ಇದು ನಿಂದು ಎಷ್ಟನೆ ಸಿನೆಮಾ? ಚೆನ್ನಾಗಿ ಕೇಳ್ದೆ ಕಣೆ ಇದು ನಂದು ಐವತ್ತನೇ ಸಿನಿಮಾ ಕಣೆ.ಹಂಗಾದ್ರೆ ಪಾರ್ಟಿ? ಸಂಜೆ ಪ್ಯಾಕ್ ಅಪ್  ಅದ ನಂತರ ಕಡಲೆಪುರಿ ತಿನ್ನೋಣ ಆಯ್ತಾ.ನಮ್ ಹೀರೋಗಳು ಐವತ್ತನೇ ಸಿನೆಮಾ ಅಂದ್ರೆ ಟಿವಿಯಲ್ಲಿ ಬರುತ್ತೆ ನಮಗಾದ್ರೆ ನಮ್ಮ ಟೀಮೆ ಒಂದು ಚಾನೆಲ್ಲು  ಮ್ಯಾನೇಜರ್ ಅದಕೊಂದು ಆಂಕರ್ ಹಾ ಹಾ ಹಾ .ಅದ್ಕೆ ಕಣೆ ಹಿರೋಇನ್ ಆಗಬೇಕು ಅನ್ನೋದು ನಾ ನೋಡ್ತಿರು ಒಂದಲ್ಲ ಒಂದಿನ ಹಿರೋಇನ್ ಆಗೇ  ಆಗ್ತೀನಿ.ನೀನು ಬಿಡಮ್ಮ ಅಗ್ತಿಯಾ ನೀನು ಕುಣಿತಾ ಇದ್ರೆ ನಂಗೆ ಹೆಂಗೆಂಗೋ ಆಗುತ್ತೆ ಅದ್ರಲ್ಲಿ ನಮ್ಮ ಹುಡುಗರ ಗತಿ ಹೆಂಗೋ.ಏನು ಕುಣಿದರು ಏನು ಬಂತು ಕರ್ಮ ಕ್ಯಾಮೆರಾ ನಮ್ಮ ಹತ್ರ ಬರೋಕೆ ಬಿಡಲ್ವೆ ಆ ವಯ್ಯ.ಆ ಹಿರೋಇನ್ ಅದೇನು ಕುಣಿತಾಲೋ ಏನೋ ಕ್ಯಾಮೆರಾ ಮಾತ್ರ ಅವಳಿಂದೇನೆ ಇರುತ್ತೆ.ಹೋಗ್ಲಿಬಿಡೇ ಋತು ಯಾರಾದ್ರು ಒಬ್ಬ ನಿರ್ದೇಶಕ ನಿನ್ ಕುಣಿತ ನೋಡೇ ನೋಡ್ತಾನೆ ಆ ಕ್ಯಾಮೆರಾ  ನಿನ್ ಸುತ್ತ ಗಿರಾಕಿ ಹೊಡೆದೆ ಹೊಡೆಯುತ್ತೆ.ಸ್ಟುಡೀಯೋ ಬಂದೆ ಬಿಟ್ತು ಕಣೆ ನಡಿ.

                   ಬನ್ನಿ ಬನ್ನಿ ಎಲ್ಲ..ಮ್ಯಾನೇಜರ್ ಗಡಸು ಧ್ವನಿ ಎಲ್ಲರನ್ನ ಕರಿತ ಇತ್ತು.ಇವತ್ತು ರಾತ್ರಿ ನಾವು ಗುಲ್ಬರ್ಗಾಕೆ ಹೋಗ್ಬೇಕು.ಆ ಕಡೆ ಬಿಸಿಲು ಜಾಸ್ತಿ ಅಲ್ಲಿ ಒಂದು ವಾರ ಶೂಟಿಂಗ್ ಇರುತ್ತೆ.ಮೇಕ್ ಅಪ್ ತುಂಬಾ ಬೇಗ ಇಳಿದು ಹೋಗುತ್ತೆ.ಅದಕ್ಕೆ ನಿಮ್ಗೆನೇನು ಬೇಕೋ ಎಷ್ಟು ಬೇಕೋ ಅಷ್ಟು ಮೇಕ್ ಅಪ್ ಸಾಮಾನು ಎಲ್ಲ ಕೊಂಡುಕೊಳ್ಳಿ.ಅಲ್ಲಿ ನಮ್ ಹುಡುಗನದು ಶಾಪ್ ಇದೆ ಅಲ್ಲೇ ಹೋಗಿ ನಾನೆಲ್ಲ ದುಡ್ಡು ಮಾತಾಡಿದ್ದೇನೆ.ಅಂದ ಹಾಗೆ ಋತು ಮತ್ತೆ ಮಂಜಿ ನಿವಿಬ್ರೂ ಇದೆ ಮೊದಲನೇ ಸಾರಿಗೆ ಬರ್ತಾ ಇದ್ದೀರಾ ಊರು ಬಿಟ್ತು ಊರಿಗೆ ಅದೂ ಗುಲ್ಬರ್ಗಾ.ಹುಷಾರು ಅಲ್ಲಿ ಜನ ಸ್ವಲ್ಪ ರಫ್ ಅಂತೆ.ನಾನು ಹೇಳೋವರೆಗೂ ಎಳ್ಳು ಹೋಗಕೂಡದು ಆಯ್ತಾ .ಏನೆ ಮಂಜಿ ಈ ಸಾರ್ ಹಿಂಗೆ ಹೇಳ್ತಾರೆ.ಅಲ್ಲಿ ಬಿಸಿಲು ಜಾಸ್ತಿ ಅಂತೆ ನಾನ್ ಕಪ್ಪಗಾದರೆ ಹೆಂಗೆ ಮಾಡೋದು ನಾನೆಂಗೆ ಹಿರೋಇನ್  ಆಗೋದು ಋತು ಸಪ್ಪೆ ಮುಖ ಮಾಡಿ ಅಲ್ಲೇ ತಲೆ ಮೇಲೆ ಕೈಯಿಟ್ಟು ಕುಳಿತ ಬಿಟ್ಟಳು.ಅಯ್ಯೋ ನನ್ ಚೆಲುವೆ ಗುಲ್ಬರ್ಗಾ ಏನು ನಿನ್ನ ಬಣ್ಣ ಕಪ್ಪಗಾಗೋಕೆ ಆ  ಸೂರ್ಯ ಬಂದು ಮುತ್ತು ಕೊಡಬೇಕು ಬಾ ಒಳ್ಳೆ ಹುಡುಗಿ ಇವಳು.ಅಣ್ಣಾ ನಮ್ ಸುಂದರಿಗೆನು ಬೇಕು ಸ್ವಲ್ಪ ನೋಡಿ ಕೊಡಣ್ಣ.ಮಂಜಿ ನಂಗೆ ಮೂರು ಮೇಕ್ ಅಪ್ ಕಿಟ್ ಬೇಕು ಕಣೆ.ಎಲ್ರೂ ಎರಡು ತಗೊಂಡಿದಾರೆ ನಿನಗ್ಯಾಕೆ ಮೂರು.ಕಾಸು ನಾವಾ ಕೊಡ್ತಾ ಇದ್ದಿವಿ ನೀನು ಕೊಡಣ್ಣ ನಂಗೆ ಅಯ್ಯೋ.

                                        ಸಮಯ ಸಂಜೆ ಆರು ಗಂಟೆ ಅಗ್ತಾ ಇದೆ.ಋತು ಮಂಜಿ ಹತ್ತಿರ ಲೇ ಮಂಜು ಆ ಮ್ಯಾನೇಜರ್ ಹತ್ರ ಹೋಗಿ ಫೋನ್ ತಗೊಳ್ಳೇ ಅಪ್ಪಯ್ಯ ಮನೆಗೆ ಬಂದರೋ ಏನೋ ಅವ್ರಿಗೆ ಒಂದು ಮಾತು ಹೇಳಬೇಕಲ್ವ ಗುಲಬರ್ಗಾ ಹೋಗ್ತಾ ಇರೋದು.ಆಯಿತು ಬಿಡೆ ಒಂದು ನಿಮಿಷ ಅಂತ ಫೋನ್ ತಗೊಂಡು ಬಂದಳು.ಹೌದು ನಿನೆಲ್ಲ ನಿಮ್ ಅಪ್ಪಯ್ಯನ ಕೇಳೆ ಮಾಡ್ತಿಯಾ.ಹೂಂ  ಕಣೆ ಅವ್ರ ಮಾತು ನಂಗೆ ಯಾವಾಗಲು ಒಳ್ಳೇದೆ ಮಾಡಿದೆ ಅದ್ಕೆ.ಹಂಗೂ ಅಪ್ಪಯ್ಯ ಇಲ್ಲಿವರೆಗೂ ನಾನು ಏನು ಹೇಳಿದಿನೋ ಅದಕೆಲ್ಲ ಒಪ್ಪಿಗೆ ಕೊಟ್ಟೆ ಕೊಟ್ಟಿದಾರೆ.ಆ ಮ್ಯಾನೇಜರ್ ಗುಲಬರ್ಗಾ ಜನರ ಬಗ್ಗೆ ಹೆಂಗೆಂಗೋ ಹೇಳ್ತಾನೆ ಅದ್ಕೆ ಒಂದು ಮಾತು ಕೇಳ್ತೀನಿ. ಅಪ್ಪಯ್ಯಂಗೆ ಎಲ್ಲ ಊರು ಜನ ಗೊತ್ತು.......ಹಲೋ,ಹಲೋ ಅಪ್ಪಯ್ಯ ನಾನು ನಿನ್ ಋತು ಅಪ್ಪಯ್ಯ.ಹೊಸ ಫಿಲಂ ಶೂಟಿಂಗ್ ಅಂತೆ.ಮ್ಯಾನೇಜರ್ ಹೇಳ್ತಾ ಇದ್ರೂ ಗುಲಬರ್ಗಾ ಹೋಗಬೇಕಂತೆ ಒಂದು ವಾರ ಅಂತೆ.ಅಪ್ಪಯ್ಯ ಅಲ್ಲಿ ಜನ ಚೆನ್ನಾಗಿಲ್ವಂತೆ ಹೌದಾ ಅಂತ ಒಂದೇ ಉಸ್ರಲ್ಲಿ ಮಾತಾಡ್ತಾನೆ ಇದ್ಲು ಋತು.ಕಂದಾ ಅದೇಲ್ಲ ಹಂಗಿರಲಿ...ಏನಾದ್ರು ತಿಂದಾ ಕಂದಾ ಯಾಕೋ ಧ್ವನಿ ಸಪ್ಪಗಿದೆ ಅಂದ್ರು ಅಪ್ಪಯ್ಯ.ಋತು ಗೆ ಅಳು ತುಂಬಿ ಬಂತು ನನ್ ಅಪ್ಪಯಂಗೆ ನಂದೆಷ್ಟು ಚಿಂತೆ ಅಂತ.ಫೋನ್ ಪಕ್ಕದಲ್ಲಿ ತಗೊಂಡು ಹೋಗಿ ಅಪ್ಪಯ್ಯಾ....ಹೂ ಹೂಂ  ಅಂತಾ ಒಂದೇ ಸಮನೆ ಗಳ ಗಳ ಅಂತ ಅಳ್ತಾಳೆ,ನೀನು ಹೆಂಗೆ ಅಪ್ಪಯ್ಯ ಇಷ್ಟು ಒಳ್ಳೆವನು.ನಿಂಗೆ ನಾನು ಅಂದ್ರೆ ಯಾಕೆ ಇಷ್ಟು ಇಷ್ಟಾ.ನಾನು  ಗಂಡು ಮಗು ಆಗಬೇಕಿತ್ತು ಅಪ್ಪಯ್ಯ ನಿನ್ನ ಎಲ್ಲೂ ಹೋಗೋಕೆ ಬಿಡದೆ ಮನೇಲೆ ಇಟ್ಕೊಂಡು ಚೆನ್ನಾಗಿ ನೋಡ್ಕೊಂತ ಇದ್ದೆ.....ನೋಡ್ಕೊಂತ ಇದ್ದೆ.(ಮಂಜಿ ದೂರದಿಂದ ಇದನೆಲ್ಲ ನೋಡಿ ತಿರಿಹೋದ ಅವ್ರ ಅಪ್ಪನ ನೆನಪಾಗಿ ಕಣ್ಣಿರು ಸುರಿಸ್ತ ಇದ್ಲು.)ನಂತರ  ತಾನೇ ಸಮಾಧಾನ ಮಾಡ್ಕೊಂಡು..ನಾನು ಇಲ್ಲೇ ಸೆಟ್ ಅಲ್ಲೇ  ಊಟ ಮಾಡಿದೆ ಚೆನ್ನಾಗಿತ್ತು.ನೀನು ಹೋಗಿ ಭಟ್ಟರ ಹೋಟೆಲ್ ಅಲ್ಲಿ ಊಟ ಮಾಡು.ಅವ್ನೆನಾದ್ರು ಕಾಸು ಕೇಳ್ದ್ರೆ ನಾನು ಬಂದು ಕೊಡ್ತೀನಿ ಅಂತ ಹೇಳು,ಎಲ್ಲಿ ಭಟ್ಟರಿಗೆ ಕೊಡು ಫೋನು ಅಂದಳು.ಭಟ್ಟರೆ ನಮ್ಮ ಅಪ್ಪಯಂಗೆ ಇನ್ನೂ ಒಂದು ವಾರ ಚೆನ್ನಾಗಿ ನೋಡ್ಕೊಳ್ಳಿ ನಾನು ಬೇರೆ ಊರಿಗೆ ಹೋಗ್ತಾ ಇದ್ದೀನಿ,ಮಸಾಲೆ ದೋಸೆ ಎಲ್ಲ ಕೊಡಬೇಡಿ,ತಟ್ಟೆ ಇಡ್ಲಿ ಮೊಸರನ್ನ ಅವ್ರಿಗೆ ತುಂಬಾ ಇಷ್ಟ ಅದೇ ಕೊಡಿ ನಾನು ಬಂದ ತಕ್ಷಣ ನಿಮಗೆ ದುಡ್ಡು ಕೊಟ್ಟು ನಮ್ಮ ಮನೇಲಿ ಒಂದಿನ ಅಡುಗೆನೂ ಮಾಡಿ ಹಾಕ್ತೀನಿ ಆಯ್ತಾ ಅಂದ್ಲು.ಭಟ್ರು ನೀನು ಹೋಗಿ ಬಾ ತಾಯಿ ನಿಮ್ಮಪ್ಪ ಒಂದು ವಾರ ಏನು ಒಂದು ವರುಷ ನಮ್ಮ ಹತ್ರಾನೆ ಊಟ ಮಾಡಿದ್ರು ಪರವಾಗಿಲ್ಲ,ನೀನು ಹುಷಾರು ಅಂತ ಫೋನ್ ಅಪ್ಪಯಂಗೆ ಕೊಟ್ರು.ಕಂದಾ ನೀನೇನು ನೊಂದ್ಕೊಬೇಡ,ನಾನು ಚೆನ್ನಾಗೆ ಇರ್ತೀನಿ.ಗುಲಬರ್ಗಾ ಅಂದೆಲ್ಲ ಅದೂ ಶರಣರ ಊರು ಕಂದಾ.ದತ್ತಾತ್ರೇಯ ವಾಸವಾಗಿರುವ ಊರು,ಖಾಜಾ  ಬಂದೆ ನವಾಜ್ ಅವರು ಇಂದಿಗೂ ಅಲ್ಲಿನ ಜನರ ಸಮಸ್ಯೆ ಪರಿಹರಿಸ್ತಾರಂತೆ,ಭೀಮ ಹಾಗು ಕೃಷ್ಣಾ ನದಿಯ ನೀರಿನ ರುಚಿ ಅಲ್ಲಿಯೇ ಸವಿಬೇಕು.ಕೊಟ್ಟಮಾತಿಗೆ ತಪ್ಪದ ಜನ,ಒಮ್ಮೆ ಹಚ್ಚಿಕೊಂಡರೆ ಜೀವ ಕೊಡಲು ಸಿದ್ಧರು.ಅಲ್ಲಿನ ಜನರ ಮಾತು ಒರಟೆ ಹೊರತು ಅವರಲ್ಲ.ಕಲಾವಿದರಿಗೆ ಆ ಊರಿನವರು ತುಂಬಾ ಮರ್ಯಾದೆ ಕೊಡ್ತಾರೆ.ನೀ ನಿಶ್ಚಿಂತೆಯಾಗಿ ಹೋಗಿ ಬಾ ಕಂದಾ ಅಂದರು.ಇನ್ನೇನು ಅಪ್ಪಯ್ಯಾ ಚೆನ್ನಾಗಿದೆ ಅಂತ ಸರ್ಟಿಫಿಕೇಟ್ ಕೊಟ್ಟ ಮೇಲೆ ಕಳವಳಗೊಂಡಿದ್ದ ಋತು ಒಂಚೂರು ಸಮಾಧಾನಗೊಂಡಳು ಆದರೆ ಅಪ್ಪಯ್ಯಾ ಅಲ್ಲಿನ ಬಿಸಿಲಿನ ಬಗ್ಗೆ ಏನು ಹೇಳಲೇ ಇಲ್ಲ ಹಾಗಾದರೆ ಬಿಸಿಲು ಜಾಸ್ತಿನೆ ಇರಬೇಕು ಅನ್ಸುತ್ತೆ ಅಂತ ಮನದಲ್ಲೇ ಮಾತಾಡುತ್ತ ಫೋನ್ ಮಂಜಿಗೆ ಕೊಟ್ಟಳು.ಎಲ್ಲರೂ ಒಂದೆಡೆ ಸೇರಿ ೨೫ ಜನ ಇದ್ದೇವೆ ಇನ್ನೇನು ವ್ಯಾನ್ ಗುಲಬರ್ಗಾ ಕಡೆ ಹೋಗುತ್ತೆ  ನಿಮ್ಮ ಬಟ್ಟೆ,ಬ್ಯಾಗ್ ಎಲ್ಲ ಸರಿಯಾಗಿ ಇಟ್ಟುಕೊಳ್ಳಿ ಅಂದ ಸ್ಪಾಟ್ ಬಾಯ್.ಮಂಜಿ ಮತ್ತು ಋತು ಒಂದೇ ಕಡೆ ಕುಳಿತುಕೊಂಡರು.,ರೈಯ್ಯ ರೈಯ್ಯಅಂದ ಸ್ಪಾಟ್ ಬಾಯ್ ..ವ್ಯಾನ್ ತನ್ನ ಚಕ್ರಗಳಿಗೆ ಕೆಲಸ ಕೊಟ್ಟಿತು. ಪೀಣ್ಯ ದಾಸರಹಳ್ಳಿ ಮಾರ್ಗವಾಗಿ ಗುಲ್ಬರ್ಗಾ ಕಡೆ  ಕಡೆ ಹೊರಟಿತು.

                                                               ಮುಂದುವರೆಯುವುದು......

                                                               (ಚಿತ್ರ ಕೃಪೆ ಗೂಗಲ್)                                                                          

Comments