ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ
ತ್ರಿಪುರ ಸುಂದರೀ ಅಷ್ಟಕಂ - ೨
ಕದಂಬವನವಾಸಿನೀಂ ಕನಕವಲ್ಲಕೀಧಾರಿಣೀಂ,
ಮಹಾಹ್ರಮಣಿಹಾರಿಣೀಂ ಮುಖಸಮುಲ್ಲಸದ್ಧಾರುಣೀಮ್l
ದಯಾವಿಭವಕಾರಿಣೀಂ ವಿಶದಲೋಚನೀಂ ಚಾರಿಣೀಂ
ತ್ರಿಲೋಚನ ಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇll೨ll
ಕದಂಬವನದಿ ವಾಸಿಪ ಸ್ವರ್ಣವೀಣಾಧಾರಿಣಿಯೆ,
ಅನರ್ಘ್ಯರತ್ನಗಳ ಕಂಠಾಭರಣವ ತೊಟ್ಟವಳೆ,
ಅಮೃತದ ಗಾಢ ಪ್ರಭೆಯ ಮುಖದವಳೆ,
ಕೃಪೆಯಿಂ ಸಂಪದಗಳ ದಯಪಾಲಿಸುವವಳೆ,
ಶುಭ್ರನೇತ್ರೆಯೇ, ವಿಹಾರಿಣಿಯೇ, ನಿನ್ನಾಶ್ರಯವ ಕೋರುವೆ
ತ್ರಿಲೋಚನ ಕುಟುಂಬಿನಿ ತ್ರಿಪುರಸುಂದರಿಯೇ.
ವಿವರಣೆ:
ಕದಂಬವನವಾಸಿನಿ - ದೇವಿಯು ಈ ವಿಶ್ವದಲ್ಲಿ ವ್ಯಾಪಿಸಿರುವಂತೆಯೇ ಅದರಲ್ಲಿ ಅಂತರ್ಗತಳಾಗಿಯೂ ಇದ್ದಾಳೆ. ದೇಹಕ್ಕೆ ಆತ್ಮವಿರುವಂತೆ ಅವಳು ಈ ವಿಶ್ವಕ್ಕೆ ಆತ್ಮವಾಗಿದ್ದಾಳೆ.
ಸ್ವರ್ಣವೀಣಾಧಾರಿಣಿ - ೧) ವೀಣೆಯು ಈ ವಿಶ್ವವನ್ನು ಪ್ರತಿನಿಧಿಸಿದರೆ ಅದರ ಸಂಗೀತವು ಈ ಪ್ರಪಂಚದಲ್ಲಿ ವಾಸವಾಗಿರುವ ಜೀವಿಗಳ ಲಯಬದ್ಧ ನಡವಳಿಕೆಗೆ ಪ್ರತೀಕವಾಗಿದೆ. ವೀಣೆಯನ್ನು ನುಡಿಸುವವನಿಂದ ಸಂಗೀತವು ಹೊಮ್ಮುತ್ತದೆ; ಅವನಿಲ್ಲದಿದ್ದರೆ ವೀಣೆಯು ಜಡವಸ್ತು. ಇದೇ ರೀತಿಯಾಗಿ ದೇವಿಯು ಜಗತ್ತಿನ ಎಲ್ಲಾ ವಸ್ತುಗಳ ನಡುವೆ ಸಾಮರಸ್ಯವನ್ನು ಉಂಟುಮಾಡುತ್ತಾಳೆ. ಅವಳು ಎಲ್ಲಾ ಜೀವಿಗಳಲ್ಲಿ ಚಲಿಸುವ ಚೈತನ್ಯವಾಗಿದ್ದಾಳೆ; ಅವಳಿಲ್ಲದಿದ್ದರೆ ಪ್ರಪಂಚವು ಅರಾಜಕತೆಯಿಂದ ಕೂಡಿರುತ್ತಿತ್ತು. "ಅವನು ಹೊಳೆದರೆ; ಎಲ್ಲವೂ ಹೊಳೆಯುತ್ತವೆ; ಅವನ ಬೆಳಕಿನಿಂದ ಎಲ್ಲವೂ ಬೆಳಗುತ್ತವೆ." - ತಮೇವ ಭಾಂತಮ್ ಅನುಭೂತಿ ಸರ್ವಮ್ ತಸ್ಯ ಭಾಸಾ ಸರ್ವಂ ಇದಮ್ ವಿಭಾತಿ (ಕಠೋಪನಿಷತ್ತು - ೧೧.೨.೧೫)
೨)ಯೋಗ ಶಾಸ್ತ್ರದ ಪ್ರಕಾರ, ವೀಣೆಯು ಮೇರು ದಂಡವೆಂದು ಕರೆಯಲ್ಪಟ್ಟು ಬೆನ್ನುಮೂಳೆಯಿಂದೊಡಗೂಡಿದ ನರಮಂಡಲವನ್ನು ಪ್ರತಿನಿಧಿಸುತ್ತದೆ. ವೀಣೆಯ ತಂತಿಗಳು ನರಮಂಡಲದಾದ್ಯಂತ ಪ್ರವಹಿಸುವ ನಾಡಿಯ ಸೂಕ್ಷ್ಮ ತರಂಗಗಳನ್ನು ಪ್ರತಿನಿಧಿಸುತ್ತವೆ.
೩) ಅದರ ಭಾಗಗಳ ಮಹತ್ವದಿಂದಾಗಿ, ವೀಣೆಯ ದರ್ಶನವೇ ಮಹಾಭಾಗ್ಯವೆಂದು ಪರಿಗಣಿಸಲ್ಪಟ್ಟಿದೆ. ಅದರ ಕಾಂಡವು ಶಿವನನ್ನು ಪ್ರತಿನಿಧಿಸಿದರೆ, ತಂತಿಗಳು ಉಮೆಯನ್ನು, ಭುಜಭಾಗವು ವಿಷ್ಣುವನ್ನು, ತುದಿ (ಬಾಲದ) ಭಾಗವು ಲಕ್ಷ್ಮಿಯನ್ನು, ಬುರುಡೆಯ ಭಾಗವು (ಸೋರೆ ಬುರುಡೆಯು) ಬ್ರಹ್ಮನನ್ನು, ಮಧ್ಯಭಾಗವು ಸರಸ್ವತಿಯನ್ನು, ತಂತಿಗಳನ್ನು ಬಿಗಿಗೊಳಿಸುವ ಕೀಲುಗಳು ವಾಸುಕಿಯನ್ನು ಮತ್ತು 'ಜೀವ' ಎಂದು ಕರೆಯಲ್ಪಡುವ ಭಾಗವು ಚಂದ್ರನನ್ನು ಪ್ರತಿನಿಧಿಸುತ್ತವೆ. ಅವಳು ವೀಣೆಯನ್ನು ನುಡಿಸುವುದರ ಸಂಕೇತ; ಎಲ್ಲಾ ದೇವತೆಗಳಿಗೂ ತಮಗೆ ನಿಯೋಜಿಸಲ್ಪಟ್ಟ ಕಾರ್ಯವನ್ನೆಸಗಲು ಬೇಕಾಗುವ ಶಕ್ತಿಯನ್ನು ದಯಪಾಲಿಸುವವಳು ದೇವಿ ತ್ರಿಪುರಸುಂದರಿ ಎನ್ನುವುದನ್ನು ನಮ್ಮ ಜ್ಞಾಪಕಕ್ಕೆ ತರುತ್ತದೆ.
ಅನರ್ಘ್ಯರತ್ನಗಳ ಕಂಠಾಭರಣವ ತೊಟ್ಟವಳೆ -
೧) ವಿಶ್ವದ ಮೂರ್ತರೂಪವಾಗಿರುವ ದೇವಿಗೆ ನಕ್ಷತ್ರಗಳು ಅವಳ ಕೊರಳಿನ ಮಾಲೆಯ ಬೆಲೆಬಾಳುವ ರತ್ನಗಳಾಗಿವೆ.
ಹೋಲಿಸಿ: ಸಮುದ್ರ ವಸನೇ ದೇವಿ ಪರ್ವತಸ್ಥನ ಮಂಡಲೇ l
ವಿಷ್ಣುಪತ್ನ್ಯಾನಮಸ್ತುಭ್ಯಮ್ ಪಾದಸ್ಪರ್ಶಮ್ ಕ್ಷಮಸ್ವಮೇ ll
(ಸಮುದ್ರವನ್ನು ಬಟ್ಟೆಯಾಗುಳ್ಳ ಮತ್ತು ಪರ್ವತಗಳನ್ನೇ ಸ್ಥನಗಳಾಗುಳ್ಳ, ವಿಷ್ಣುಪತ್ನಿಯಾದ (ಭೂದೇವಿಯೇ) ನಿನ್ನನ್ನು ಪಾದದಿಂದ ಸ್ಪರ್ಶಿಸುತ್ತಿರುವುದಕ್ಕೆ (ತುಳಿಯುತ್ತಿರುವುದಕ್ಕೆ) ನನ್ನನ್ನು ಕ್ಷಮಿಸು)
೨) ಎಲ್ಲಾ ಜೀವಿಗಳಲ್ಲಿ ಅಂತರ್ಗತವಾಗಿರುವುದರಿಂದ ವಾಸ್ತವವಾಗಿ ದೇವಿಯೇ ಅವರೆಲ್ಲರೂ ಧರಿಸಿದ ಆಭರಣಗಳಿಂದ ಭೂಷಿತಳಾಗಿದ್ದಾಳೆ. "ಯಾವುದೇ ಜೀವಿಯಾಗಿರಲಿ ತನ್ನ ಸಂತೋಷಕ್ಕಾಗಿ ಹೊಂದುವ ಎಲ್ಲಾ ವಸ್ತುಗಳು - ಆಭರಣಗಳು, ಆಹಾರ ಮೊದಲಾದವು, ಅವುಗಳಿಂದ ಭೂಷಿತಳಾಗಿ ತನ್ಮೂಲಕ ಸಂತೋಷ ಹೊಂದುವವಳು ದೇವಿಯೇ. ಅವಳು ಎಲ್ಲಾ ದೇವಾನುದೇವತೆಗಳಲ್ಲಿ ಆತ್ಮವಾಗಿದ್ದು, ಭಕ್ತರು ದೇವರನ್ನು ಸಂತೋಷಪಡಿಸಲು ಸಮರ್ಪಿಸುವ ಎಲ್ಲಾ ಆಭರಣಗಳಿಂದ ಭೂಷಿತವಾಗುವವಳು ಕೂಡಾ ವಾಸ್ತವವಾಗಿ ದೇವಿಯೇ". (’ಲಲಿತಾ ತ್ರಿಶತಿ’ಯ ೧೪೦ನೆಯ ನಾಮಾವಳಿಗೆ ಶಂಕರಾಚಾರ್ಯರ ವ್ಯಾಖ್ಯಾನ - ಇಂಗ್ಲೀಷ್ ಅನುವಾದ ಡಾll ಸಿ. ಸೂರ್ಯನಾರಾಯಣ ಮೂರ್ತಿ).
೩) "ಸಮಯಾಚಾರಿಣ" ಪಂಗಡಕ್ಕೆ ಸೇರಿದ ಅನುಯಾಯಿಗಳು 'ಮಣಿಪೂರಕ'ದಲ್ಲಿ ದೇವಿಯನ್ನು ಕುರಿತು ಧ್ಯಾನಿಸುವಾಗ ಅವಳಿಗೆ ಮಣಿ/ರತ್ನಖಚಿತ ಆಭರಣಗಳನ್ನು ಅರ್ಪಿಸುವುದು ರೂಢಿಗತವಾಗಿದೆ. ದೇವಿಯು ಮಣಿಪೂರದ ಒಳಗನ್ನು ಅನರ್ಘ್ಯರತ್ನಗಳಿಂದ ತುಂಬಿಸುತ್ತಾಳೆನ್ನುವುದು ಈ ಪದ್ಧತಿಯ ಹಿಂದಿರುವ ಮೂಲ ಉದ್ದೇಶ.
ಅಮೃತದ ಗಾಢ ಪ್ರಭೆಯ ಮುಖದವಳೆ - ದೇವಿಯು ತನ್ನ ಸ್ವಾಮಿಯೊಂದಿಗೆ ಸಮಾಗಮದಲ್ಲಿರುವಾಗ ಮಕರಂದವು ಕಡೆಯಲ್ಪಟ್ಟು ಆ ಮಕರಂದ/ಅಮೃತದಿಂದ ತೋಯಿಸಲ್ಪಡುತ್ತಾಳೆ; ಆ ಸಮಯದಲ್ಲಿ ಉತ್ಪತ್ತಿಯಾಗುವ ದ್ರವವೆಂದು ವಾರುಣಿ ಪದಕ್ಕೆ ಇರುವ ಶಬ್ದಶಃ ಅರ್ಥ. ವಾರುಣಿಯನ್ನು ಸೇವಿಸುವ ಮೂಲಕ ದೇವಿಯು ಉನ್ಮತ್ತತೆಯ ಸಂಕೇತಗಳನ್ನು ವ್ಯಕ್ತಪಡಿಸುತ್ತಾಳೆ; ಅವೆಂದರೆ ರಕ್ತವರ್ಣಿತ ನೇತ್ರಗಳು, ಕೆಂಪಡರಿದ ಕೆನ್ನೆಗಳು ಮೊದಲಾದವು.
ಬಾಹ್ಯ ಪೂಜೆಯ ರೂಪಗಳಲ್ಲಿ (ಉಪಾಸನೆಯಲ್ಲಿ), ಪಂಚ 'ಮ'ಕಾರಗಳಿಂದ ಕೂಡಿದ ವಿಶೇಷ ವಸ್ತುಗಳಿಂದ ದೇವಿಯ ಆವಾಹನೆಯನ್ನು ಮಾಡುತ್ತಾರೆ. ಅವೆಂದರೆ ಮದ್ಯ (ಮದ್ಯಸಾರದ ದ್ರವ), ಮತ್ಸ್ಯ(ಮೀನು), ಮಾಂಸ, ಮುದ್ರೆ (ಉಪಾಸನೆಯ ಮುದ್ರೆ) ಮತ್ತು ಮೈಥುನ (ಲೈಂಗಿಕ ಸಮಾಗಮ/ಕೂಡುವಿಕೆ) - "ಮದ್ಯಂ ಮತ್ಸ್ಯಮ್ ತಥಾ ಮಾಂಸಂ ಮುದ್ರಮ್ ಮೈಥುನಂ ಏವ ಚ" ಕಾಳೀವಿಲಾಸ ತಂತ್ರ. ಸಾಧಕನಿಗೆ ಮದ್ಯವು ಸಹಸ್ರಾರಚಕ್ರದಲ್ಲಿ ದೇವಿ ಮತ್ತು ಶಿವ ಇವರ ಸಮಾಗಮದಿಂದ ಉತ್ಪತ್ತಿಯಾಗುವ ಮಕರಂದದಂತಹ ದ್ರವದ ಪ್ರತೀಕವಾಗಿದೆ. ಆಗಮಸಾರವು, "ಬ್ರಹ್ಮ ರಂಧ್ರದಿಂದ ಸ್ರವಿಸುವ ಮಕರಂದವನ್ನು ಸೇವಿಸುವುದರಿಂದ ವ್ಯಕ್ತಿಯು ಆನಂದದಿಂದ ತುಳುಕುತ್ತಾನೆ (ಬ್ರಹ್ಮಾನಂದನ್ನು ಪಡೆಯುತ್ತಾನೆ). ಇದರ ಪ್ರತೀಕವೇ ಮದ್ಯ ಅಥವಾ ದ್ರಾಕ್ಷಾರಸ. "ಸೋಮಧಾರಕ್ಷರೇದ್ ಯಸ್ತು ಬ್ರಹ್ಮರಂಧ್ರಾದ್ ವರಾನನೆ, ಪೀತ್ಯಾನಂದಯ ಯಸ್ತಂ ಸ ಏವ ಮದ್ಯ ಸಾಧಕ" - ಉಲ್ಲೇಖ: ತಂತ್ರಗಳು, ಅವುಗಳ ತತ್ವ ಮತ್ತು ನಿಗೂಢರಹಸ್ಯಗಳು; ಲೇ: ಡಿ. ಎನ್. ಬೋಸ್; ಕಲ್ಕತ್ತಾ, ೧೯೫೬, ಪುಟ ೧೨೩. (Cited in, The Tantras, their philosophy and occult Sectrets, by D.N. Bose, Calcutta, 1956, page 123).
ಈಗ ಈ ಉಪಾಸನೆಯ ಸುಧಾರಿತ ರೂಪದಲ್ಲಿ; ದೈವೀ ಮಕರಂದವನ್ನು ಪ್ರತಿನಿಧಿಸಲು ಮದ್ಯಸಾರ ದ್ರವದ ಬದಲಿಗೆ ಎಳನೀರನ್ನು ಉಪಯೋಗಿಸುವ ವಾಡಿಕೆಯಿದೆ.
ಹೀಗೆ ಪ್ರತೀಕಗಳನ್ನು ಉಪಯೋಗಿಸುವುದು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ; ಅವು ಇತರ ಧರ್ಮಗಳಲ್ಲೂ ಪ್ರಚಲಿತವಿವೆ. ಉದಾಹರಣೆಗೆ, ಕ್ರೈಸ್ತರಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ ದ್ರಾಕ್ಷಾರಸ ಮತ್ತು ಬ್ರೆಡ್ಡನ್ನು ಸ್ವೀಕರಿಸುವ ಸಂಪ್ರದಾಯವಿದೆ; ಇದರ ಹಿಂದಿರುವ ನಂಬಿಕೆ ಏನೆಂದರೆ ಸಾಮೂಹಿಕ ಪ್ರಾರ್ಥನೆಯ ನಂತರ ದ್ರಾಕ್ಷಾರಸವು ಏಸುವಿನ ರಕ್ತವಾಗಿ ರೂಪಾಂತರ ಹೊಂದಿದರೆ; ಬ್ರೆಡ್ಡು ಏಸುವಿನ ಮಾಂಸಖಂಡವಾಗುತ್ತದೆ.
'ವಾರುಣಿ' ಎಂದರೆ ವರುಣನಿಗೆ ಪ್ರಿಯವಾದ ಖರ್ಜೂರದ ಹಣ್ಣುಗಳಿಂದ ತಯಾರಿಸಿದ ರಸವೆಂದೂ ಅರ್ಥೈಸಬಹುದು. ಪ್ರತಿಯೊಂದು ರೀತಿಯ ಮದ್ಯಕ್ಕೂ ಪ್ರತ್ಯೇಕವಾದ ಹೆಸರುಗಳಿದ್ದವು. ಉದಾಹರಣೆಗೆ - ಅಕ್ಕಿಯಿಂದ ತಯಾರಿಸಿದ ಮದ್ಯಕ್ಕೆ ಸೋಮವೆಂದು ಹೆಸರಿದ್ದರೆ, ಬಾರ್ಲಿ(ಜವೆಗೋಧಿ)ಯದು ಕೋಹಲ; ಗೋಧಿಯಿಂದ ತಯಾರಿಸಲ್ಪಟ್ಟದ್ದು ಮಧುಲಿಕವಾಗಿತ್ತು. ಪುರಾತನ ಕಾಲದಲ್ಲಿ ಮದ್ಯವನ್ನು ಸ್ತ್ರೀಯರೂ ಸೇವಿಸುತ್ತಿದ್ದರು. ಮನುಷ್ಯನು ತನಗೆ ಪ್ರಿಯವಾದುದನ್ನು ಮತ್ತು ಅವನು ಉಪಯೋಗಿಸುವುದನ್ನು ದೇವರಿಗೆ ಅರ್ಪಿಸುತ್ತಾನೆ.
ಕೃಪೆಯಿಂ ಸಂಪದಗಳ ದಯಪಾಲಿಸುವವಳೆ (ದಯಾವಿಭವಕಾರಿಣೀಂ) - ವಿಭವ ಎಂದರೆ ಐಶ್ವರ್ಯ ಮತ್ತು ಚರಮ ಲಕ್ಷವೆಂದು ಅರ್ಥೈಸಬಹುದು. ಮೊದಲನೆಯದು ಇಹಲೋಕದಲ್ಲಿ ಸುಖವಾಗಿರುವುದಕ್ಕೆ ಅವಶ್ಯವೆನಿಸಿದರೆ, ನಂತರದ್ದು ಪರದಲ್ಲಿ ಹೊಂದಬೇಕಾದ ಅಂತಿಮಗುರಿಗೆ ಅವಶ್ಯಕ. ತ್ರಿಪುರಸುಂದರಿಯು ಸಂತೋಷ ಮತ್ತು ಬಿಡುಗಡೆ ಎರಡನ್ನೂ ಕರುಣಿಸುವವಳು. (ಭುಕ್ತಿ ಮುಕ್ತಿ ಪ್ರದಾಯಿನಿ). ಶಂಕರರು ಸರಿಯಾಗಿಯೇ ದೇವಿಯನ್ನು ಈ ಕುರಿತಾಗಿ ಸ್ತುತಿಸಿದ್ದಾರೆ; ಏಕೆಂದರೆ ಅವಳು ಇಹಪರ ಸುಖಪ್ರದಾಯಿನಿ; ಅಂದರೆ ಭೂಲೋಕದ ಜೀವನದಲ್ಲಿ ಮತ್ತು ಪರಲೋಕದ ಜೀವನದಲ್ಲಿ ಸೌಖ್ಯವನ್ನುಂಟುಮಾಡುವವಳು.
ಶುಭ್ರನೇತ್ರೆಯೇ (ವಿಶದ ಲೋಚನೀಂ) - ಎಲ್ಲಾ ವಸ್ತುಗಳಲ್ಲಿಯೂ ಅವಳು ಬದ್ಧಳಾಗದ ಪ್ರೇಕ್ಷಕಿ. ಅವಳು ಯಾವುದೇ ರೀತಿಯ ಅನುಭವಗಳಿಂದ, ಸಂತೋಷಗಳಿಂದ ಅಥವಾ ಯಾತನೆಗಳಿಂದ ವಿಚಲಿತಳಾಗುವುದಿಲ್ಲ, ಅವಳು ಯಾವಾಗಲೂ ನಿರ್ಲಿಪ್ತ ಭಾವದಿಂದಿದ್ದು, ಶಾಂತವಾಗಿ ಮತ್ತು ನಿತ್ಯತೃಪ್ತಿಯಿಂದ ಕೂಡಿದ ಕಣ್ಣಿನವಳಾಗಿದ್ದಾಳೆ.
ವಿಹಾರಿಣಿಯೇ (ಚಾರಿಣೀಂ) - ಅವಳು ಎಲ್ಲಾ ಜೀವಿಗಳಲ್ಲಿ ಚಲಿಸುವ ಚೈತನ್ಯವಾಗಿದ್ದರೂ ಕೂಡಾ ಅವಳಿಗೆ ಯಾವುದೇ ರೀತಿಯ ಬಂಧನ ಅಥವಾ ಮೋಹವಿಲ್ಲ. ಗೀತೆಯಲ್ಲಿ ಭಗವಂತನು ಹೇಳುತ್ತಾನೆ; "ಕರ್ಮಫಲದ ಆಸೆಯು ನನ್ನಳೊಗೆ ಇಲ್ಲ" (ನ ಮೇ ಕರ್ಮಫಲೇ ಸ್ಪೃಹಃ, ಭಗವದ್ಗೀತೆ ೪.೧೪). ಎಲ್ಲರೊಳಗೂ ನಿವಸಿಸುವ ಅವಳ ಚಲನೆಯು ಯಾವುದೇ ರೀತಿಯ ಬಂಧನಕ್ಕೊಳಗಾಗದ ಸ್ವೇಚ್ಛಾ ಸಂಚಾರವಾಗಿದೆ.
*****
ವಿ.ಸೂ.: ಈ ಕಂತಿನ ಶ್ಲೋಕ - ೨ರ ಭಾಗವು ’ತ್ರಿಪುರ ಸುಂದರಿ ಅಷ್ಟಕಮ್" - ಪ್ರಕಟಣೆ(೧೯೮೬): ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮೈಲಾಪುರ್, ಮದ್ರಾಸ್ - ೬೦೦ ೦೦೪, ಪುಸ್ತಕದ ೧೦ರಿಂದ ೧೬ನೇ ಪುಟದ ಅನುವಾದವಾಗಿದೆ. ಮೂಲ ಇಂಗ್ಲೀಷ್ ಕರ್ತೃ - ಶ್ರೀಯುತ ಎಸ್. ಕಾಮೇಶ್ವರ್, ಮುಂಬಯಿ.
ಈ ಸರಣಿಯ ಹಿಂದಿನ ಲೇಖನ "ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೨: ಸ್ತೋತ್ರ - ೧ರ ವ್ಯಾಖ್ಯಾನಕ್ಕೆ ಕೆಳಗಿನ ಕೊಂಡಿಯನ್ನು ನೋಡಿ:
http://sampada.net/blog/%E0%B2%A4%E0%B3%8D%E0%B2%B0%E0%B2%BF%E0%B2%AA%E0%B3%81%E0%B2%B0-%E0%B2%B8%E0%B3%81%E0%B2%82%E0%B2%A6%E0%B2%B0%E0%B2%BF-%E0%B2%85%E0%B2%B7%E0%B3%8D%E0%B2%9F%E0%B2%95%E0%B2%AE%E0%B3%8D-%E0%B2%AD%E0%B2%BE%E0%B2%97-%E0%B3%A8-%E0%B2%B8%E0%B3%8D%E0%B2%A4%E0%B3%8B%E0%B2%A4%E0%B3%8D%E0%B2%B0-%E0%B3%A7%E0%B2%B0-%E0%B2%B5%E0%B3%8D%E0%B2%AF%E0%B2%BE%E0%B2%96%E0%B3%8D%E0%B2%AF%E0%B2%BE%E0%B2%A8/18/08/2012/37991
ಚಿತ್ರಕೃಪೆ:
ಸರಸ್ವತಿ -ವಿಕಿಪಿಡಿಯಾ
http://en.wikipedia.org/wiki/File:Saraswati.jpg
ಬೆನ್ನುಮೂಳೆಯ ಭಾಗವಾಗಿ ವೀಣೆಃ
http://www.google.co.in/imgres?hl=en&sa=X&biw=2732&bih=1179&tbm=isch&prmd=imvns&tbnid=eCj3zF_0fFytTM:&imgrefurl=http://adrishta.com/%3Fp%3D1266&docid=BlR0Np-ftr5aQM&imgurl=http://adrishta.com/wp-content/uploads/2010/12/dfx.gif&w=1965&h=1397&ei=H-EwUI7rBIzJrAfwwoGQDA&zoom=1&iact=hc&vpx=1504&vpy=164&dur=960&hovh=190&hovw=266&tx=148&ty=138&sig=110207964646523070807&page=1&tbnh=78&tbnw=112&start=0&ndsp=155&ved=1t:429,r:11,s:0,i:156
ವೀಣೆಯ ಭಾಗಗಳು
https://encrypted-tbn1.google.com/images?q=tbn:ANd9GcSPAeDtIe9VrrWTWnelcusJeYq1wg-KFhCNvB4Keo4PBlEnT02sIg
Rating
Comments
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ by nanjunda
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ by nanjunda
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ by nanjunda
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ by nanjunda
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ by partha1059
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ by ಗಣೇಶ
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ by partha1059
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ by makara
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ
In reply to ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ by Prakash Narasimhaiya
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ
ಉ: ತ್ರಿಪುರ ಸುಂದರಿ ಅಷ್ಟಕಮ್ - ಭಾಗ ೩: ಸ್ತೋತ್ರ - ೨ರ ವ್ಯಾಖ್ಯಾನ