ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ !

ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ !

 

ಸುಮ್ನೆ ಒಮ್ಮೆ ಯೋಚನೆ ಮಾಡಿ ... ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ !

ಯಾವನೋ ಒಬ್ಬ ಪುಣ್ಯಾತ್ಮ ತೀರಿಕೊಂಡ. ನೂರಾರು ಜನ ಸೇರಿದರು. ಸ್ಮಶಾನಕ್ಕೆ ಹೋದ ಜನ ಗುಂಡಿ ತೋಡಿ, ಹೆಣವನ್ನಿಟ್ಟು, ಮಣ್ಣುದರಿಸಿ ಎದ್ವಾ ತದ್ವಾ ಅಳ್ತಿದ್ರು ... ಅಲ್ಲೇ ಪಕ್ಕದ ಗುಂಡಿಯಿಂದ ಎದ್ದ ಮತ್ತೊಂದು ಅಸ್ತಿಪಂಜರವೊಂದು "ಏ! ಥತ್ತೇರೀಕೆ !! ಭಾನುವಾರ, ಮಧ್ಯಾನ್ನ ಸ್ವಲ್ಪ ಹೊತ್ತು ಮಲಗಿರಣ ಅಂದ್ರೆ ಬಿಡಾಕಿಲ್ಲ ಜನ. ಹೋಗ್ರಪ್ಪಾ ಅತ್ಲಾಗೆ. ನಾವಿದ್ದೀವಿ ನೋಡ್ಕೋತೀವಿ ... ಹೋಗಿ ಮನೆಗೆ"

ಅದನ್ನ ಕೇಳಿ ಇನ್ನೆಷ್ಟು ಜನ ಗುಂಡಿಗೆ ಬಿದ್ರು ಅಂತ ಕೇಳಬೇಡಿ !

--------

"ಅಪ್ಪ! ರಿಸಲ್ಟ್ ಬಂತು" 

"ಮುಂದೆ ಹೇಳೋ!" 

"ಅದೂ, ಅದೂ, ಫರ್ಸ್ಟ್ ಕ್ಲಾಸ್ ಬರಲಿಲ್ಲ ಅಪ್ಪ" 

"ಮತ್ತೇ?" 

"ಅದೂ, ಸೆಕಂಡ್ ಕ್ಲಾಸ್ಸ್ ಬಂತು"

"ಅಯ್ಯೋ ಶಿವನೇ? ಎಲ್ಲೆಂದ ದುಡ್ಡು ತರಲಿ ಕಾಲೇಜಿಗೆ. ಅದಕ್ಕೇ ಬಡ್ಕೊಂಡೆ ಮಗನೇ. ಸ್ವಲ್ಪ ಜಾಸ್ತಿ ಓದು ಅಂತ. ಕೇಳಿದ್ಯಾ?"

ಮೂಲೆಯಲ್ಲಿದ್ದ ಅಜ್ಜಿ ಕೇಳಿದರು "ಅದ್ಯಾಕೋ ಹಂಗೆ ಹಾರಾಡ್ತೀಯಾ? ಒಳ್ಳೇ ಮಾರ್ಕ್ಸ್ ತೊಗೊಂಡಿದೆ ತಾನೇ ಮಗೂ ! ಅದಕ್ಯಾಕೆ ಬೈತೀಯಾ?"

"ಅಮ್ಮ, ನಿನಗೆ ಅದೆಲ್ಲ ಅರ್ಥ ಆಗಲ್ಲ. ಸೆಕಂಡ್ ಕ್ಲಾಸ್ ಅಂದ್ರೆ ಗೊತ್ತ? ೯೮% ಗಿಂತ ಮೇಲೆ ೯೯% ಗಿಂತ ಕೆಳಗೆ ....೯೯%’ನಿಂದ ಮೇಲೆಲ್ಲ ಫರ್ಸ್ಟ್ ಕ್ಲಾಸು. ಅಷ್ಟು ಪೈಪೋಟಿ ಇದೆ ಇವತ್ತು. ನಮ್ ಕಾಲ ಚೆನ್ನಾಗಿತ್ತು. ೯೦ರ ಮೇಲೆ ಬಂದ್ರೆ ಸಾಕು ಫರ್ಸ್ಟ್ ಕ್ಲಾಸು"

ಹೀಗಾಗಲು ಹೆಚ್ಚು ದಿನ ಬೇಕಿಲ್ಲ ಅಂದುಕೊಳ್ತೀನಿ.

------

 

ಹೀಗೆ ಮತ್ತೊಬ್ಬ ಸಾವಿನಂಚಿನಲ್ಲಿದ್ದ ... ಆದರೂ, ಯಾರೋ ಹೇಳಿದ್ರು "ಏನಪ್ಪ, ಎನೂ ಆಗಲ್ಲ, ಯೋಚನೆ ಮಾಡಬೇಡ ... ನಿನಗೇನಾದ್ರೂ ಮನದಲ್ಲಿ ಆಸೆ ಇದ್ರೆ ಹೇಳು ... ಯಾರನ್ನಾದ್ರೂ ನೋಡಬೇಕಾ? ಏನಾದ್ರೂ ತಿನ್ನಬೇಕಾ?" 

"ಅದೆಲ್ಲ, ಏನೋ ಬ್ಯಾಡ ... ಫೇಸ್ ಬುಕ್ ಓಪನ್ ಮಾಡಿಕೊಡು ... ನಾನು ಓಯ್ತಾ ಇದ್ದೀನಿ ಅಂತ ಅಪ್ಡೇಟ್ ಹಾಕಿಬಿಡ್ತೀನಿ"

 

Comments