ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ

ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ

ಅತಿಥಿಗಳು ಮನೆಗೆ ಬಂದಾಗ ಸಾಮಾನ್ಯವಾಗಿ ಸ್ವಲ್ಪ ದಿನ ಇದ್ದು ಹೊರಡುತ್ತಾರೆ, ಮನೆ ಬಿಟ್ಟು ಹೊರಡುವಾಗ ಇನ್ನೊಮ್ಮೆ ಬನ್ನಿ ಎಂದು ಹೇಳುವುದುಂಟು. ಆದರಿಲ್ಲಿ ಹೊರಟು ನಿಂತವರನ್ನು ಮೂರೂ ದಿನದಿಂದ ಹೋಗಲೇಬೇಡಿ ಇಲ್ಲೇ ಇರಿ ಎಂದು ಸರ್ಕಾರದ ನಾಯಕರು ಗೋಗರೆಯುತ್ತಿದ್ದಾರೆ.

ಬರಗಾಲ ಬಂದಾಗ ಸುಮ್ಮನೆ ಪ್ಯಾಕೇಜ್ಗಳನ್ನ ಘೋಷಣೆ ಮಾಡುವ (ಸಂಬಂಧಪಟ್ಟವರನ್ನು ಅದು ತಲುಪದಿದ್ದರೂ), ರೈತರು ಆತ್ಮಹತ್ಯೆ ಮಾಡಿಕೊಂಡಾಗ ಹತ್ತಿರ ಹೋಗದ, ಪ್ರವಾಹ ಬಂದಾಗ ಬರೀ ವೈಮಾನಿಕ ಸಮೀಕ್ಷೆ ನಡೆಸಿ ಮರೆತುಹೋಗುವ ಇವರು ಹೊರಹೋಗುತ್ತಿರುವವರನ್ನು ಒಲಿಸಿಕೊಳ್ಳುವುದನ್ನ ನೋಡಿದರೆ ಇವರು ನಮ್ಮವರಿಂದ ಆರಿಸಿಬಂದವರೋ ಅಥವಾ ಹೊರಬಂದವರಿಂದ ಆರಿಸಿಬಂದವರೋ ಎಂಬ ಅನುಮಾನ ಕಾಡುತ್ತದೆ. ದಟ್ಟ ದಾರಿದ್ರ್ಯದ ನಡುವೆ ಬಟಾ ಬಯಲಾಗುತ್ತಿರುವ ಕುಟುಂಬಗಳೆಷ್ಟೋ. ಹಸಿವೆಯನ್ನ ತಾಳಲಾರದೆ ತನ್ನ ಕುಟುಂಬವನ್ನ ಸಲಹುವ ಸಲುವಾಗಿ ತನ್ನ ಹುಟ್ಟೂರನ್ನೇ ಬಿಟ್ಟು ಗುಳೇ ಹೋದವರೆಷ್ಟೋ. ಶೌಚಾಲಯವಿಲ್ಲದೆ ಹೀನ ಕೃತ್ಯಗಳಿಗೆ ಬಲಿಯಾಗುತ್ತಿರುವವರೆಷ್ಟೋ. ರಾಜಕೀಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

Rating
No votes yet

Comments