ನಿರಾಕಾರನಿಗೆ

ನಿರಾಕಾರನಿಗೆ

ಕವನ

ಅರಿವು ಇರುವ ಕಡೆ

ಶಬುದಗಳಿರವು

ದೀಪದೊಲು ಮೌನ

ಬೆಳಗುವುದು

 

ಗದ್ದಲ ಇರುವ ಕಡೆ

ಧ್ಯಾನವಿರದು

ಬಚ್ಚಲು ನೀರಂತೆ ಅಜ್ಞಾನ 

ನಿಲ್ಲುವುದು

 

ಎಲ್ಲಿ ನೀನಿರುವೆಯೊ

ಅಲ್ಲಿ

ನಾನು ಇರುವುದಿಲ್ಲ

ಎಲ್ಲಿ ನಾನು ಇರುವುದಿಲ್ಲವೊ

ಅಲ್ಲಿ

ನೀನು

ಮಾತ್ರವಿರಬಲ್ಲೆ!

.................................

 

Comments