ತಪ್ಪು ಯಾರದ್ದು?

ತಪ್ಪು ಯಾರದ್ದು?

ಹೊಗೇನಕಲ್ ನೀರಾವರಿ ಕಾಮಗಾರಿಯ ಕುರಿತಾಗಿ ನಟ ಶ್ರೀ ರಜನಿಕಾಂತ್ ಅವರು ಐದು ಕೋಟಿ ಜನ ಕನ್ನಡಿಗರಿಗೆ ಒದೆಯಬೇಕು ಎಂದು ಹೇಳಿದ್ದಾರೆ ಎಂದು ನಮ್ಮ ಸೋ ಕಾಲ್ಡ್ ರಾಜಕಾರಣಿಗಳು ಮತ್ತು ಹಿರಿಯರೆನಿಸಿಕೊಂಡ ಮೇಧಾವಿ ಚಲನಚಿತ್ರ ನಟರು ರಜನಿಕಾಂತ್ ಅವರನ್ನು ಕನ್ನಡಿಗರ ಕ್ಷಮೆ ಕೇಳಬೇಕೆಂದು ಕೇಳುತ್ತಿರುವುದು ಹೇಸಿಗೆಯ ಸಂಗತಿಯಾಗಿದೆ. ರಜನಿಕಾಂತ್ ಅವರು ಹಾಗೆ ಹೇಳಿರುವುದು ಸಾಧವೇ ಇಲ್ಲ ಆದರೂ ಕ್ಷಮೆ ಕೇಳಬೇಕೆಂಬ ಹೀನಾಯ ರಾಜಕೀಯ ಪ್ರಚಾರ ನಮ್ಮ ಕಳಪೆ ರಾಜಕಾರಣಿಗಳಿಗೆ ಯಾಕೆ ಬೇಕು?

ಕರ್ನಾಟಕದಲ್ಲಿ ಜನಪರ ಕಾಮಗಾರಿ ಕಾರ್ಯಗಳನ್ನು ಮಾಡುವ ಯೋಗ್ಯತೆ ಇಲ್ಲದವರು ಈ ರೀತಿಯ ಹೇಯ ಮಾತುಗಳನ್ನು ಹೇಳಬಾರದು. ಹೊಟ್ಟೆಗೆ ಅನ್ನವಿಲ್ಲದಾಗ ರಜನಿಕಾಂತ್ ಅವರಿಗೆ ಅನ್ನ ಹಾಕದ ಕನ್ನಡ ಚಿತ್ರರಂಗಕ್ಕೆ ಅಗ ರಜನಿಕಾಂತ್ ಅವರು ಕನ್ನಡಿಗರು ಎನ್ನುವುದು ಮರೆತಿಹೋಗಿತ್ತೇನೋ ಪಾಪ? ಆದರೆ ಈಗ `ರಜನಿಕಾಂತ್ ಅವರು ಕನ್ನಡಿಗರು, ಅವರು ಕನ್ನಡಿಗರಲ್ಲಿ ಕ್ಷಮೆ ಕೇಳುವುದರಲ್ಲಿ ತಪ್ಪೇ ಇಲ್ಲ' ಎಂದು ಸ್ಟೇಟ್‍ಮೆಂಟ್‍ಗಳನ್ನು ಕೊಡುವ ಯಾವ ಹಕ್ಕೂ ಅಥವಾ ಯೋಗ್ಯತೆಯೂ ಅವರಿಗೆ ಇಲ್ಲ.

ಇದು ಸೂಪರ್ ಸ್ಟಾರ್ ರಜನಿ ಅವರ ಮಾತೇ ಅಲ್ಲ, ಪ್ರಕಾಶ್ ರಾಜ್, ಅರ್ಜುನ್ ಸರ್ಜಾ, ಮುರಳಿ ಅವರಿಗೂ ಅನ್ವಯಿಸುತ್ತದೆ. ತಮಿಳು ಚಿತ್ರರಂಗದವರು ಇವರ ಕಲೆಯನ್ನು ಗುರುತಿಸಿ ಕರೆದು ಅನ್ನ ಹಾಕಿದ್ದಾರೆ. ಅಂಥದ್ದರಲ್ಲಿ ತಮಿಳುನಾಡಿಗೆ ಅವರು ಸಪೋರ್ಟ್ ಮಾಡುವುದರಲ್ಲಿ ತಪ್ಪೇ ಇಲ್ಲ. ಈ ಮುನ್ನ ಕಾವೇರಿ ವಿರುದ್ಧವಾಗಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ರಜನಿಕಾಂತ್ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಎಂದೂ ಪತ್ರಕರ್ತರ ಬಗ್ಗೆ ಸಿಟ್ಟಾಗದ ರಜನಿಕಾಂತ್ ಅವರು ಅಂದು ``ನಾನು ಕರ್ನಾಟಕದ ಪರವಾಗಿ ಹೋದರೆ ತಮಿಳಿನವರು ನಾವು ನಿನಗೆ ಅನ್ನ ಹಾಕಿರುವುದು ನೀನು ನಮ್ಮ ಪರವಾಗೇ ಇರಬೇಕು ಎನ್ನುತ್ತಾರೆ, ತಮಿಳರ ಪರವಾಗಿ ಹೋದರೆ ನೀನು ಕನ್ನಡದವನು ಕರ್ನಾಟಕ ಪರವಾಗೇ ನೀನು ಇರಬೇಕು ಎನ್ನುತ್ತಾರೆ, ಇಬ್ಬರ ಪರವಾಗಿಯೂ ಹೋದರೆ, ನೀನು ಮರಾಠಿಯವನು ಬಾಯಿ ಮುಚ್ಚಿಕೊಂಡು ನೀನು ಸುಮ್ಮನೆ ಕೂಡು ಎನ್ನುತ್ತಾರೆ, ನಾನು ಇವರ ಮಧ್ಯೆ ಸಾಯಬೇಕೆ?'' ಎಂದಿದ್ದರು.

ಇಂಥ ತ್ರಿಶಂಕು ಪರಿಸ್ಥಿತಿಯಲ್ಲಿ ಇರುವ ಇಂಥವರನ್ನು ಯಾಕೆ ಗೋಳಾಡಿಸುತ್ತಾರೆ? ಆಗ ಕಾಣಿಸದ ಕನ್ನಡಿಗ ಈಗ ಮಾತ್ರ ನಮ್ಮ ರಾಜಕಾರಣಿಯ ಕಣ್ಣಿಗೆ ಕಾಣಿಸಿದನೆ? ಹೋಗಲಿ ರಜನಿಕಾಂತ್ ಅವರು ಬಡವರಿಗೆ ಮಾಡಿರುವ ಸಹಾಯ ನಮ್ಮ ರಾಜಕಾರಣಿಕಾರಣಿಗಳು ಯಾರು ಮಾಡಿದ್ದಾರೆ? ಯಾವ ಒಳ್ಳೆಯ ಕೆಲಸ ಮಾಡದಿದ್ದರೂ ಕುರ್ಚಿಯ ಆಸೆಗೆ ಮಾತ್ರ ಆ ಪಕ್ಷದವರು ಇಷ್ಟು ಆಸ್ತಿ ಮಾಡಿದ್ದಾರೆ ಈ ಪಕ್ಷದವರು ಇಷ್ಟು ಆಸ್ತಿ ,ಮಾಡಿದ್ದಾರೆ ಎಂದು ಕಿತ್ತಾಡುತ್ತಿದ್ದರೆ ಇಲ್ಲಿ ಸಾಯುತ್ತಿರುವವರು ನಮ್ಮಂಠ ಜನರೇ ಹೊರತು ಯಾರೂ ಅಲ್ಲ.

ಕನ್ನಡದ ಜನಪ್ರಿಯ ನಟಿಯೊಬ್ಬರು ಅತ್ತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಗೆದ್ದ ಮಾತ್ರಕ್ಕೆ ಅವರು ರಜನಿಕಾಂತ್ ಅವರು ಕ್ಷಮೆ ಕೇಳಲಿ, ನಾವು ಕ್ಷಮಿಸಿ ದೊಡ್ಡವರಾಗೋಣ ಏಂಬ ಆಸೆ ನನ್ನದು ಎಂದು ಟಿ ವಿ ೯ ಚಾನೆಲ್‍ನಲ್ಲಿ ಬಹಿರಂಗವಾಗಿ ಹೇಳಿದ್ದರು. ಅಂದರೆ ಅವರೆಂದಿಗೂ ದೊಡ್ಡವರೇ ಅಲ್ಲ ಎಂದೇ ಅರ್ಥ. ಇಂಥ ದುರಾಸೆಗಳಿಗೆ ಬಿದ್ದಿರುವ ನಟರಿಗೆ ಅದ್ಯಾರು ರಾಷ್ಟ್ರ ಪ್ರಶಸ್ತಿ ಕೊಟ್ಟರೋ ಏನೋ?

ಹಾಗೂ ರಜನಿಕಾಂತ್ ಅವರು ಹೇಳಿರುವುದು ಐದು ಕೋಟಿ ಕನ್ನಡಿಗರಿಗೆ ಒದೆಯಿರಿ ಎಂದಲ್ಲ. ಸಾಮಾನ್ಯ ಜನರ ಜೀವನ ಅಸ್ತವ್ಯಸ್ತ ಮಾಡುತ್ತಿರುವ ಪುಂಡರಿಗೆ ಒದೆಯಿರಿ ಎಂದು. ಎಷ್ಟೋ ಕನ್ನಡ ಪರ ಸಂಘಗಳು ಕನ್ನಡ ಕನ್ನಡ ಎಂದು ಹೋರ್‍ಆಡುತ್ತಿವೆ ಯಾಕೆ? ಕೇವಲ ಪ್ರಚಾರಕ್ಕಾಗಿ ಮಾತ್ರ ಅಷ್ಟೇ ಅವರ ಸೀಮಿತ ಪ್ರದೇಶ. ಬೇರೆ ಯಾವುದಕ್ಕೂ ಅಲ್ಲ. ರಾಜ್ಯೋತ್ರವದ ಸಮಯದಲ್ಲಿ ಇಡೀ ನವೆಂಬರ್ ತಿಂಗಲು ಮೈಕುಗಳನ್ನು ಹಾಕಿಕೊಂಡು ಆರ್ಕೇಸ್ಟ್ರಾ ಹಾಡುವುದೇ ಕನ್ನಡ ಭಾಷೆಗೆ ತಾವು ಮಾಡುತ್ತಿರುವ ಒಳ್ಳೆಯ ಕೆಲಸ ನೀಡುತ್ತಿರುವ ಗೌರವ ಎಂದು ತಿಳಿದ ಮುಠ್ಠಾಳರಿಗೆ ಕನ್ನಡ ಎಂ಼ದರೆ ಏನು ಎಂದು ಕೇಳಿದರೆ ಯಾವ ರೀತಿ ತಾನೆ ಉತ್ತರ ಕೊಟ್ಟಾರು?

ಆದ್ದರಿಂದ ಸ್ನೇಹಿತರೇ ನೀವೂ ಸಹ ಈ ಬಗ್ಗೆ ಒಮ್ಮೆ ಯೋಚಿಸಿ. ಯಾರು ಸತ್ಯ ನುಡಿಯುತ್ತಿದ್ದಾರೆ ಎಂದು.

Rating
No votes yet

Comments