ಒಂದು ಹುಡ್ಗೀನೂ ಬೀಳಂಗಿಲ್ಲಲೇ

ಒಂದು ಹುಡ್ಗೀನೂ ಬೀಳಂಗಿಲ್ಲಲೇ

ಅವರಿಬ್ಬರೂ ಗೆಳೆಯರು, ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಸ್ವಲ್ಪ ಬೇಗ ಕೆಲಸ ಮುಗಿಸಿ ಮನೆಗೆ ಹೊರಡುವ ಮುನ್ನ ಆಫೀಸಿನ ಬಳಿಯಿರುವ ಪಾರ್ಕ್ ಬಳಿ ಒಂದು ವಾಕ್ ಹೋಗಿ ಬರೋಣವೆಂದು ಹೊರಟರು. ಹೀಗೆ ಅದೂ ಇದೂ ಮಾತನ್ನಾಡುತ್ತಾ ಒಬ್ಬ ಸ್ವಲ್ಪ ಬೇಸರದಿಂದ 'ನಮ್ ಮುಖಕ್ಕೆ ಒಂದು ಹುಡ್ಗೀನೂ ಬೀಳಂಗಿಲ್ಲಲೇ' ಅಂದ. ಇನ್ನೊಬ್ಬ ಅದಕ್ಕೆ 'ನನ್ ಮುಖ ಅನ್ನು, ನಮ್ ಮುಖ ಅಂತ ನನ್ನನ್ನೂ ಸೇರಿಸ್ಬೇಡ!' ಅಂದು 'ಸರಿ, ನಿನ್ನ ಪ್ರಶ್ನೆಗೆ ಉತ್ತರ ಹೇಳ್ಬೇಕೆನಲೇ?' ಅಂದಾಗ ಅವನು ಹೂಂ ಎಂಬಂತೆ ಉತ್ತರ ತಿಳಿಯಲು ಪ್ರಶ್ನಾರ್ಥಕವಾಗಿ ಗೆಳೆಯನ ಮುಖ ನೋಡಿದ. ಅದಕ್ಕವನು

.

.

.

.

.

.

.

.

.

.

.

.

.

.

.

.

.

.

.

.

.

.

.

.

'ನೋಡ್ಲೇ ತಮ್ಮಾ, ಅವ್ರ ಮನೇನಲ್ಲಿ ಆ ಹೆಣ್ಮಕ್ಲಿಗೆ ಹುಟ್ದಾಗಿಂದ ಹೆಂಗೆ ನಡೀಬೇಕು ಅಂಥಾ ಚೆನ್ನಾಗೇ ಕಲ್ಸಿರ್ತಾರೆ. ಅದ್ಕೆ ಅವು ಬೀಳಲ್ಲ'

Rating
No votes yet

Comments