ಸಂವಾದ
ನನ್ನಪ್ಪನೇನು ಪ್ರಪಂಚವನ್ನಾಳುವ ದೊರೆಯಲ್ಲ
ವಿಜ್ನಾನಿ, ವೈಧ್ಯ, ಮೇಧಾವಿ, ಇಂಜೇನಿಯರ್
ಅಥಾವ ಹೆಸರುಗಳಿಸಿದ ಅಟಗಾರನೇನಲ್ಲ
ಬಹು ಕಂಪನಿಗಳ ಒಡೆತನವಿರುವ ಮಾಲೀಕನೊ ಅಲ್ಲ!
ಅವನ ಹೆಸರನ್ನ ಎಲ್ಲಿಯಾದರೊ ಕೆತ್ತಿಸಿದ ಉದಾಹರಣೆಗಳೊ ಇಲ್ಲ
ಅದರೊ, ನನ್ನಪ್ಪ ನನ್ನನ್ನ ವ್ಯಾಪಕವಾಗಿ ಆವರಿಸಿದ್ದಾನೆ.
ಗದರಿದ್ದು, ಹತ್ತಲ್ಲ ನೂರು ಬಾರಿ ಬೈದದ್ದು
ಹೊಡೆದದ್ದು ಇದೆ, ಅದರೊ ಕೋಪ
ನಿಂತ ನೀರಾಗಲಿಲ್ಲ!
ಕಣ್ಣುಗಳಲ್ಲಿನ ಭಾವಗಳನ್ನ ಅಳೆಯುವುದನ್ನ
ಮಾತಿನ ಹಿಂದಿನ ಅರ್ಥಗಳನ್ನ, ಅನರ್ಥಗಳನ್ನ
ಮೌನ ಹಾಗೊ ಮಾತಿನ ನಡುವಿರುವ ಕಂದಕಗಳನ್ನ
ಬೆವರ ದುಡಿಮೆಯ ಅನ್ನದ ಸವಿಯನ್ನ, ಸವಿಯುವುದನ್ನ,
ಸೋತಾಗ ನಗುವುದನ್ನ, ಗೆದ್ದಾಗ ಬೀಗದಿರುವುದನ್ನ,
ಸೋತವರನ್ನ ಸಂತೈಸುವುದನ್ನ, ಕಸ್ಟಗಳಿಗೆ ಬೆನ್ನುಮಾಡದೆ
ಕನಸುಗಳೆಡೆಗೆ ಮುನ್ನುಗುವುದನ್ನ ಮನದಟ್ಟುಮಾಡಿ
ಬದುಕಿಗೆ ದಾರಿ ದೀಪವಾಗಿ ಬೆರೆತಿದ್ದಾನೆ
ಈಗ, ಮೈ ಕೈ ಮುದುರಿ, ಕಾಲುಗಳಲ್ಲಿ ಶಕ್ತಿ ಕುಂದಿ, ಕಣ್ಣುಗಳಲ್ಲಿ
ಮೌನದ ಮಾತುಗಳಲ್ಲಿ, ನನ್ನ ಕೆಣಕುತ್ತಾ
ಅವನ ಇರುವಿಕೆಯನ್ನ ಮತ್ತೆ ಮತ್ತೆ ದಾಕಲಿಸುತ್ತಾ
ಬೇಕು ಬೇಡಗಳನ್ನ, ನನಗಸ್ಟೇ ತಿಳಿಯುವ ಹಾಗೆ
ನನ್ನ ಆಳಕ್ಕೆ, ಅತರಂಗಕ್ಕೆ ಮುಟ್ಟಿಸುತ್ತಾನೆ, ಸಂವಾದ ನೆಡೆಸುತ್ತಾನೆ
ಇಂದು, ನಾನು ನನ್ನ ಮಗನನ್ನ
ಕೈ ಹಿಡಿದು ಶಾಲೆಗೆ ದಾಕಲಿಸಲು ನೆಡೆವ ಹೆಜ್ಜೆ ಹೆಜ್ಜೆಗಳಲ್ಲಿ
ನನ್ನಪ್ಪ ನನಗೆ ನೆನಪಾಗುತ್ತಾನೆ, ಕಾಡುತ್ತಾನೆ
ಪುಸ್ತಕದಲ್ಲಿ ಸಿಗದ, ಯಾವ ಭಾಶೆಗೊ ನಿಲುಕದ
ನನ್ನಪ್ಪನ ಭಾಶೆ, ಅಪ್ಪನ ಭಾಶೆ
ನನ್ನ ಮತ್ತು ನನ್ನ ಮಗನ ನಡುವೆ ಸಂವಾದಕ್ಕಿಳಿದಿದೆ
ಎಲ್ಲರೊಡನೆಯೊ ತೆರೆದುಕೊೞಲ್ಲು ಬೇರೆಯದೇ ಭಾಶೆಯಿದೆ.
Comments
ಉ: ಸಂವಾದ
In reply to ಉ: ಸಂವಾದ by Rajendra Kumar…
ಉ: ಸಂವಾದ
ಉ: ಸಂವಾದ
In reply to ಉ: ಸಂವಾದ by S.NAGARAJ
ಉ: ಸಂವಾದ
ಉ: ಸಂವಾದ
In reply to ಉ: ಸಂವಾದ by venkatb83
ಉ: ಸಂವಾದ
ಉ: ಸಂವಾದ
In reply to ಉ: ಸಂವಾದ by gurudutt_r
ಉ: ಸಂವಾದ
ಉ: ಸಂವಾದ
In reply to ಉ: ಸಂವಾದ by partha1059
ಉ: ಸಂವಾದ