ನಾನು ಮತ್ತು ನನ್ನ ನೆರಳು
ಕವನ
ಅನುಮಾನ ನನಗೆ
ಈ ನೆರಳು ನನ್ನದೋ
ಇಲ್ಲಾ
ಆ ನೆರಳೇ ನಾನೋ?
ಮಾತಾಡುತ್ತೇನೆ ನಾನು
ಮಾತಾಡುವುದಿಲ್ಲ ನೆರಳು
ನರಳುವುದು ನನ್ನಾತ್ಮ
ಮಾತಾಡಿದಾಗೆಲ್ಲ ನೆರಳು
ಅನಿವಾರ್ಯ ನನಗೆ
ನೆರಳ ಇರುವಿಕೆ
ಅದು ಉಳಿದಿರಬಹುದಾದ ನನ್ನ
ಆತ್ಮಸಾಕ್ಷಿಯ ಪ್ರತೀಕ
ನಾನು ಸತ್ಯ
ನೆರಳು ಮಿಥ್ಯ
ನಾವಿಬ್ಬರು ಯಾವಾಗಲೂ
ಜೊತೆಯಿರುವಂತದ್ದೇನು ಅಗತ್ಯ?
-------------------------------
Comments
ಉ: ನಾನು ಮತ್ತು ನನ್ನ ನೆರಳು
ಉ: ನಾನು ಮತ್ತು ನನ್ನ ನೆರಳು
In reply to ಉ: ನಾನು ಮತ್ತು ನನ್ನ ನೆರಳು by makara
ಉ: ನಾನು ಮತ್ತು ನನ್ನ ನೆರಳು
In reply to ಉ: ನಾನು ಮತ್ತು ನನ್ನ ನೆರಳು by makara
ಉ: ನಾನು ಮತ್ತು ನನ್ನ ನೆರಳು
ಉ: ನಾನು ಮತ್ತು ನನ್ನ ನೆರಳು