ನಿಟ್ಟುಸಿರು
ಕವನ
ಬಗಲ ಬೆಟ್ಟದ ಮಡಿಲಲ್ಲಿ
ಹುದುಗಿದ ನಿಧಿಯ ಬಾಚಿ
ತುಂಬುತಿದೆ ಹಡಗು
ಸ್ನೇಹಮಯ ನಿಷ್ಪಾಪ ಭಾವನೆಯ
ನಿಧಿಯ ಜತೆಗೆ
ಪಡುಗಡಲ ಗಾಳಿ ಬೀಸುತಿದೆ
ಬರಡಾದ ಬೋಳುಗುಡ್ಡಗಳಿಗಪ್ಪಳಿಸಿ
ಅಳಿದುಳಿದ ಹಸುರು ಮರಗಳ
ಗೋಣ್ಮುರಿದು,ತಾನೇತಾನಾಗಿ
ಕೊಳವೆಯುಗುಳಿದ ಧೂಮ
ನೀರಾವಿಗಳಲಿದೆ,ಉದ್ಯೋಗವರಸುವ
ತರುಣರ ನಿಟ್ಟುಸಿರು
ಬಯಲಾಡಂಬರದ ಬಿಳಿಯಂಗಿಯವರ
ಮೊಸಳೆ ಕಣ್ಣೀರು
ಹರಿಯುತಿದೆ ಕಾಲುವೆಗಳಲಿ
ರಾಡಿಯಾಗುತ
ರೋಗ ಹರಡುತ ನರನಾಡಿಗಳಲ್ಲಿ
ಕಡಲ ಮಕ್ಕಳ ಬದುಕು
ಹಸಿರುವಾದ-ಪ್ರಗತಿವಾದದ
ಅಬ್ಬರದ ಆಟದ ಚೆಂಡು
ನ್ಯಾಯ ಸನ್ನಿಧಿ ಉಳಿಸುವುದೇನೋ
ಹಸುರಿನ ಪಟ್ಟಿ
ಉಳಿಯುವುದೇ ಹೃದಯದ ನವಿರು,
ತುಂಬುವುದೆ ಹೊಟ್ಟೆ?
ಕೊಡಲಿ ಕಡಿತದ ಭುವಿಗೆ
ಬಿದ್ದಿತೆಲ್ಲಿಂದ ಕೊಡಲಿ,
ಯಾರಿಗಿವರು ಅಹವಾಲು ಕೊಡಲಿ?
Comments
ಉ: ನಿಟ್ಟುಸಿರು
In reply to ಉ: ನಿಟ್ಟುಸಿರು by venkatb83
ಉ: ನಿಟ್ಟುಸಿರು
ಉ: ನಿಟ್ಟುಸಿರು
ಉ: ನಿಟ್ಟುಸಿರು
ಉ: ನಿಟ್ಟುಸಿರು