ಸಾವಿನ ಪದ್ಯಗಳು

ಸಾವಿನ ಪದ್ಯಗಳು

ಕವನ

1.

ಸಾವು ನಗುವ

ಸಮಾದಿಯ ಮೇಲೂ

ಅರಳುವವು

ಬಿಳಿ

ಹೂವು!

2.

ಕರೆದಾಗ

ಸಾವು

ಹಿಂಬಾಲಿಸುವುದಷ್ಟೆ

ನಾವು

ಮಾಡಬಹುದಾದ

ಕೆಲಸವು!

3.

ಮಣ್ಣು ಮಾಡಿ ಹೋದವರು

ಮರೆತರೂ

ಮರೆಯಲಿಲ್ಲ

ಮಣ್ಣೊಳಗೆ ಮಲಗಿದವನ

ಗೆದ್ದಲು

ಹುಳುಗಳು!

4.

ಬಾ ಎಂದಾಗ

ಬರದು

ಸಾವು

ಬಂದಾಗದು

ತಪ್ಪಿಸಿಕೊಳ್ಳಲಾರೆವು!

5.

ಸಾವೆಂದರೆ

ನಾಟಕದ

 ಅಂತ್ಯ ಮಾತ್ರ

ಅದಕ್ಯಾಕೆ

ಚಿಂತೆ-ಶಂಕೆ!

6.

ಹುಟ್ಟಿನೊಡನೆ

ಹುಟ್ಟುವ 

ಸಾವು

ಬದುಕಿನುದ್ದಕ್ಕೂ

ಕಾಡುವ

ಹೆಡೆಯೆತ್ತಿ

ನಿಂತ

ಬೆನ್ನ ಹಿಂದಿನ  ಹಾವು!

7.

ನಾವು 

ಸಾವಿನ ಹಿಂದೆ

ಸಾವು

ನಮ್ಮ

ಹಿಂದೆ

ಪರಿಣಾಮ

ಒಂದೇ!

------------------------------

 

Comments