ಅಪ್ಪ
ಕವನ
ಅಪ್ಪ
(ಇದ್ದವರಿಗೆ)
ಅಪ್ಪ ಅಂದರೆ
ಅಂಬೆಗಾಲಿಟ್ಟು ಅಂಬಾರಿ ಮಾಡಿಸಿದವನು
ಇಟ್ಟ ಮೊದಲ ಹೆಜ್ಜೆಗೆ ಸಾಕ್ಷಿಯಾದವನು
ಕೈಯ ಕಿರುಬೆರಳ ಹಿಡಿದು
ಜಗದ ಬಯಲಿಗೆ ಎಳೆ ತಂದವನು
ಶಾಲೆಯ ಮೊದಲ ದಿನ ಗೇಟಿನವರೆಗೂ ಬಂದು
ಆತ್ಮ ವಿಶ್ವಾಸ ತುಂಬಿದವನು
ಬೆಳೆಯುತ್ತ ಬೆಳೆಯುತ್ತಾ
ಜ್ಞಾನದೀಪ ಬೆಳಗಿಸಿದವನು
ಅರಿವಿನಾಕಾಶಕ್ಕೆ ಕಣ್ಣು ತೆರೆಸಿದವನು
ಹೆಸರಿನ ಹಿಂದುಗಡೆ
ಆತ್ಮ ಸ್ಥೈರ್ಯ ಐಡೆಂಟಿಟಿಗೆ ಇನಿಷಿಯಲ್ ಆದವನು
ತನ್ನ ಹುಟ್ಟಿಸುವ ಶಕ್ತಿಗೆ ಬೀಗುತ್ತ
ಹುಟ್ಟಿಸಿದ ತಪ್ಪಿಗೆ ಪೊರೆಯುತ್ತಾ
ಒಡೆಯನಾದವನು
(ಇಲ್ಲದವರಿಗೆ)
ಅಮ್ಮನ ಮದುವೆ ಆಲ್ಬಮ್ಮಿನಲಿ
ಹಳದಿಗಟ್ಟಿದ ಕಪ್ಪು-ಬಿಳಿ
ಫೋಟೋದಲ್ಲಿನ
ಚಿತ್ರವಾದವನು!
------------------
Comments
ಉ: ಅಪ್ಪ
In reply to ಉ: ಅಪ್ಪ by gurudutt_r
ಉ: ಅಪ್ಪ
ಉ: ಅಪ್ಪ
ಉ: ಅಪ್ಪ
In reply to ಉ: ಅಪ್ಪ by venkatb83
ಉ: ಅಪ್ಪ
In reply to ಉ: ಅಪ್ಪ by gurudutt_r
ಉ: ಅಪ್ಪ