ಯುಗ ಯುಗಾದಿ ಕಳೆದರೂ
ಜಗಳ ಮರಳಿ ಬರುತಿದೆ
ಹೊಸ ವರುಷಕೆ ಹಳೆ ವಿರಸವ ಕೆದಕಿ ಕಲಕಿ ತರುತಿದೆ, ಕೆದಕಿ ಕಲಕಿ ತರುತಿದೆ!
ಇಲ್ಲಿ ಕೆಲವು ಬ್ಲಾಗಿಗರು ಕನ್ನಡಿಗರ ಮೇಲಿನ ತಮಿಳರ ಪುರಾತನ ಕ್ರೌರ್ಯಗಳನ್ನು ಪಟ್ಟಿ ಮಾಡಿದ್ದಾರೆ. ಮತ್ತೊಬ್ಬರು ತಮಿಳರ ದತ್ತು ಪುತ್ರ ರಜನಿಯನ್ನು ಬೆಂಬಲಿಸಿದ್ದಾರೆ. ಇದೆಲ್ಲ ಸರಿ, ಆದರೆ ಕನ್ನಡ-ತಮಿಳು ಜಗಳದಲ್ಲಿ ಇಬ್ಬರ ಕೂಸುಗಳೂ ಬಡವಾಗುವುದಿಲ್ಲವೆ? ಅದರ ಬಗ್ಗೆ ಯಾರು ಯೋಚಿಸಿತ್ತಿದ್ದಾರೆ? ದಿನನಿತ್ಯ ಕುಡಿಯುವ ನೀರಿಗೆ ಮೈಲಿಗಟ್ಟಲೆ ನಡೆಯುವ ಜನರಿಗೆ ಗಡಿ ವಿವಾದ ಕಟ್ಕೊಂಡು ಏನಾಗಬೇಕು ಸ್ವಾಮಿ?
ಹಳೆಯದೆಲ್ಲ ಮರೆತು, ಹೀಗೆ ಮಾಡಿದರೆ ಹೇಗೆ? ಅದೇನು ಯೋಜನೆ ಮಾಡ್ತಾರೋ, ಅದರ ಖರ್ಚು ಕರ್ನಾಟಕ-ತಮಿಳುನಾಡು ಅರ್ಧ-ಅರ್ಧ, ಅದರ ಫಲ ಅರ್ಧ-ಅರ್ಧ. ನಾನು ಇಬ್ಬರು ಮಕ್ಕಳ ತಾಯಿಯಾದ್ದರಿಂದ ನನ್ನ ತಲೆಗೆ ಹೊಳೆಯೋದು ಏನಿದ್ರೂ ಈ ತರಹದ ಸಿಂಪಲ್ ಸೊಲ್ಯೂಶನ್ :-) ಖಂಡಿತ, ಆ ಭಾರತ ಮಾತೆಯೂ ಹೀಗೇನೇ ಯೋಚಿಸುತ್ತಿರುತ್ತಾಳೆ ಅಂತ ನನ್ನ ಊಹೆ. ಆದರೆ, ಏನು ಪ್ರಯೋಜನ? ಪಾಪ, ಭಾರತ ನಡೆಸೋ ಆ ಭಾರತ ಪಿತ ಹೇಗೆ ಯೋಚಿಸುತ್ತಾನೋ ಯಾರಿಗೆ ಗೊತ್ತು? :-D
Comments
ಉ: ಯುಗ ಯುಗಾದಿ ಕಳೆದರೂ
In reply to ಉ: ಯುಗ ಯುಗಾದಿ ಕಳೆದರೂ by roopablrao
ಉ: ಯುಗ ಯುಗಾದಿ ಕಳೆದರೂ
In reply to ಉ: ಯುಗ ಯುಗಾದಿ ಕಳೆದರೂ by kalpana
ಉ: ಯುಗ ಯುಗಾದಿ ಕಳೆದರೂ
ಉ: ಯುಗ ಯುಗಾದಿ ಕಳೆದರೂ