ಮನಸ್ಸು !

ಮನಸ್ಸು !

ಕವನ

  


   ಮನಸ್ಸೊಂದು  ಮೂರಾಬಟ್ಟೆ


   ಬಲೆಯ ಸೆರೆಯಾಳಾಗಿರುವ ಚಿಟ್ಟೆ


   ರಂಗು-ರಂಗು ಕಣ್ಣ್-ಮನಕೆ ತೂರಿ


   ಮೇಲೆ, ಮುಗಿಲೆತ್ತರ  ಹಾರಿ


  ಎಲ್ಲರಿಗೂ ತಂದು ಹೊಟ್ಟೆ ಉರಿ


  ಕುಣಿವಾಸೆ  ಗರಿ ಕೆದರಿ.


  ವಿಧಿಗೆ ಬೇರೊಂದಾಸೆ


  ಕತ್ತಲ್ಲಲ್ಲೇ ಕೊಳೆತು,ನಾರಿತು


  ಕೆಂದುರಿಗೆ ನಲುಗಿ ಬಾಡಿತು


  ಬಾಳ ಮಲ್ಲೆ ಆಸೆ ಮರೆತು


  ನಗು-ಹಾಡು-ಸುಗ್ಗಿ ದೂರ ಸರಿಯಿತು


  ನಿರಾಸೆ  ತಾಂಡವ  ನೄತ್ಯವಾಡಿತು


  ಕಡೆಗೆ ಈ ಶೋಕಗೀತೆ  ಬಾಳ


                    ಜೊತೆಗಾಯ್ತು.


 


ಶ್ರೀನಾಗರಾಜ್

Comments