ನಾ!.

ನಾ!.

ಕವನ

ಏನ ಗೀಚಲಿ ನಾ?

ಕಳ್ಳನೆಂದೇ? ಸುಳ್ಳನೆಂದೇ?

ಸ್ವಾರ್ಥಿಯೆಂದೇ?

ಎಲ್ಲ ಬೇಕು ಎನಗೆ,

ಬದುಕ ಬೇಕು ನಾ

ಬೆಳೆಯಬೇಕು ನಾ

ಬದುಕಲು, ಬೆಳೆಯಲು ಊಸರವಳ್ಳಿ ಯಾದೆನೇ ನಾ?!

 

ಮೋಸ ಮಾಡಲಾರೆ, ಕದಿಯಲಾರೆ,

ಸುಳ್ಳುಹೇಳಲಾರೆ,

ಆದರೂ ಯಾರಿಗಾದರೂ ಎರಡು ಬೆಗೆದಿರುವೆನೆ ನಾ?

ಕೊಲೆ ಮಾತ್ರ ಅಪರಾಧವೇ?

 

ಇದರೊಳಗೆ ಸಿಕ್ಕಿ ನಲುಗಿರುವೆನೇ ನಾ?

ಹೊರಬರಲಾರದೆ ನರಳಿರುವೆನೇ ನಾ?

ಅಥವಾ ಒಳಗೆ ಇರಬಲ್ಲಷ್ಟು  ಪಳಗಿರುವೆನೇ ನಾ?

 

ಅಲ್ಲಲ್ಲ ಒಳ್ಳೆಯವ ನಾ!.

Comments