ಮಳೆ..!!

ಮಳೆ..!!

ಕವನ

 ಆರ್ಭಟ...,

ಅಬ್ಬರದ ಮಧ್ಯೆ...

ಗುಡುಗಿನ ಸದ್ದು..!

ಸಿಡಿಲಿನ ಮಿಂಚು!!

ಧಾರಾಕಾರ ಸುರಿಯುವ ಮಳೆಗೆ,

ನಿಸರ್ಗ ನಿರ್ಮಿಸಿದ ವೇದಿಕೆ..!!

ನಂತರ.....ಸ್ತಬ್ಧ!!!

ಗಂಭಿರತೆಯ,ತಟಸ್ಥ ಮೌನದ

ಕತ್ತಲೆಯ ಮಧ್ಯೆ.....

ಹನಿ...!ಹನಿ..! ಸದ್ದು....

ಎಲ್ಲೋ ಕರಗಿದ ಕನಸುಗಳು,

ಉದುರಿಸಿವೆ ಅನಾಥ ಕಣ್ಣೀರು...!!

ಅವಕ್ಕಿಲ್ಲ ದನಿ.....

ಅವಕ್ಕಿಲ್ಲ ಕೋಪ....

ಅಸಹಾಯಕತೆಯಲಿ

ಬಿಕ್ಕುವ ಬಿಕ್ಕಳಿಕೆಗಳು.....!!

ಕೊಚ್ಚಿಹೋಗುವವು...

ಕಡಲ ಸೇರುವವು.....

ಚಿಗುರುಗಳೆಶ್ಟೋ....!

ಹೊಂಗನಸುಗಳೆಶ್ಟೋ....!!.

ಬದುಕುಗಳೆಶ್ಟೋ.......!!!

Comments