ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ
ತ್ರಿಪುರ ಸುಂದರೀ ಅಷ್ಟಕಂ
ಕದಂಬವನಚಾರಿಣೀಂ ಮುನಿಕದಂಬ ಕಾದಂಬಿನೀಂ
ನಿತಂಬಜಿತ ಭೂಧರಾಂ ಸುರನಿತಂಬಿನೀಸೇವಿತಾಮ್l
ನವಾಂಬುರುಹಲೋಚನಾಂ ಅಭಿನವಾಂಬುದಶ್ಯಾಮಲಾಮ್,
ತ್ರಿಲೋಚನ ಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ ll೧ll
ಕದಂಬವನವಿಹಾರಿಣಿಯೇ, ಋಷಿ ಸಮೂಹಕೆ ಪಯೋನಿಧಿಯಾಗಿರ್ಪ,
ಪರ್ವತವ ನಾಚಿಸುವ ನಿತಂಬಿನಿಯೇ, ದೇವಕನ್ನಿಕೆಯರಿಂ ಸೇವಿರ್ಪ,
ನವ ಉತ್ಪಲ ಲೋಚನೆಯೇ, ಕಾರ್ಮೋಡದ ತೆರದಿ ಇರುವ ರಂಗಿನವಳೆ,
ತ್ರಿಣೇತ್ರಕುಟುಂಬಿನಿ ತ್ರಿಪುರಸುಂದರಿಯೇ ಕೋರುವೆ ನಿನ್ನೊಳಾಶ್ರಯವ.
ಕದಂಬವನವಾಸಿನೀಂ ಕನಕವಲ್ಲಕೀಧಾರಿಣೀಂ,
ಮಹಾರ್ಹಮಣಿಹಾರಿಣೀಂ ಮುಖಸಮುಲ್ಲಸದ್ಧಾರುಣೀಮ್l
ದಯಾವಿಭವಕಾರಿಣೀಂ ವಿಶದಲೋಚನೀಂ ಚಾರಿಣೀಂ
ತ್ರಿಲೋಚನ ಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ ll೨ll
ಕದಂಬವನದಿ ವಾಸಿಪ ಸ್ವರ್ಣವೀಣಾಧಾರಿಣಿಯೆ,
ಅನರ್ಘ್ಯರತ್ನಗಳ ಕಂಠಾಭರಣವ ತೊಟ್ಟವಳೆ,
ಅಮೃತದ ಗಾಢ ಪ್ರಭೆಯ ಮುಖದವಳೆ,
ಕೃಪೆಯಿಂ ಸಂಪದಗಳ ದಯಪಾಲಿಸುವವಳೆ,
ಶುಭ್ರನೇತ್ರೆಯೇ, ವಿಹಾರಿಣಿಯೇ, ನಿನ್ನಾಶ್ರಯವ ಕೋರುವೆ
ತ್ರಿಲೋಚನ ಕುಟುಂಬಿನಿ ತ್ರಿಪುರಸುಂದರಿಯೇ.
ಕದಂಬವನ ಶಾಲಯಾ ಕುಚಭರೋಲ್ಲಸನ್ಮಾಲಯಾ
ಕುಚೋಪಮಿತಶೈಲಯಾ ಗುರುಕೃಪಾಲಸದ್ವೇಲಯಾl
ಮದಾರುಣ ಕಪೋಲಯಾ ಮಧುರ ಗೀತ ವಾಚಾಲಯಾ
ಕಯಾsಪಿ ಘನನೀಲಯಾ ಕವಚಿತಾ ವಯಂ ಲೀಲಯಾ ll೩ll
ಅವಳ ವ್ಯೂಹಾತ್ಮಕವಾದ ಈ ಕದಂಬವನದಲಿ,
ಅವಳ ಎದೆಯನ್ನಲಂಕರಿಸಿರುವ ಹಾರದೊಳು,
ಅವಳ ಪರ್ವತೋಪಮ ಸ್ತನಗಳೊಳು,
ಅವಳ ಗುರುತರ ಕೃಪಾಕಟಾಕ್ಷದೊಳು,
ಮದಿಂದ ಕೆಂಪಡರಿರುವ ಅವಳ ಕಪೋಲಗಳೊಳು,
ಅವಳ ಮಧುರವಾದ ಸಂಗೀತದ ಧ್ವನಿಯೊಳು,
ಅವಳ ನೀಲ ಮೇಘವರ್ಣದ ಕಾಯದೊಳು,
ಅವಳ ಅರಿಯಲಾರದ ಲೀಲೆಯೊಳು,
ಕವಚದಂತಾವರಿಸಲ್ಪಟ್ಟಿರುವೆವು ನಾವು.
ಕದಂಬವನಮಧ್ಯಗಾಂ ಕನಕಮಂಡಲೋಪಸ್ಥಿತಾಂ
ಷಡಂಬುರುಹವಾಸಿನೀಂ ಸತತಸಿದ್ಧಸೌದಾಮಿನೀಮ್l
ವಿಡಂಬಿತಜಪಾರುಚಿಂ ವಿಕಚಚಂದ್ರಚೂಡಾಮಣಿಂ
ತ್ರಿಲೋಚನ ಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ ll೪ll
ಕದಂಬವನಮಧ್ಯದಿ ಸ್ವರ್ಣಚಕ್ರದೊಳು ಆಸೀನಳಾಗಿಹ,
ಷಡ್ಪದ್ಮದೊಳು ನಿವಸಿಸುವ, ನಿತ್ಯಸಿದ್ಧರಿಗೆ ಮಿಂಚಿನಂತಿಹ,
ಕೆಂಪು ದಾಸವಾಳವ ಅಣಕಿಸುವಂತೆ ಉತ್ಕೃಷ್ಟವಾಗಿಹ,
ಶುಭ್ರಚಂದ್ರನ ಚೂಡಾಮಣಿತೆರದಿ ಶಿರದಲಿ ಧರಿಸಿಹ,
ತ್ರಿಲೋಚನಕುಟುಂಬಿನಿ ತ್ರಿಪುರಸುಂದರಿಯಲಿ ಕೋರುವೆನಾಶ್ರಯವ.
ಕುಚಾಞ್ಚಿತವಿಪಞ್ಚಿಕಾಂ ಕುಟಿಲಕುಂತಲಾಲಂಕೃತಾಂ
ಕುಶೇಶಯನಿವಾಸಿನೀಂ ಕುಟಿಲಚಿತ್ತವಿದ್ವೇಷಿಣೀಮ್l
ಮದಾರುಣವಿಲೋಚನಾಂ ಮನಸಿಜಾರಿಸಂಮೋಹಿನೀಂ
ಮತಙ್ಗಮುನಿಕನ್ಯಕಾಂ ಮಧುರಭಾಷಿಣೀಮಾಶ್ರಯೇ ll೫ll
ಎದೆಗಪ್ಪಿದ ವೀಣೆಯಿಂ ಕಂಗೊಳಿಸುತಿಹ,
ಸುರಟಿಗೊಂಡ ಕೇಶದಿಂ ಅಲಂಕೃತಳಾಗಿಹ,
ಕಮಲವಾಸಿನಿ ಕುಟಿಲಜನವಿದ್ವೇಷಿಣಿಯೇ,
ಮಧುವಿನಿಮ್ ಕೆಂಪಡರಿದ ಉನ್ಮತ್ತಲೋಚನೆಯೇ,
ಮದನಾರಿಯ ಸಂಮೋಹನಗೊಳಿಪಾಕೆಯೇ,
ಮಂಜುಳ ದನಿಯಿಂ ಸಂಭಾಷಣೆಗೈವ,
ಮಾತಂಗಿಯ ಕೋರುವೆನಾಶ್ರಯವ.
ಸ್ಮರಪ್ರಥಮಪುಷ್ಪಿಣೀಂ ರುಧಿರಬಿಂದುನೀಲಾಂಬರಾಂ
ಗೃಹೀತಮಧುಪಾತ್ರಿಕಾಂ ಮದವಿಘೂರ್ಣನೇತ್ರಾಞ್ಚಲಾಂl
ಘನಸ್ತನಭರೋನ್ನತಾಂ ಗಲಿತಚೂಲಿಕಾಂ ಶ್ಯಾಮಲಾಂ
ತ್ರಿಲೋಚನ ಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ ll೬ll
ಮನ್ಮಥನ ಪ್ರಥಮ ಪುಷ್ಪವ ಧರಿಸಿದಾಕೆಯೇ,
ಕೆಂಪು ಬಿಂದುವಿನಿಂದೊಡಗೂಡಿದ ನೀಲವಸ್ತ್ರಧಾರಿಯೇ,
ಮಧುಪಾತ್ರೆಯ ಪಿಡಿದವಳೇ, ಉನ್ಮತ್ತ ಸಂಕುಚಿತ ನೇತ್ರಳೇ,
ಭಾರ ಕುಚೋನ್ನತೆಯೇ, ಮಿರುಗುಗಪ್ಪಿನ ಕೆದರಿದ ಕೇಶರಾಶಿಯವಳೇ,
ಶ್ಯಾಮಲವರ್ಣಳೇ, ತ್ರಿಪುರ ಸುಂದರಿಯೇ,
ಕೋರುವೆನು ನಿನ್ನಾಶ್ರಯವ, ತ್ರಿಣೇತ್ರನ ಅರ್ಧಾಂಗಿನಿಯೇ.
ಸಕುಙ್ಕುಮವಿಲೇಪನಾಮಲಕಚುಂಬಿಕಸ್ತೂರಿಕಾಂ
ಸಮಂದಹಸಿತೇಕ್ಷಣಾಂ ಸಶರಚಾಪಪಾಶಾಙ್ಕುಶಾಮ್l
ಅಶೇಷಜನಮೋಹಿನೀಮರುಣಮಾಲ್ಯಭೂಷಾಂಬರಾಂ
ಜಪಾಕುಸುಮಭಾಸುರಾಂ ಜಪವಿಧೌಸ್ಮರಾಮ್ಯಂಬಿಕಾಮ್ ll೭ll
ಜಪವಗೈಯುತ ಧ್ಯಾನಿಸುವೆ ನಾ ಕುಂಕುಮಾಂಕಿತ ಮಾತೆಯನು,
ಕಸ್ತೂರಿ ಸುವಾಸನೆಗೈವ ಮುಂಗುರುಳ ಹೊಂದಿರುವಾಕೆಯನು,
ಮೃದು ಮಧುರ ನಗೆಯ ಬೀರುತ ಧನುರ್ಬಾಣ ಪಾಶಾಂಕುಶವ ಪಿಡಿದಾಕೆಯ,
ಕೆಂಪು ಒಡವೆ ವಸ್ತ್ರವ ಧರಿಸಿ ಕೆಂಪು ದಾಸವಾಳದ ತೆರದಿ
ಜನಸಾಗರವ ಸಂಮೋಹನಗೊಳಿಪಾಕೆಯ.
ಪುರಂದರಪುರಂಧ್ರಿಕಾಂ ಚಿಕುರಬಂಧಸೈರಂಧ್ರಿಕಾಂ
ಪಿತಾಮಹ ಪತಿವ್ರತಾಂ ಪಟಪಟೀರ ಚರ್ಚಾರತಾಮ್l
ಮುಕುಂದರಮಣೀಮಣೀ ಲಸದಲಂಕ್ರಿಯಾಕಾರಿಣೀಂ
ಭಜಾಮಿ ಭುವನಾಂಬಿಕಾಂ ಸುರವಧೂಟಿಕಾಚೇಟಿಕಾಮ್ ll೮ll
ಯಾರ ಜಡೆಯನು ದೇವಲೋಕದ ರಾಣಿಯು ಹೆಣೆಯುತಿಹಳೋ,
ಬ್ರಹ್ಮನ ರಾಣಿಯು ಯಾರಿಗೆ ಸೊಬಗಿನಲಿ ಚಂದನವ ಪೂಯುತಿಹಳೋ,
ವಿಷ್ಣುವಿನರಸಿಯು ಯಾರಿಗೆ ಒಡವೆ ಮಣಿಹಾರಗಳನಂದದಲಿ ತೊಡಿಸುತಿಹಳೋ,
ದೇವಲೋಕದ ಅಪ್ಸರೆಯರು ಯಾರಿಗೆ ಕಾಲಾಳುಗಳಾಗಿಹರೋ, ಆ
ಸಮಸ್ತ ವಿಶ್ವದ ಮಾತೆ ಜಗದಂಬಿಕೆಯ ವಂದಿಪೆನು ನಾ.
ವಿ.ಸೂ.:ಎಲ್ಲಾ ಎಂಟು ಸ್ತೋತ್ರಗಳು ಮತ್ತು ಅವುಗಳ ಭಾವಾರ್ಥವು ’ತ್ರಿಪುರ ಸುಂದರೀ ಅಷ್ಟಕಮ್"- ಪ್ರಕಟಣೆ(೧೯೮೬): ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮೈಲಾಪುರ್, ಮದ್ರಾಸ್ - ೬೦೦ ೦೦೪, ಪುಸ್ತಕದ ಅನುವಾದದ ಭಾಗದಿಂದ ಆಯ್ದುಕೊಳ್ಳಲಾಗಿದೆ. ಒಟ್ಟು ಪುಟಗಳು ೫೯.ಮೂಲ ಇಂಗ್ಲೀಷ್ ಕರ್ತೃ - ಶ್ರೀಯುತ ಎಸ್. ಕಾಮೇಶ್ವರ್, ಮುಂಬಯಿ.
Rating
Comments
ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ
In reply to ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ by makara

In reply to ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ by ಗಣೇಶ
ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ
ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ
In reply to ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ by nanjunda

In reply to ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ by ananthesha nempu

In reply to ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ by sathishnasa
ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ
ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ
In reply to ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ by partha1059
ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ
ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ
In reply to ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ by Jayanth Ramachar
ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ
ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ
In reply to ಉ: ತ್ರಿಪುರ ಸುಂದರೀ ಅಷ್ಟಕಂ: ಸಂಪೂರ್ಣ ಸ್ತೋತ್ರ ಮಾಲಿಕೆ ಮತ್ತು ಭಾವಾರ್ಥ by Chikku123