ಹಳೇ ಗಡಿಯಾರ
ಹಳೇ ಗಡಿಯಾರ ಕಲಿಸಿದ ಪಾಠ.
ಹಳೇಕಾಲದಲ್ಲಿ ಎಲ್ಲರ ಮನೆಯಲ್ಲೂ ಇರುತ್ತಿದ್ದು ಗೋಡೆಗಡಿಯಾರ ನೆನಪಿದೆಯೇ? ಢಣ್ ಢಣ್ ಎಂದು ಅದು ಮಾಡುತ್ತಿದ್ದ ನಿನಾದ ಇಂದಿಗೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತಿದೆ. ಈಗಿನ ಕಾಲದವರಿಗೆ, ಹಿಂದಿನ ಕಾಲದ ಕೀ ಕೊಡುವ ಗಡಿಯಾರ ಖಂಡಿತ ಇಷ್ಠವಾಗುವುದಿಲ್ಲ. ತರತರಾವರಿಯ ಮಾರ್ಡನ್ ಡಿಜಿಟಲ್ ಕ್ಲಾಕ್ಗಳ ಮುಂದೆ ಹಳೆಯ ಗಡಿಯಾರದ ಮಾತೆಲ್ಲಿ? ಹೀಗೇ ಒಮ್ಮೆ ಅಜ್ಜನ ಹಳೆಯ ಗಡಿಯಾರದ ಪಕ್ಕ ಮೊಮ್ಮಗ ತನ್ನ ಡಿಜಿಟಲ್ ಗಡಿಯಾರ ತೂಗು ಹಾಕಿದ. ಎರಡೂ ಗಡಿಯಾರಗಳ ನಡುವೆ ಮಾತುಕತೆ ಶುರುವಾಯ್ತು. ಮಾಡ್ರನ್ ಗಡಿಯಾರ ಮಾತು ಶುರು ಮಾಡಿತು : ನಾನು ದಿನಕ್ಕೆ 24 ಗಂಟೆ, 1440 ನಿಮಿಷ,ಅಲ್ಲ 86,400 ಸೆಕೆಂಡುಗಳೂ ಚಲಿಸ್ಮತ್ತಲೇ ಇರುತ್ತೇನೆ. ನನಗೆ ಎಷ್ಠೂಂದು ಕೆಲಸ : ವಿರಾಮವೇ ಇಲ್ಲ ಎಂದೆಲ್ಲಾ ತನ್ನ ಅಳಲನ್ನು ದೊಡ್ಡ ಗಡಿಯಾರದ ಮುಂದೆ ತೋಡಿಕೊಳ್ಳತೊಡಗಿತು. ಇದನ್ನೆಲಾ ್ಲ ಕೇಳುತ್ತಿದ್ದ ದೊಡ್ಡ ಗಡಿಯಾರ ನಗ ತೊಡಗಿತು. ಏಕೆ ನನ್ನ ಅಪಹಾಸ್ಯ ಮಾಡುವೆ? ನಾನೇನು ಸುಳ್ಳು ಹೇಳುತ್ತೀರುವೆನೇ ಎಂದು ಹೊಸಾ ಗಡಿಯಾರ ಕೋಪದಿಂದ ಹಳೇ ಗಡಿಯಾರಕ್ಕೆ ಸವಾಲೆಸಗಿತು.
ಹಳೆಯ ಗಡಿಯಾರ ಸಮಾಧಾನದಿಂದ ಹೇಳಿತು. ಗೆಳೆಯಾ ಯಾಕಿಷ್ಠು ಗಾಬರಿ, ಕೆಲಸದ ಒತ್ತಡ ನಿನಗೆ? ಯಾಕೆ ಅಷ್ಠೂಂದು ಉದ್ವೇಗ? ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ಕೊಡು. ಅಷ್ಠೂಂದು ಲೆಕ್ಕಾಚಾರಗಳು ಸರಿಯಲ್ಲ ನಾನೂ ಸಹ ನಿನ್ನಷ್ಠೆ ಕೆಲಸ ಮಾಡುತ್ತಾ ಬಂದಿಲ್ಲವೇ? ದಿನಕ್ಕೆ ಸಾವಿರಾರು ಸೆಕೆಂಡುಗಳು, ನಿಮಿಷಗಳು ಎಂದು ಲೆಕ್ಕವಿಡುವ ಬದಲು, ಒಂದು ಸಲಕ್ಕೆ ಅಥವಾ ಒಮ್ಮೆಗೆ ಒಂದು ಸಲ ಚಲಿಸುವೆನಷ್ಠೇ ಎಂದು ಕೊಂಡಲ್ಲಿ, ನಿನ್ನ ಗಾಬರಿ, ಒತ್ತಡ, ಎಲ್ಲವೂ ಕಣ್ಮರೆಯಾಗುವುದಲ್ಲವೇ? ನಾವು ಸಮಸ್ಯೆಯನ್ನು ಹೇಗೆ ನೋಡುವೆವು ಎಂಬ ದೃಷ್ಠಿ ಬಹಳ ಮುಖ್ಯ ಎಂದು ತಿಳಿಹೇಳಿತು. ಯಾವುದೇ ಸಮಸ್ಯೆಯನ್ನು ಸರಳ ರೀತಿಯಲ್ಲಿ ಕಂಡಾಗ ಅದು ನಮಗೆ ಹೊರೆ ಎನಿಸದು.
Comments
ಉ: ಹಳೇ ಗಡಿಯಾರ
ಉ: ಹಳೇ ಗಡಿಯಾರ
In reply to ಉ: ಹಳೇ ಗಡಿಯಾರ by ಸುಮ ನಾಡಿಗ್
ಉ: ಹಳೇ ಗಡಿಯಾರ