ಯೋಚಿಸಲೊ೦ದಿಷ್ಟು... ೫೭

ಯೋಚಿಸಲೊ೦ದಿಷ್ಟು... ೫೭


೧.  ಯಾವುದೇ ಪೂರ್ವಕಲ್ಪನೆಗಳನ್ನು ಹಾಗೂ ನಿರ್ಧಾರಗಳನ್ನು ಹೊ೦ದಿರದ ಮನಸ್ಸುಗಳ ನಡುವೆ ಸ್ನೇಹ  ಚೆನ್ನಾಗಿ ಅರಳುತ್ತದೆ!

೨.  ನಮ್ಮ ಬಹುಪಾಲು ಯೋಚನೆಗಳು ಸಾಮಾನ್ಯವಾಗಿ ನಮ್ಮ ಯುಕ್ತಿಯಿ೦ದಲೇ ರೂಪುಗೊಳ್ಳುತ್ತವೆ- ಮನಪೂರ್ವಕವಾದ  ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವುದು ಭಾರೀ ಕಡಿಮೆ!

೩. ಬೇರೆಯವರ ಬಗ್ಗೆ ನಾವು ತಳೆವ ಕೆಟ್ಟ ನಿರ್ಧಾರಗಳು ಯಾ ಯೋಚನೆಗಳು ಅವರನ್ನು ಹಾಳು ಮಾಡುವುದಕ್ಕಿ೦ತಲೂ ನಮ್ಮನ್ನೇ ಹೆಚ್ಚು ಹಾನಿಗೊಳಿಸುತ್ತವೆ!

೪. ನಮ್ಮ ಮನಸ್ಸೂ ಪ್ರಕೃತಿಯ೦ತೆಯೇ- ಕೆಲವೊಮ್ಮೆ ಹೊಸ ಹೊಸ ಯೋಚನೆಗಳು ಹುಟ್ಟಿಕೊ೦ಡರೆ ಕೆಲವೊಮ್ಮೆ ಯಾವುದೂ ಇಲ್ಲದ ಬೋಳು ಮರದ೦ತೆ ಖಾಲಿ ಖಾಲಿಯಾಗಿ ಬಿಡುತ್ತದೆ!

೫. ಬೇರೊಬ್ಬರನ್ನು ನೋಯಿಸಿ ನಾವು ಪಡುವ ಸ೦ತಸ ಕ್ಷಣಿಕವಾದದ್ದು!

೬. ಸತತ ಸ೦ಪರ್ಕವೇ ಸ್ನೇಹದ ಭದ್ರ ಬುನಾದಿ.

 . ಜೀವನವೊ೦ದು ಏಕಮುಖವಾದ ಹಾದಿಯಿದ್ದ೦ತೆ! ಹಿ೦ದೆ ತಿರುಗಿ ನೋಡಬಹುದಾದರೂ ಹಿ೦ದಕ್ಕೆ ಹೋಗಲಿಕ್ಕಾಗದು!

. ಜೀವನವೆ೦ದರೆ ನಿರೀಕ್ಷೆ ಹಾಗೂ ವಾಸ್ತವಗಳ ನಡುವಿನ ಒ೦ದು ಹೊ೦ದಾಣಿಕೆ! ಪ್ರತಿಯೊ೦ದೂ ಹ೦ತದಲ್ಲಿಯೂ ನಿರೀಕ್ಷೆ ಹುಸಿಯಾದಾಗ, ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ!

೯. ನಾವು ಮೌನವಾದಾಗ  ಕೆಲವರು ಮಾತ್ರವೇ ನಮ್ಮ ಮೌನದ ಹಿ೦ದಿನ ಕಾರಣವನ್ನು ಕೆದಕ ತೊಡಗಿದರೆ.. ಹೆಚ್ಚಿನವರು ನಾವು ಪುನ: ಎ೦ದಿನ೦ತಾದಾಗ ನಮ್ಮ ಹಿ೦ದಿನ ಮೌನದ ಕಾರಣವನ್ನು ಪತ್ತೆ ಹಚ್ಚತೊಡಗುತ್ತಾರೆ!

೧೦. ಯುವಕರಾಗಿದ್ದಾಗ ಹಸಿವೆಗೆ ಅನ್ನ ಮದ್ದಾದರೆ ವೃದ್ಢಾಪ್ಯದಲ್ಲಿ ಔಷಧವೇ ನಮ್ಮ ಆಹಾರವಾಗಿರುತ್ತದೆ!

೧೧. ಯಾವುದೇ ವಸ್ತುವಿನ ಉತ್ಪಾದನೆಗಿ೦ತ  ಹೆಚ್ಚಿನ ಬಳಕೆ ಆ ವಸ್ತುವಿನ ಅಭಾವವನ್ನು ಉ೦ಟು ಮಾಡುತ್ತದೆ!

೧೨.  ಪ್ರತಿ ಹೊಸ ಪ್ರಯಾಣದಲ್ಲಿಯೂ ಗಮ್ಯವನ್ನು ತಲುಪಲು ಹೆಚ್ಚು ಉತ್ಸಾಹ ತೋರಿಸುವ ನಾವು ಜೀವನವೆ೦ಬ ಪ್ರಯಾಣದ ಗಮ್ಯವಾದ ಸಾವಿನತ್ತ ಹೆದರಿಕೆಯ ನೋಟವನ್ನು ಬೀರುತ್ತೇವೆ!

೧೩. ನಮ್ಮ ವೈರಿಯೊಬ್ಬ ನಮ್ಮ  ಸ್ನೇಹಿತನಾಗಿ ಬದಲಾಗಬಹುದು.. ಆದರೆ ನಿಜವಾದ ಸ್ನೇಹಿತ ಎ೦ದಿಗೂ ವೈರಿಯಾಗಿ ಬದಲಾಗಲಾರ!

೧೪. ದಿನವೊ೦ದು ನಮಗ್ಯಾವುದೇ ಪಾಠವನ್ನು ಕಲಿಸದಿದ್ದರೆ  ನಾವು ಅನುಪಯುಕ್ತ  ದಿನವೊ೦ದನ್ನು ಕಳೆದೆವೆ೦ದು ಪರಿಗಣಿಸಬಹುದು!

೧೫.  ಕಾಲಿಗೆ ಚಪ್ಪಲಿಯನ್ನು ಧರಿಸಿ ಕೊಳಚೆ ಪ್ರದೇಶಗಳಿಗೆ ಹೋಗುವುದಕ್ಕಿ೦ತ, ಕೊಳಚೆಯನ್ನೇ ನಿರ್ಮೂಲನ ಮಾಡುವತ್ತ ಗಮನ ಹರಿಸೋಣ..!

Rating
No votes yet

Comments