'ಚಂದ್ರಗ್ರಹದಮೇಲೆ ಮೊದಲ ಹೆಜ್ಜೆಯಿಟ್ಟಾತ, ನೀಲ್ ಆರ್ಮ್ ಸ್ಟ್ರಾಂಗ್', ನೀಲಿಗಗನದಲ್ಲಿ ಲೀನವಾದರು !
೮೨ ವರ್ಷ ಹರೆಯದ 'ನೀಲ್ ಆರ್ಮ್ ಸ್ಟ್ರಾಂಗ್ ', ವಾಸವಾಗಿದ್ದ 'ಸಿಂ ಸಿನಾಟಿ ನಗರದ ಪ್ರಖ್ಯಾತ ಆಸ್ಪತ್ರೆ' ಯೊಂದರಲ್ಲಿ, ಹೃದಯ ಶಸ್ತ್ರ ಚಿಕಿತ್ಸೆಗೆ (ಬೈ ಪಾಸ್ ಸರ್ಜರಿ) ಒಳಗಾಗಿದ್ದರು. ಆದರೆ ವೈದ್ಯಕೀಯ ಚಿಕಿತ್ಸೆಗಳು ಕೆಲಸಮಾಡದೆ, ಆಗಸ್ಟ್, ೨೫ ರಂದು, ಕೊನೆಯುಸಿರೆಳೆದರು.
೧೯೬೯ ರ ಜುಲೈ ೨೦ ರಂದು ೩೮ ವರ್ಷ ವಯಸ್ಸಿನ, ನೀಲ್ ಆರ್ಮ್ ಸ್ಟ್ರಾಂಗ್, ಮತ್ತು ಅವರ ಜೊತೆಗಾರರು, 'ಕರ್ನಲ್ ಎಡ್ವಿನ್ ಇ ಆಲ್ಡರಿನ್,' (ಗೆಳೆಯರು ಅವರನ್ನು 'ಬಜ್', ಎನ್ನುತ್ತಿದ್ದರು) 'ಮೈಕೆಲ್ ಕಾಲಿನ್ಸ್', 'ಅಪೋಲೋ ೧೧ ನುಕೆ'ಯಲ್ಲಿ ಯಾನಮಾಡಿ, ಚಂದ್ರ ಗ್ರಹದಮೇಲೆ ತಮ್ಮ ಮೊಟ್ಟಮೊದಲ ಹೆಜ್ಜೆ ಯಿಡುವಮೂಲಕ ಅಮೆರಿಕದ 'ಚಂದ್ರಗ್ರಹ ಯಾನದ ಅಧ್ಯಾಯ'ವನ್ನು ತೆರೆದು, ಚರಿತ್ರೆಯಲ್ಲಿ ದಾಖಲಿಸಿ, ತಾವು ಮತ್ತು ಅವರ ಸಹ ಪ್ರಯಾಣಿಕರ ಹೆಸರುಗಳನ್ನೂ ಅಮರವಾಗಿಸಿದರು !
೧೯೬೯ ರಲ್ಲಿ ೪ ದಿನಗಳ, ೨೫೦,೦೦೦ ಮೈಲಿಗಳ ಯಾತ್ರೆಯ ನಂತರ, ಅವರ ಚಂದ್ರಯಾನ ಸಫಲವಾಯಿತು. ಆ ಸಮಯದಲ್ಲಿ ಅವರ ಕಂಠ ಆನಂದ, ಉದ್ವೇಗಗಳಿಂದ ತುಂಬಿಬಂತು. ಅವರು ನುಡಿದ ಸಾಲುಗಳು ಮಾನವನ ಚಂದ್ರಗ್ರಹ ಯಾತ್ರೆಯ ಕನಸು ನನಸಾದ ಸಂಗತಿ. ಈ ನಾವಿಕರ ಪರಿಶ್ರಮ ಸಫಲತೆಯ ಶಿಖರವನ್ನು ಮುಟ್ಟಿ, ಅಮರವಾಗಿ, ಚಿರಸ್ಥಾಯಿಯಾಗಿ ನಿಲ್ಲುವಷ್ಟು ಮಹತ್ವದ ನುಡಿಗಳವು !
"That's one small step for a man, one giant leap for mankind "
ಈ ವಾಕ್ಯದಲ್ಲಿನ (ಅ) ' a' ಮೊದಲು ಧ್ವನಿಮುದ್ರಿತವಾಗಲು ಸ್ವಲ್ಪ ತೊಡಕಿತ್ತು. ಕಾಲಕ್ರಮದಲ್ಲಿ ಹೊಸ ಸಾಫ್ಟ್ ವೇರ್ ಬಳಕೆಯಿಂದಾಗಿ 'a' ಎನ್ನುವ ಅಕ್ಷರದ ಇರುವಿಕೆ ಸ್ಪಷ್ಟವಾಯಿತು !
ಸನ್ , ೧೯೬೬ ರಲ್ಲಿ ಅವರು ಜೆಮಿನಿ-೮ ಮಿಶನ್ ನ, 'ಕಮ್ಯಾಂಡರ್' ಆಗಿ ಚಂದ್ರಯಾನ ಮಿಶನ್ ನಲ್ಲಿ ಭಾಗವಹಿಸಿದ್ದರು. ಆದರೆ ದುರ್ದೈವದಿಂದ ಅದು ಸಫಲವಾಗದೆ, ಹೇಗೋ 'ಲೂನಾರ್ ವೆಹಿಕಲ್' ನ್ನು ಸುರಕ್ಷಿತವಾಗಿ ಪ್ರುಥ್ವಿಗೆ ವಾಪಸ್ ತಂದರು !
೪ ದಶಕಗಳ ಹಿಂದಿನ ಸವಿನೆನಪುಗಳನ್ನು ನಾವೂ ನೆನೆದು ಸಂತಸ ಗೊಂಡೆವು :
ಸನ್ ೧೯೬೯ ರಲ್ಲಿ ಆಗತಾನೇ ನನ್ನ ತಮ್ಮ, 'ಚಂದ್ರ,' ಭಾರತದಿಂದ ಅಮೆರಿಕದ 'ಪರ್ಡ್ಯೂ ವಿಶ್ವವಿದ್ಯಾಲಯ'ಕ್ಕೆ ಹೋಗಿ ಪಿ.ಎಚ್.ಡಿ ವ್ಯಾಸಂಗದ ಬಗ್ಗೆ ವ್ಯಸ್ತನಾಗಿದ್ದಾಗ, ಅದೇ ಯೂನಿವರ್ಸಿಟಿಯಲ್ಲಿ ವ್ಯಾಸಂಗಮಾಡಿದ್ದ 'ಆಸ್ಟ್ರೋನಾಟ್, 'ನೀಲ್ ಆರ್ಮ್ ಸ್ಟ್ರಾಂಗ್' ಮತ್ತು ಅವನ ಜೊತೆಯ 'ಅಪೊಲೋ-೧೧ ರ, ಕ್ರ್ಯೂ' ಸದಸ್ಯರು ಚಂದ್ರನಮೇಲೆ ಇಳಿದು, ನಡೆದಾಡಿ, ಅಲ್ಲಿನ ಮಣ್ಣಿನ ಮಾದರಿಯನ್ನು ಭೂಮಿಗೆ ಮರಳುವಾಗ ಜೊತೆಯಲ್ಲಿ ತಂದಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆಯೇ, ’ಪರ್ಡ್ಯೂ ಯೂನಿವರ್ಸಿಟಿ'ಯ, ಚಂದ್ರ ಹಾಗೂ ಅವನ ಗೆಳೆಯರು ಸಂಭ್ರಮಿಸಿ ಸಂತಸವನ್ನು ಕಾಲೇಜಿನ ಸಹಸ್ರಾರು ಗೆಳೆಯ/ಗೆಳತಿಯರೊಂದಿಗೆ ಹಂಚಿಕೊಂಡರು. ಆ ಮಧುರ-ಸಂಗತಿಯನ್ನು 'ಚಂದ್ರ' ಆಗ ಬೊಂಬಾಯಿನಲ್ಲಿದ್ದ ನನ್ನೊಂದಿಗೆ ಹಂಚಿಕೊಂಡಿದ್ದರು.
ನಿನ್ನೆ ಕೆನಡಾದಲ್ಲಿರುವ ನಾನು, ಮತ್ತು ಅಮೆರಿಕದಲ್ಲಿರುವ ನನ್ನ ತಮ್ಮ 'ಚಂದ್ರ' 'ಸ್ಕೈಪ್' ನಲ್ಲಿ ಮಾತಾಡುತ್ತಿದ್ದಾಗ ಆ ಸುಂದರ ಸನ್ನಿವೇಶಗಳ ಸವಿನೆನಪುಗಳನ್ನು ಮೆಲುಕುಹಾಕಿದೆವು ! ಅ ನಂತರ ನಾನು ಒಂದು 'ಚಿಕ್ಕ ಲೇಖನ' ಬರೆದು (ರಾತ್ರಿ ೮-೫೦ ರ ಸಮಯದಲ್ಲಿ) ನಮ್ಮ ಸಂಪದದ ಗೆಳೆಯರ ಜೊತೆ ಆ ನೆನಪುಗಳನ್ನು ಹಂಚಿಕೊಂಡೆ.
'ನನ್ನ ಅನಿಸಿಕೆ' :
ಮನುಕುಲಕ್ಕೆ ಚಂದ್ರಗ್ರಹದ ಕಣ್ಣಾರೆ ಕಂಡ ಮಾಹಿತಿಗಳನ್ನು ಒದಗಿಸಿದ ಅಂತರಿಕ್ಷ ಯಾನ ತಜ್ಞ, ಹಾಗೂ ಅದರ ರುವಾರಿ, 'ನೀಲ್ ರವರ ನಿಧನಕ್ಕೆ ಯಾರೂ ಸಂತಾಪ ಸೂಚಿಸಬೇಕಿಲ್ಲ', ಕಣ್ಣೀರುಕರೆಯಬೇಕಿಲ್ಲ; ಅದರ ಬದಲು ಅದನ್ನು 'ಚಂದ್ರಯಾನದ ವೀರಯೋಧನ ದಿನ', ವೆಂದು ಆಚರಿಸೋಣ. ಅವರ ಆತ್ಮಕ್ಕೆ ಶಾಂತಿದೊರಕಲೆಂದು ಚಂದ್ರಶೇಖರನನ್ನು ಮೊರೆಯಿಡೋಣ !
-ಹೊರಂಲವೆಂ,
-ಮುಕ್ಕಾಂ : ಟೊರಾಂಟೋನಗರ,
-ಕೆನಡಾ
ಚಿತ್ರ : ಬಿ,ಬಿ.ಸಿ (B.B.C. Telivision)
Rating
Comments
ಉ: 'ಚಂದ್ರಗ್ರಹದಮೇಲೆ ಮೊದಲ ಹೆಜ್ಜೆಯಿಟ್ಟಾತ, ನೀಲ್ ಆರ್ಮ್ ...
ಉ: 'ಚಂದ್ರಗ್ರಹದಮೇಲೆ ಮೊದಲ ಹೆಜ್ಜೆಯಿಟ್ಟಾತ, ನೀಲ್ ಆರ್ಮ್ ...
In reply to ಉ: 'ಚಂದ್ರಗ್ರಹದಮೇಲೆ ಮೊದಲ ಹೆಜ್ಜೆಯಿಟ್ಟಾತ, ನೀಲ್ ಆರ್ಮ್ ... by H A Patil
ಉ: 'ಚಂದ್ರಗ್ರಹದಮೇಲೆ ಮೊದಲ ಹೆಜ್ಜೆಯಿಟ್ಟಾತ, ನೀಲ್ ಆರ್ಮ್ ...