ಸಂತೋಷದಿಂದಿರೋಣ‌

ಸಂತೋಷದಿಂದಿರೋಣ‌

 ಸಂತೋಷದಿಂದಿರೋಣ

ಜೀವನದಲ್ಲಿ ಯಶಸ್ಸನ್ನು ಗಳಿಸಿರುವವರು ಹಲವರಾದರೆ, ಜೀವನದಲ್ಲಿ ಸಂತೋಷವನ್ನು ಪಡೆದಿರುವವರು ಇನ್ನು ಕೆಲವರು, ಯಶಸ್ಸು ಹಾಗೂ ಸಂತೋಷ, ಇವೆರಡರ £ಡುವಿನ ಅಂತರದ  ಕುತೂಹಲವೇ ? ಯಶಸ್ವೀ ಮನುಜರೆಲ್ಲರೂ ಸಂತೋಷವಾಗಿರುವರೇ ? ‘ಯಶಸ್ಸು’ ಎಂದರೆ ನಮ್ಮ ಕನಸು ಅಥವಾ ಗುರಿಯನ್ನು ತಲುಪಿದ ಹೆಗ್ಗಳಿಕೆÀ, ಹೆಮ್ಮೆ. ಸಂತೋಷವೆಂದರೆ, ನಾವು ಏನಾಗಿದ್ದೇವೋ, ಏನನ್ನು ಪಡೆದಿದ್ದೇವೋ ಅದರಲ್ಲಿ ತೃಪ್ತಿ ಎನ್ನಬಹುದೇ ?
ಸಚಿನ್ ತೆಂಡೂಲ್ಕರ್, ನೂರನೇ ಶತಕ ಪಡೆಯುವುದನ್ನು ಕೊಟ್ಯಾಂತರ ಜನ ಕುತೂಹಲದಿಂದ ಉತ್ಸಾಹಿತರಾಗಿ, ಟೆನ್ಶನ್‍ನಿಂದ ಸಹಾ ನೋಡುತ್ತಾ ಇದ್ದದ್ದು ನೆನಪಿದೆ. ಆತ ಆ ನೂರನೇ ರನ್ ಗಳಿಸಿದಾಕ್ಷಣ, ಜನರಲ್ಲಿ ಎಂಥಹ ಹರ್ಷ, ಹುರುಪು, ಎಲ್ಲರೂ ಕೇಕೆÀ ಹಾಕಿ ಚಪ್ಪಾಳೆ ತಟ್ಟಿ ಕುಣಿದರು. ಇದು ಒಂದು ರೀತಿಯ ಸಂತಸ.
ಸಚಿನ್‍ಗಾದರೆ ಯಶಸ್ಸು, ತಾನು ಅಂದುಕೊಂಡಿದ್ದನ್ನು ಸಾಧಿಸಿದ ಹೆಮ್ಮೆ. ಜೊತೆಗೆ ಸಂತಸ. ಸಕಾರಾತ್ಮಕ ಮನೋಭಾವನೆಗೆ ಸಕಾರಾತ್ಮಕ ಚಿಂತನೆಗಳು ಅವಶ್ಯಕ, ಅದು ಸ್ವಂತ ಜೀವನದಲ್ಲಿರಬಹುದು, ಸಾಮಾಜಿಕ ಜೀವನ ಅಥವಾ ವೃತ್ತಿ ಜೀವನದಲ್ಲಿರಬಹುದು.
ಸಂತೋಷ ಎನ್ನುವುದನ್ನು ಗಳಿಸಲು, ಉಪಯೋಗಿಸಲು, ಸವೆಸಲು, ಅಥವಾ ಸ್ವಂತ ಮಾಡಿಕೊಳ್ಳಲು ಆಗುವುದೇ ? ಪ್ರತಿ ನಿಮಿಷವೂ ಪ್ರೀತಿಯಿಂದ, ಸಮಾಧಾನದಿಂದ, ಕೃತಜ್ಞತಾಪೂರ್ವಕವಾಗಿ ನೆಮ್ಮದಿಯಿಂದಿರುವುದೇ ಸಂತೋಷ. ಬಹಳ ಸಲ ನಕಾರಾತ್ಮಕ ಚಿಂತನೆಗಳು ನಮ್ಮನ್ನು ಅಸಂತೋಷದಿಂದಿರುವಂತೆ ಮಾಡುವುವು.
ನಕಾರಾತ್ಮಕ ಚಿಂತನೆಗಳನ್ನು ಗುರ್ತಿಸಿ, ಅವುಗಳನ್ನು ಸಕಾರಾತ್ಮಕ ಚಿಂತನೆಯಿಂದ ತೊಲಗಿಸಿದಲ್ಲಿ, ನಾವು ಸಂತೋಷದಿಂದಿರುತ್ತೇವೆ. ಸಂತೋಷವೆನ್ನುವುದು ಮನಸ್ಸಿನ ಒಂದು ಭಾವನೆ. ಕಾರು, ಬಂಗಲೆ, ಮೈತುಂಬಾ ಒಡವೆ, ಕೈತುಂಬಾ ಹಣವಿದ್ದರಷ್ಟೆ ನಾವು ಸಂತೋಷದಿಂದಿರಬಲ್ಲೆವು ಎಂದು ಅದನ್ನೆಲ್ಲಾ ಗಳಿಸುವ ಗುರಿಯನ್ನು ಇಟ್ಟುಕೊಂಡು, ಆ ಕ್ಷಣಕ್ಕಾಗಿ ಕಾಯವುದು ಹುಚ್ಚುತನ.  ನಾವು ಏನಾಗಿದ್ದೇವೋ ಅದರಲ್ಲೇ ತೃಪ್ತಿ ಪಟ್ಟುಕೊಂಡು ಈ ಕ್ಷಣದಲ್ಲಿ ಖುಷಿಕಂಡುಕೊಳ್ಳಬೇಕು. ನಮಗಿಂತ ಕಷ್ಟದಲ್ಲಿರುವವರು, ಹಾಗೂ ಏನೂ ಇಲ್ಲದವರನ್ನು ನೋಡಿ ನಾವು ನಮ್ಮ ಸ್ಥಿತಿಯನ್ನು ಪರಿಗಣಿಸಿ ಭಗವಂತನಿಗೆ ಧನ್ಯವಾದವನ್ನರ್ಪಿಸಬೇಕು. ನಮ್ಮ ಮನೋಭಾವ, ನಾವು ಎಲ್ಲವನ್ನು ನೋಡುವ ದೃಷ್ಠಿಯೇ ನಾವು ಸಂತೋಷವಾಗಿರÀಲು ಕಾರಣ.
ಮತ್ತೊಬ್ಬರೊಡನೆ ಹೋಲಿಕೆಬೇಡ, ನಮ್ಮನ್ನು ನಾವು ಪ್ರೀತಿಸೋಣ, ನಮಗೆ ದೇವರು ಕೊಟ್ಟದ್ದನ್ನು,ನಾವು ಪಡೆದದ್ದನ್ನು, ನಮ್ಮ ಯಶಸ್ಸು, ಎಲ್ಲವನ್ನೂ ನೋಡಿ ಸಂತೋಷಿಸೋಣ. ಇತರರಲ್ಲಿರುವುದನ್ನು ನೋಡಿ, ನನಗಿಲ್ಲವಲ್ಲ ಎಂದು ಹಲುಬುವುದನ್ನು ತಡೆಯೋಣ. ಯಶಸ್ವೀ ಪುರುಷರನ್ನು ಕಂಡಾಗ, ನಾನೂ ಸಹ ಯಶಸ್ಸನ್ನು ಪಡೆಯಬಲ್ಲೆ ಅದಕ್ಕಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಚಿಂತನೆ ಮಾಡೋಣ.
ನನ್ನ ಜೀವನವೆ ವ್ಯರ್ಥ, ನನ್ನ ಬದುಕಿನಲ್ಲಿ ಸಾರ್ಥಕತೆಯಿಲ್ಲ, ನಾನು ಯಾವುದನ್ನೂ ಸರಿ ರೀತಿಯಲ್ಲಿ ಮಾಡಲಾರೆ ಎಂಬ ನಕಾರಾತ್ಮಕ ಧೋರಣೆಯಿಂದ ಹೊರಗೆ ಬರೋಣ, ಸೋಲೇ ಗೆಲುವಿನ ಸೋಪಾನ ಎಂಬುದು ಎಲ್ಲರಿಗೂ ತಿಳಿದ ಅಂಶ.
ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಾವು ಸ್ಪರ್ಧೆಯನ್ನೆದುರಿಸಲು ಧೈರ್ಯ ವಹಿಸಬೇಕು. ಯಶಸ್ಸು ಎಂಬುದನ್ನು ಹಂಚಿಕೊಳ್ಳುವ ಮನೋಭಾವ ಬೇಕು. ಯಶಸ್ಸನ್ನು ಗಳಿಸಲು ಜೊತೆ ಜೊತೆಯಾಗಿ ಕೆಲಸ ಮಾಡುವುದನ್ನೂ ಕಲಿಯಬೇಕು.
ಕೆಟ್ಟಗಳಿಗೆ, ಕೆಟ್ಟದ್ದು ಎಂಬುದು ಎಲ್ಲರಿಗೂ ಆಗುವುದು, ಅದನ್ನೇ ವಿಮರ್ಶಿಸುತ್ತಾ, ಅದರಲ್ಲೇ ಲೀನವಾದರೆ ನಮಗೆ ಜಿಗುಪ್ಸೆಯಾಗುವುದು.
ಕೆಟ್ಟದ್ದು, ನೋವು ಕೊಡುವ ಘಟನೆಗಳು, ಎಲ್ಲವೂ ಜೀವನದ ಹರಿವಿನಲ್ಲಿ ಒಂದು ಭಾಗ, ಆದರೆ ಹರಿಯುವ ನದಿಯಂತೆ ಅದನ್ನು ಹರಿಯಲು ಬಿಟ್ಟಲ್ಲಿ. ಅದರ ಜಾಗದಲ್ಲಿ ಹೊಸ ನೀರು ಆವರಿಸುವುದು.
 ಸಂತೋಷ ವೆನ್ನುವುದು ಮನಸ್ಸಿನ ಒಂದು ಭಾವನೆ. ಆ ಭಾವನೆ ಮೂಡಲು ಸಕಾರಾತ್ಮಕ ಚಿಂತನೆ, ಮನೋಭಾವ ಅತ್ಯಗತ್ಯ.
ಜೀವನದಲ್ಲಿ ನಿಜವಾದ ಸಂತೋಷ, ನಿಮಗಿಂತ ಕೆಳದರ್ಜೆಯವರೊಡನೆ ಜೀವಿಸುವುದು. (ಥ್ಯಾಕರೆ)
ಮನಸ್ಸಿಗೆ ಕಾಣುವುದಕ್ಕಿಂತ ಹೆಮ್ಮೆ ಸಂತೋಷ ಲೋಕದಲ್ಲಿದೆ. 
 
Rating
No votes yet

Comments