ಒಳಗುಟ್ಟು

Submitted by hamsanandi on Sun, 09/02/2012 - 04:53

ಡಲೇಕೆ  ಬಡವಾಯ್ತು? ಬಿಳಿಚಿಕೊಂಡಿದೆ ಗಲ್ಲ?                  

ನಡುಗಿಹುದು ಮೈಯೇಕೆ?  ಕೇಳುತಿರೆ ಮನದಿನಿಯ 
ಹುಡುಗಿ "ನಾನಿರುವುದೇ ಹೀಗೆಂದು" ಸಾರಿದಳು
ನಿಡುಸುಯ್ದು ಹೊರಳಿ ಕಂಬನಿಯ ಕಣ್ಮರೆಸುತಲಿ 
 
ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕದಿಂದ) :
 
ಅಂಗಾನಾಮತಿತಾನವಮ್ ಕಥಮಿದಮ್ ಕಂಪಶ್ಚ ಕಸ್ಮಾತ್ಕುತೋ
ಮುಗ್ಧೇ ಪಾಂಡುಕಪೋಲಮಾನನಮಿತಿ ಪ್ರಾಣೇಶ್ವರೇ ಪೃಚ್ಛತಿ
ತನ್ವ್ಯಾ ಸರ್ವಮಿದಮ್ ಸ್ವಭಾವಜಮಿತಿ ವ್ಯಾಹೃತ್ಯ ಪಕ್ಷ್ಮಾಂತರಾ
ವ್ಯಾಪೀ ಭಾಷ್ಪಭರಸ್ತಯಾ ಚಲಿತಯಾ ನಿಶ್ವಸ್ಯ ಮುಕ್ತೋಽಅನ್ಯತಃ
 
-ಹಂಸಾನಂದಿ

 

Comments