'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ

'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ

ನಮ್ಮ ಕನ್ನಡದಲ್ಲಿ 'ಪು' ತುಂಬ ಮುಕ್ಯವಾದುದು. ಇದರಿಂದ ನಾವು ಕೆಲಸದೊರೆ/ಕ್ರಿಯಾಪದವನ್ನ ಹೆಸರೊರೆ/ನಾಮಪದವನ್ನಾಗಿಸುವಾಗ ತುಂಬ ಬಳಕೆಗೆ ಬರುತ್ತೆ.
ಗಮನಿಸಿ. ಕನ್ನಡ ಕೆಲಸದೊರೆಗೆ ಬೆಲೆ ಕೊಡುವ ನುಡಿ(ಇದರ ಬಗ್ಗೆ ತಿಳಿದುಕೊಳ್ಳಲು ಶಂಕರಬಟ್ಟರ ಹೊತ್ತಿಗೆಗಳನ್ನು ಓದಿ). ನಮಗೆ ಆಗಾಗ ನಾಮಪದಿಸುವಿಕೆ ಮಾಡುವಾಗ ತಬ್ಬಿಬ್ಬಾಗುತ್ತೇವೆ. ಈ ಕೊರತೆಯನ್ನು ನೀಗಿಕೊಳ್ಳಲು ನಾವು ಕೆಲಸದೊರೆಗೆ ಕೊನೆಯಲ್ಲಿ 'ಪು' ಸೇರಿಸಿ ಸಲೀಸಾಗಿ ಹೆಸರೊರೆಯ ರೂಪಕ್ಕೆ ಇಳಿಸಬಹುದು.

 ಇದಕ್ಕೆ ಈಗಾಗಲೆ ಇರುವ ಹಲವು ಮಾದರಿಗಳು ಇಂತಿವೆ:-

ಕೆಲಸದೊರೆ -> ಹೆಸರೊರೆಯ ರೂಪ

ನೆನೆ -> ನೆನಪು
ನೆರ್ -> ನೆರ್ಪು-> ನೆಪ್ಪು(ಪರಿಚಯ) ಮಾದರಿ: ಈ ಊರಲ್ಲಿ ನೆಪ್ಪಿನವರಿಲ್ಲ
ಸಯ್ -> ಸಯ್ಪು (ಸಯ್ ಪು)
ಹೊಳೆ -> ಹೊಳಪು
ತಣ್ -> ತಂಪು
ನೋನ್ -> ನೋಂಪು
ಕೆನ್  -> ಕೆಂಪು
ಬರೆ -> ಬರೆಪು
ಜೋಮ್ -> ಜೋಂಪು,ಜೊಂಪು
ತಿರುಗ್ -> ತಿರುಪು(screw) -> ತಿರುವು(cross)
ನುಣ್ -> ನುಣುಪು
ಮರೆ -> ಮರೆಪು -> ಮರೆವು
ಇನ್ -> ಇಂಪು
ಸೊನ್(?) -> ಸೊಂಪು
ಅಡ -> ಅಡಪು -> ಆಡವು (ಒತ್ತೆಯಿಡು)
ಅದ್ -> ಅದುಪು -> ಅದುಕು
ಇಮ್ -> ಇಂಪು
ಉಡು -> ಉಡುಪು
ಉರಿ -> ಉರಿಪು
ಎರ -> ಎರಪು -> ಎರವಲು
ತೆರೆ -> ತೆರಪು(opener) -> ತೆರೆವು(vacate)
ಕರ್ -> ಕರ್ಪು -> ಕಪ್ಪು
? -> ಕದಪು(?)
ಒರ್ -> ಒರ್ಪು -> ಒಪ್ಪು
ಮುಡಿ-> ಮುಡಿಪು, ಮುಡುಪು (ಮೀಸಲು)
ನೆರೆ -> ನೆರೆಪು(ಸಂಗ್ರಹ)
ಒಳ್ -> ಒಳ್ಪು (ಯೋಗ್ಯತೆ,ತಕ್ಕುಮೆ)
ಪದ -> ಪದಪು(ಹೆಬ್ಬಯಕೆ,ಬೆಡಗು,ಸಂತಸ)
ಹರಿ -> ಪರೆಪು-> ಹರೆವು( ಪ್ರಸಾರ, ವಿಸ್ತಾರ)

ಅಱು -> ಅಱುಪು -> ಅರುಹು(communicate)
ಕುಱುಪು -> ಕುರುಹು -> ಕುರುವು (ಗುರುತು)

ಇಲ್ಲಿ ಕೆಲವು ಹೊಸಗನ್ನಡದಲ್ಲಿ  ಪು-->ಹು-->ವು ಗೆ ಮಾರ್ಪಾಗಿವೆ. ಅದರ ಜೊತೆಗೆ ವಸಿ ಅವುಗಳ ಅರಿತದಲ್ಲಿ ಬದಲಾವಣೆಯಾಗಿದೆ.

'ಪು' ವಿನ ಪೆರ್ಮೆ(ಹೆಮ್ಮೆ) ಇಶ್ಟೆ ಅಲ್ಲ...ಇನ್ನು ಇದೆ

ಈಟೆಲ್ಲ ಆದ್ಮೇಲೆ ಚರ್ --> ಚರಪು ಕನ್ನಡದ್ದೆ ಆಗಿರಬೇಕಲ್ವ?  :)

Rating
No votes yet

Comments