ಕಪೋತಗಿರಿ - ನೀವು ಜೀವನದಲ್ಲೆಮ್ಮೆ ನೋಡಲೇಬೇಕಾದ ತಾಣ

ಕಪೋತಗಿರಿ - ನೀವು ಜೀವನದಲ್ಲೆಮ್ಮೆ ನೋಡಲೇಬೇಕಾದ ತಾಣ

 ಕಪೋತಗಿರಿ - ನೀವು ಜೀವನದಲ್ಲೆಮ್ಮೆ ನೋಡಲೇಬೇಕಾದ ತಾಣ

ದೇವರ ಬಗ್ಗೆ ಅದರಲ್ಲೂ ಮೂರ್ತಿಪೂಜೆಯ ಬಗ್ಗೆ ನನ್ನ ಆಸಕ್ತಿ ಬಹಳಕಡಿಮೆ. ಹಾಗೆಂದ ಮಾತ್ರಕ್ಕೆ ದೇವರಿಲ್ಲವೆಂದು ನಾನು ಕಡಾಖಂಡಿತವಾಗಿ ಹೇಳಲಾರೆ. ನನ್ನ ಪ್ರಕಾರ ನಿಸರ್ಗವೇ ದೇವರು (ಅದು ಎಲ್ಲವನ್ನೂ ಕೊಡುತ್ತದೆ, ಎಲ್ಲವನ್ನೂ ಸಹಿಸುತ್ತದೆ, ಏನನ್ನೂ ನಮ್ಮಿಂದ ನಿರೀಕ್ಷಿಸುವುದಿಲ್ಲ). ಕಪೋತಗಿರಿಗೂ ದೇವರಿಗೂ ಏನು ಸಂಬಂಧ ಎನ್ನುವಿರಾ? ಆ ಗಿರಿಯ ತುತ್ತ ತುದಿಯಲ್ಲೇ ನನಗೆ ದೇವರ ಇರವಿನ ಅನುಭವ ಹಾಗೂ ಅನುಭಾವವಾದದ್ದು. ಆಲ್ಲಿ ಹೋದವರಿಗೆಲ್ಲಾ ದೇವರ ಇರವಿನ ಅರಿವಾಗುತ್ತದೆಯೆಂದೂ ನಾನೂ ಹೇಳಲಾರೆ. ಖಂಡಿತವಾಗಿಯೂ ಅದೊಂದು ಅವಿಸ್ಮರಣೀಯ ಅನುಭವಗಾಗುವುದರಲ್ಲಿ ಸಂದೇಹವೇ ಇಲ್ಲ. ಕಪೋತಗಿರಿಯನ್ನು ದಕ್ಷಿಣ ಭಾರತದ ಶಿಮ್ಲಾ ಎಂದೂ ಕರೆಯುವರು. ಶಿಮ್ಲಾದಂತೆ ಇಲ್ಲಿ ಮಂಜಿರುವುದೆಂದು ನೀವು ಊಹಿಸಿದರೆ, ನಿಮ್ಮ ಊಹೆ ತಪ್ಪು. ಆದರೆ ನನಗೆ ಇಲ್ಲಿ ಶಿಮ್ಲಾದಲ್ಲಿಯೂ ಆಗದ ದೈವಾನುಭವವಾಯಿತು. ಅಲ್ಲಿ ನಾವು ಹೋಗಿದ್ದುದರ ಉದ್ದೇಶವೇ ಬೇರೆ.

 

ಕಪೋತಗಿರಿ - ನನಗೆ ಭಗವಂತನನ್ನು ನೋಡಿದ ಅನುಭವವಾದ ಸ್ಥಳ (ಮುಂದುವರೆದಿದೆ)
ನಾನು ಕಪ್ಪತ್ತಗುಡ್ಡದ ಬಗ್ಗೆ ಎಷ್ಟೇ ಹೇಳಿದರೂ ಅದು ನೀವು ನೋಡಿದ ಅನುಭವವಾಗುವುದಿಲ್ಲ. ಭಗವಂತನ ಸಾಕ್ಷಾತ್ಕಾರವಾದವರು ಅದರ ಬಗ್ಗೆ ಎಷ್ಟೇ ಹೇಳಿದರೂ ನಾವೇ ಭಗವಂತನನ್ನು ನೋಡಿದ ಹಾಗಾಗುವುದಿಲ್ಲ. ಕಪ್ಪತ್ತಗುಡ್ಡವೂ ಹಾಗೆಯೇ. It has to be experienced personally on our own. ನನ್ನ ಮನಸ್ಸು ದಿನದ ಪ್ರತಿ ಕ್ಷಣವೂ ಆ ಅನಿರ್ವಚನೀಯ ಅಪರಿಮಿತ ಅನಂತ ದೈವಾನುಭೂತಿಗೆ ಹಾತೊರೆಯುತ್ತದೆ. ನನ್ನ ಅನುಭವವನ್ನು ಕೇಳಿ ನೀವೂ ಸಹ ಕಪೋತಗಿರಿಗೆ ಪರಮಾತ್ಮನನ್ನು ನೋಡಲು ಹೋಗಬಯಸಿದರೆ ಅದು ನನ್ನ ಭಾಗ್ಯ. ನಿಮಗೆ ಅಲ್ಲಿ ಅವನ ಅನುಭವವಾಗದಿದ್ದರೂ ಸಹ ಖಂಡಿತವಾಗಿಯೂ ಯಾವುದೋ ಅಲೌಕಿಕ ಅನುಭವವಾಗುವಾಗುವುದರಲ್ಲಿ ಸಂದೇಹವೇ ಇಲ್ಲ. In-spite of being an atheist, i could feel the absolute bliss. Let me share more about it later.

ಕಪೋತಗಿರಿಯ ಮತ್ತೊಂದು ವಿಶೇಷವೆಂದರ ಅದರ ತುತ್ತ ತುದಿಯಲ್ಲಿ ಗಾಳಿಯು ಏಷ್ಯಾ ಖಂಡದಲ್ಲೇ ಅತ್ಯಂತ ವೇಗವಾಗಿ ಚಲಿಸುವ ದಾಖಲೆಗಳಿವೆ; ಆದಕಾರಣ ಅಲ್ಲಿ ಅತೀ ಹೆಚ್ಚು windmills ಗಳನ್ನು ಕಾಣಬಹುದಾಗಿದೆ. ಅಲ್ಲಿನ ರಕ್ಷಕರೆಂಬಂತೆ ನಂದಿವೇರಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು. ೧ ಲಕ್ಷ ಹೇಕ್ಟೇರ್ ಪ್ರದೇಶದ ಜೀವಸಂಕುಲಗಳ ರಕ್ಷಣೆಗೆ ಕಂಕಣಕಟ್ಟಿ ಅವಿರತ ವಿರಮಿಸದೆ ಶ್ರಮಿಸುತ್ತಿದ್ದಾರೆ. ಅವರ ಶ್ರಧ್ದೆಗೆ, ಶ್ರಮಕ್ಕೆ, ಧೈರ್ಯಕ್ಕೆ, ಕಾಳಜಿಗೆ, ..... ನನ್ನ ಅನಂತ ನಮನಗಳು. ಅವರಿಂದಾಗಿ ಅಳಿವಿನಂಚಿ

ನಿಗೆ ಬಂದು ನಿಂತಿದ್ದ ಅಸಂಖ್ಯ ಸಸ್ಯಗಳು ಉಳಿದು ಸ್ವಾಭಾವಿಕವಾಗಿ ಬೆಳೆಯುತ್ತಿವೆ ಕಪೋತಗಿರಿಯಲ್ಲಿ. ಕಪೋತಗಿರಿಗೆ ಆ ಹೆಸರು ಬರಲು ಕಾರಣ ಅಲ್ಲಿ ಈ ಹಿಂದೆ ಅಸಂಖ್ಯ ಪಾರಿವಾಳಗಳಿದ್ದದ್ದು. ಅದೇಕೋ ಈಗ ಅಲ್ಲಿ ಅವುಗಳ ಸುಳಿವೇ ಇಲ್ಲ. ಕಾರಣ ತಿಳಿಯದಾಗಿದೆ. ಸಂಸ್ಕೃತದಲ್ಲಿ 'ಕಪೋತ' ಎಂದರೆ ಪಾರಿವಾಳ ಎಂದರ್ಥ. ಪಾರಿವಾಳಗಳಿದ್ದ ಗಿರಿಯೇ ಕಪೋತಗಿರಿಯಾಗಿದೆ. ಅಲ್ಲಿನ ಮತ್ತೊಂದು ವಿಶೇಷ ಅಲ್ಲಿರುವ ಅಸಂಖ್ಯ ದೂಪದ ಮರಗಳು. ಈ ದೂಪದ ಮರಗಳಿಗೂ ಪಾರಿವಾಳಗಳಿಗೂ ಇರುವ ಸಂಬಂಧ ಬಲು ವಿಚಿತ್ರವಾಗಿದ್ದರೂ ಸತ್ಯ. These pigeons are specially referred as "Imperial pigeons". ಆ ಸಂಬಂಧದ ಬಗ್ಗೆ ಮುಂದೆ ಬರೆಯುವೆ. ನಿರೀಕ್ಷಿಸಿ
 
 
 
ಕಪೋತಗಿರಿ - (ಮುಂದುವರೆದಿದೆ): ದೂಪದಮರ ಮತ್ತು ಇಂಪೀರಿಯಲ್ ಪಾರಿವಾಳಗಳ ನಡುವಣ ಸಂಬಂಧ.

ಪಾರಿವಾಳಗಳದ್ದು ಹಾಗೂ ದೂಪದಮರಗಳದ್ದು ಜನ್ಮಾಂತರಗಳ ನಂಟು. ದೂಪದಮರದ ಬೀಜ ಮೊಳಕೆಯೊಡೆಯಬೇಕೆಂದರೆ, ಅದರ ಹಣ್ಣನ್ನು ಪಾರಿವಾಳಗಳು ತಿಂದು ಅದರ ಬೀಜಗಳು ಅವುಗಳ ಜೀರ್ಣನಾಳದ ಮೂಲಕ ಹಾದು ಬರಲೇಬೇಕು. ಇಲ್ಲದಿದ್ದರೆ ಅವು ಮೊಳಕೆಯೊಡೆಯುವ ಪ್ರಮಾಣ ಬಹಳ ಕಡಿಮೆ. ಇದು ನಾನು ಪರೀಕ್ಷಿಸಿದ ಮಾತಲ್ಲ. ನಮ್ಮ ಪದವಿ ತರಗತಿಯಲ್ಲಿ ಪ್ರದೀಪ್ ಕೆಂಜಿಗೆಯವರು (ನಮ್ಮ ಗುರುಗಳು) ಹೇಳಿದ್ದು. ಹಕ್ಕಿಗಳ ಉದರದಲ್ಲಿ ಯಾವ ಾರ್ಮೋನ್ ಇದೆಯೋ? ಭಗವಂತನೇ ಬಲ್ಲ.


 
 
 
 

 

Comments