ಶಿಕ್ಷಕರ ದಿನಾಚರಣೆ ಎಂದರೇನಮ್ಮ ?
೧೯೬೨ ನೇ ಇಸವಿಯಿಂದ "ಶಿಕ್ಷಕರ ದಿನಾಚರಣೆ" ಯು ಭಾರತದಲ್ಲಿ ಆಚರಣೆಯಲ್ಲಿದೆ. ಶಿಕ್ಷಕರ ದಿನವಾದ ಸೆಪ್ಟೆಂಬರ್ ೫ ದನೇ ತಾರೀಖು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ ಕೂಡ ಎಂಬುದು ಎಲ್ಲರಿಗೂ ತಿಳಿದ ವಿಷಯ. ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಒಬ್ಬ ತತ್ವಜ್ಞಾನಿ, ಅತ್ಯುತ್ತಮ ಶಿಕ್ಷಕ ಹಾಗು ನಮ್ಮ ಈ ದೇಶದ ಶಿಕ್ಷಣದ ವ್ಯವಸ್ಥೆಗೆ ಇವರ ಕೊಡುಗೆ ಅಪಾರವಾದುದು. ಸ್ವತಂತ್ರ ಭಾರತದ ಮೊಟ್ಟಮೊದಲ ಉಪರಾಷ್ಟ್ರಪತಿ ಹಾಗು ಭಾರತದ ಎರಡನೇ ರಾಷ್ಟ್ರಪತಿ ಯಾಗಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ 'ಭಾರತಿಯ ತತ್ವಜ್ಞಾನ' ವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ತಂದವರು. ಒಮ್ಮೆ ಡಾ.ರಾಧಾಕೃಷ್ಣನ್ ರವರ ಕೆಲವು ವಿದ್ಯಾರ್ಥಿಗಳು ಹಾಗು ಸ್ನೇಹಿತರು ಡಾ.ರಾಧಾಕೃಷ್ಣನ್ ರವರ ಹುಟ್ಟುಹಬ್ಬವನ್ನು ಆಚರಿಸಲು ಅವರ ಅನುಮತಿ ಪಡೆಯಲು ಹೋದಾಗ ಅವರು 'ನನ್ನ ಜನ್ಮದಿನ ಆಚರಿಸುವ ಬದಲು, ಶಿಕ್ಷಕರ ದಿನ ವೆಂದು ಆಚರಿಸಿ, ಅದಕ್ಕಿಂತ ಹೆಮ್ಮೆ ಹಾಗು ಗೌರವ ಬೇರೊಂದಿಲ್ಲ ನನಗೆ' ಎಂದರಂತೆ. ಅಂದಿನಿಂದ ಇಂದಿನವರೆಗೆ ಸೆಪ್ಟೆಂಬರ್ ೫ ದನೇ ತಾರೀಖು ಶಿಕ್ಷಕರ ದಿನಾಚರಣೆ ಯಾಗಿ ನಡೆದುಬಂದಿದೆ.
ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ -
http://www.uramamurthy.com/srk_phil.html
http://en.wikipedia.org/wiki/Sarvepalli_Radhakrishnan
Comments
ಉ: ಶಿಕ್ಷಕರ ದಿನಾಚರಣೆ ಎಂದರೇನಮ್ಮ ?
ಉ: ಶಿಕ್ಷಕರ ದಿನಾಚರಣೆ ಎಂದರೇನಮ್ಮ ?
In reply to ಉ: ಶಿಕ್ಷಕರ ದಿನಾಚರಣೆ ಎಂದರೇನಮ್ಮ ? by suma kulkarni
ಉ: ಶಿಕ್ಷಕರ ದಿನಾಚರಣೆ ಎಂದರೇನಮ್ಮ ?
In reply to ಉ: ಶಿಕ್ಷಕರ ದಿನಾಚರಣೆ ಎಂದರೇನಮ್ಮ ? by ಭಾಗ್ವತ
ಉ: ಶಿಕ್ಷಕರ ದಿನಾಚರಣೆ ಎಂದರೇನಮ್ಮ ?
ಉ: ಶಿಕ್ಷಕರ ದಿನಾಚರಣೆ ಎಂದರೇನಮ್ಮ ?