ಮಾನ್ಯ ಮಂತ್ರಿಗಳು ಮತ್ತು ಪುಟ್ಬಾಲ್ ಆಟ - ಜಮಾನಾದ ಜೋಕುಗಳು ೧೯

ಮಾನ್ಯ ಮಂತ್ರಿಗಳು ಮತ್ತು ಪುಟ್ಬಾಲ್ ಆಟ - ಜಮಾನಾದ ಜೋಕುಗಳು ೧೯

        ಒಮ್ಮೆ ಮಂತ್ರಿಯೊಬ್ಬರು ಹೊಸದಾಗಿ  ಕಾಲ್ಚೆಂಡು (ಪುಟ್ಬಾಲ್) ಆಟನೋಡಲು ಹೋದರು. ಮಂತ್ರಿಗಳು ಬಂದ ಹುರುಪಿನಲ್ಲಿ ಎರಡೂ ಟೀಮಿನವರು ಬಹಳ ಉತ್ಸಾಹದಿಂದ ಆಟ ಆಡಿದರು. ಚೆಂಡನ್ನು ಈ ಕಡೆಯಿಂದ ಆ ಕಡೆಗೆ ಒದೆಯುವುದೇನು ಮತ್ತು ಗೋಲ್ ಹೊಡೆಯುವುದೇನು ಅದನ್ನು ನೋಡಿಯೇ ಆನಂದಿಸಬೇಕು , ಅಷ್ಟು ಚೆನ್ನಾಗಿ ಆಟವಾಡಿದರು. ಆಟ ಮುಗಿದ ಮೇಲೆ ಸ್ಕೂಲಿನ ಮುಖ್ಯ ಉಪಾಧ್ಯಾಯರು ಮಂತ್ರಿಗಳನ್ನು ಕೇಳಿದರು, "ಸ್ವಾಮಿ, ನಮ್ಮ ಹುಡುಗರ ಆಟ ಹೇಗಿದೆ?" ಮಂತ್ರಿ ಮಹೋದಯರು ಹೀಗೆ ನುಡಿದರು, "ಅಲ್ಲಾ ನಮ್ಮ ದೇಶದ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ನೋಡಿ, ಒಂದು ಚೆಂಡಿಗಾಗಿ ಎರಡು ಗುಂಪಿನವರು ಹೊಡೆದಾಡಿಕೊಳ್ಳುತ್ತಿದ್ದರೆ ಮಿಕ್ಕವರು ಅವರನ್ನು ನೋಡಿ ಹೋ ಎಂದು ಕಿರಿಚುತ್ತಿದ್ದರು, ನನಗಂತೂ ಮನಸ್ಸಿಗೆ ಬಹಳ ಬೇಜಾರಾಯಿತು, ನಿಮ್ಮ ಸ್ಕೂಲಿನ ಪ್ರತಿಯೊಬ್ಬರಿಗೂ ಒಂದೊಂದು ಚಂಡು ತರಿಸಿಕೊಡಲು ಹಣಕಾಸಿನ ನೆರವಿಗಾಗಿ ಸರ್ಕಾರಕ್ಕೆ ಇವತ್ತೇ ಪತ್ರ ಬರೆಯುತ್ತೇನೆ!". 

 
ಚಿತ್ರಕೃಪೆ:
 
http://www.google.co.in/imgres?hl=en&sa=X&biw=2732&bih=1179&tbm=isch&prmd=imvns&tbnid=rEwT30DpvndADM:&imgrefurl=http://cartoondisneypics.blogspot.com/2011/03/cartoon-soccer.html&imgurl=http://www.ubikartun.com/images/cartoon_football.gif&w=400&h=283&ei=xgpCUMrkMu-ZiQfQnoDAAw&zoom=1&iact=hc&vpx=1516&vpy=258&dur=751&hovh=190&hovw=268&tx=148&ty=104&sig=110207964646523070807&page=1&tbnh=78&tbnw=112&start=0&ndsp=156&ved=1t:429,r:40,s:0,i:257
 

 

Rating
No votes yet

Comments