ನ‌ಂಬಿಕೆ ಮತ್ತು ನ್ಯಾಯ‌

ನ‌ಂಬಿಕೆ ಮತ್ತು ನ್ಯಾಯ‌

ಕವನ

 



ಕೆಂಬಾವುಟ ಹಿಡಿದವರನ್ನ


ಕಂಡು ಟೀಕಿಸುವವರನ್ನ


ಕೇಳುತ್ತೇನೆ....


ನಿಮಗನ್ನಿಸುವುದೇನು?


ಹೇಳುತ್ತಾರವರು


ಕಲಸವಿಲ್ಲದವರವರು....!


 



ಬಿಗಿಕೈಗಳಲ್ಲಿ ಮೊಗು


ಬಾಯಿಗಳನ್ನ ಬಂಧಿಸಿದೊಡನೆ


ಉಸಿರ ನಂಬುತ್ತಾರೆ


ಹಾಗೆಯೇ ತಾನೆ


ನ್ಯಾಯದ ಕೈಗಳಲ್ಲಿ ಅನ್ಯಾಯದ


ಕೈಗಳ ಬಂಧನವಾಗುವವರೆಗೆ


ನ್ಯಾಯದ ಅರಿವಾಗುವುದಾದರೊ ಹೇಗೆ?

Comments