ಹತ್ಯೆ - ಜ್ಞಾನ

ಹತ್ಯೆ - ಜ್ಞಾನ

ಕವನ


ಜೀವನದ
ಜಿಗುಪ್ಸೆಯಿಂದ,
ತಾನಾಗಿಯೆ
ಬರುವ ಮುನ್ನ
ತಂದುಕೊಳ್ಳುವ
ಸಾವು,  
ಆತ್ಮಹತ್ಯೆ
ಎಂದಾದರೆ..?

ಜೀವನದ
ಸಾರ್ಥಕತೆಗಾಗಿ,
ಇಹದೊಳಗೆ
`ನನ್ನ`ತನವ ನಾಶ
ಮಾಡಿಕೊಂಡಾಗಿನ
ಸಾವು,
ಆತ್ಮಜ್ಞಾನ
ಎನಿಸುತ್ತದೆ....!!??


 

Comments