ಅವನ ನೆನಪಾಯಿತು

ಅವನ ನೆನಪಾಯಿತು

ಕವನ

ಚೈತ್ರದ ಚಿಗುರನು ಕಂಡು
ವಸಂತ ಬಂದರೂ ಬರದ
ಅವನ ನೆನಪಾಯಿತು||||
 
ಮರದ ಮೇಲಿನ ಜೋಡಿ ಹಕ್ಕಿಗಳು
ನಿನ್ನ ಜೋಡಿ ಎಲ್ಲೆಂದು ಕೇಳಲು
ಅವನ ನೆನಪಾಯಿತು ||||
 
ಬಳ್ಳಿ ಬಳ್ಳಿಯಲಿ ಅರಳಿದ ಹೂಗಳು
ನಿನ್ನ ನಗುವು ಎಲ್ಲೆಂದು ಕೇಳಲು
ಅವನ ನೆನಪಾಯಿತು ||||
 
ಮುಂಜಾವಿನಲಿ ಮುಸ್ಸಂಜೆಯಲಿ
ಬಿಸಿಲಿನಲ್ಲಿ ಬೆಳದಿಂಗಳಿನಲ್ಲಿ
ಅವನ ನೆನಪಾಯಿತು ||||
 
ಪ್ರತಿ ಹೆಜ್ಜೆಗೂ ಪ್ರತಿ ಉಸಿರಿಗೂ
ಹೃದಯದ ಪ್ರತಿ ಬಡಿತಕೂ
ಅವನ ನೆನಪಾಯಿತು ||||
 
ಮಳೆ ಹನಿಗಳು ನನ್ನ ಕಣ್ಣುಗಳಿಂದ ಇಳಿಯಲು
ಕೊರೆಯುವ ಚಳಿಯಲಿ ಕೊರಗುವ ಮನಕೆ
ಅವನ ನೆನಪಾಯಿತು ||||
 
ಅವನ ನೋಡುವ ಆಸೆ ಅಮಿತವಾಗಿ
ನನ್ನನೇ ನಾನು ಮರೆತಾಗ
ಅವನ ನೆನಪಾಯಿತು ||||
 
    - ಪ್ರಮಿತ
      ೦೪/೦೪/೨೦೦೭
 



 

Comments